Viral: ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಕುಳಿತ ಸ್ಪೈಡರ್ ಮ್ಯಾನ್
ಸ್ಪೈಡರ್ ಮ್ಯಾನ್ ವೇಷವನ್ನು ಧರಿಸಿದ ಯುವಕನೊಬ್ಬ ಗಾರೆ ಕೆಲಸ ಮಾಡಿದಂತಹ, ಅಡುಗೆ ಮಾಡಿದಂತಹ, ಹಿರಿಯರಿಗೊಬ್ಬರಿಗೆ ರಸ್ತೆ ದಾಟಲು ಸಹಾಯ ಮಾಡಿದಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಸ್ಪೈಡರ್ ಮ್ಯಾನ್ ವೇಷ ಧರಿಸಿದ ಯುವಕನೊಬ್ಬ ರೈಲ್ವೆ ನಿಲ್ದಾಣದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾನೆ. ಈ ಫನ್ನಿ ದೃಶ್ಯ ಕಂಡು ಅಯ್ಯೋ ದೇವರೇ… ಸ್ಪೈಡರ್ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತು ತಮಾಷೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಈಗಿನ ಯುವ ಜನತೆ ಚಿತ್ರ ವಿಚಿತ್ರ ಅವತಾರಗಳನ್ನು ತಾಳುತ್ತಿರುತ್ತಾರೆ. ಕೆಲವರು ವಿಚಿತ್ರ, ಡಾನ್ಸ್, ಡೈಲಾಗ್ಸ್ ಮೂಲಕ ಮುನ್ನೆಲೆಗೆ ಬಂದ್ರೆ ಇನ್ನೂ ಕೆಲವರು ತಮ್ಮ ವಿಚಿತ್ರ ಅವತಾರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸ್ಪೈಡರ್ ಮ್ಯಾನ್ ವೇಷಧಾರಿಗಳ ವಿಡಿಯೋಗಳಂತೂ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ಸ್ಪೈಡರ್ ಮ್ಯಾನ್ ವೇಷವನ್ನು ಧರಿಸಿದ ಯುವಕನೊಬ್ಬ ಟೆರೇಸ್ ಮೇಲೆ ಕುಳಿತು ಅಡುಗೆ ಮಾಡಿದಂತಹ, ಹಿರಿಯರಿಗೊಬ್ಬರಿಗೆ ರಸ್ತೆ ದಾಟಲು ಸಹಾಯ ಮಾಡಿದಂತಹ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಇಲ್ಲೊಬ್ಬ ಸ್ಪೈಡರ್ ಮ್ಯಾನ್ ವೇಷಧಾರಿ ರೈಲ್ವೆ ನಿಲ್ದಾಣದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾನೆ. ಈ ವಿಡಿಯೋವನ್ನು ಆತ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಅಯ್ಯೋ ದೇವರೇ… ಸ್ಪೈಡರ್ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತು ತಮಾಷೆ ಮಾಡಿದ್ದಾರೆ.
ರೀಲ್ಸ್ ಮಾಡಿ ಫೇಮಸ್ ಆಗುವ ಸಲುವಾಗಿ ಎಂತೆಂತಹ ಹುಚ್ಚು ಸಾಹಸಕ್ಕೂ ಕೈ ಹಾಕುವವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ರೀಲ್ಸ್ ವಿಡಿಯೋಗಾಗಿ ಸ್ಪೈಡರ್ ಮ್ಯಾನ್ ವೇಷ ಧರಿಸಿ ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾನೆ. ನಂತರ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (shaddyman98) ಖಾತೆಯಲ್ಲಿ ಶೇರ್ ಮಾಡಿದ್ದಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಪೈಡರ್ ಮ್ಯಾನ್ ವೇಷ ಧರಿಸಿದ ಯುವಕ ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಕುಳಿತು ಹಣ ಕೊಡಿ ಸ್ವಾಮಿ ಎಂದು ಕೈ ಚಾಚಿ ಭಿಕ್ಷೆ ಬೇಡುತ್ತಿರುವ ಫನ್ನಿ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಆಟೋಗೆ ಆಫೀಸ್ ಚೇರ್ ಫಿಟ್ ಮಾಡಿದ ಚಾಲಕ; ಫೋಟೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯಯ್ಯೋ ಸ್ಪೈಡರ್ ಮ್ಯಾನ್‌ನ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆಯೇʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼ ಸ್ಪೈಡರ್ ಮ್ಯಾನ್‌ಗೆ ಇದೆಂಥಾ ಪರಿಸ್ಥಿತಿ ಬಂತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ