
ಈ ಬೆಂಗಳೂರಿನ ಟ್ರಾಫಿಕ್ನದ್ದು (Bengaluru traffic) ಒಂದಲ್ಲ ಒಂದು ಗೋಳು, ಪ್ರತಿದಿನ ಬೆಂಗಳೂರು ಟ್ರಾಫಿಕ್ ಟ್ರೋಲ್ ಆಗುತ್ತಲೇ ಇರುತ್ತದೆ. ಇದು ಇಲ್ಲಿನ ಜನರ ಪ್ರತಿದಿನದ ಸಮಸ್ಯೆಯಾಗಿದೆ. ಬೆಂಗಳೂರು ಟ್ರಾಫಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೆ ಬೆಂಗಳೂರು ಟ್ರಾಫಿಕ್ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಈ ಪೋಸ್ಟ್ ನೋಡಿ. ಇನ್‌ಸ್ಟಾಗ್ರಾಮ್ ಪೋಸ್ಟ್ವೊಂದು ಭಾರೀ ಸದ್ದು ಮಾಡುತ್ತಿದೆ. ಈ ಪೋಸ್ಟ್ ಭಾರೀ ತಮಾಷೆಯಾಗಿದ್ದರು ಕೂಡ ಇದು ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ಅನಾವರಣ ಮಾಡುತ್ತಿದೆ. ದುಬೈಗೆ ಹೋಗುವ ತನ್ನ ಸ್ನೇಹಿತನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವಾಗ ಟ್ರಾಫಿಕ್ ಸಿಕ್ಕಿದೆ. ಸ್ನೇಹಿತ ದುಬೈ ತಲುಪಿದರೂ ಟ್ರಾಫಿಕ್ ಮಾತ್ರ ಕ್ಲಿಯರ್ ಆಗಿಲ್ಲ
ಎಂದು ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಇನ್ಸ್ಟಾ ಖಾತೆಯ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಅನೇಕರು ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿಂದ ಈ ಪೋಸ್ಟ್ ವೈರಲ್ ಆಗಲು ಶುರುವಾಗಿದೆ. ಅನೇಕರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇಲ್ಲೊಬ್ಬ ಬಳಕೆದಾರ ಇದು ಸುಳ್ಳು ನಿಜವಲ್ಲ. ವಿಮಾನ ನಿಲ್ದಾಣಕ್ಕೆ 3 ಗಂಟೆಗಳ ಮೊದಲು ಮನೆಯಿಂದ ಹೊರಡುತ್ತಾರೆ ಮತ್ತು ದುಬೈಗೆ ಹೊರಡಲು ವಿಮಾನವು ಸುಮಾರು 3.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಒಟ್ಟು 6.5 ಗಂಟೆಗಳು. 6.5 ಗಂಟೆಗಳಲ್ಲಿ ನೀವು ಹೆಬ್ಬಾಳ, ಮಾರತಹಳ್ಳಿ, HSR, ಇ-ಸಿಟಿ, ಸಿಲ್ಕ್ ಬೋರ್ಡ್, CBD ಅನ್ನು ಹಾದು ಹೆಬ್ಬಾಳಕ್ಕೆ ಹಿಂತಿರುಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಸುಮಾರು 45 ನಿಮಿಷಗಳಲ್ಲಿ ಸುಮಾರು 20 ಕಿ.ಮೀ. ಪ್ರಯಾಣಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಂಟು ಆರೋಗ್ಯವಂತ ಶಿಶುಗಳಿಗೆ ಐವಿಎಫ್ ಮೂಲಕ ಜನ್ಮ ನೀಡಿದ ಮಹಿಳೆ
ಕೆಲವೊಂದು ಜನ ಈ ಪೋಸ್ಟ್ಗೆ ಹೆಚ್ಚಿನ ಸಹಮತ ನೀಡಿಲ್ಲ, ಕೆಲವರು ಹೌದು ಎಂದು ಹೇಳಿದ್ದಾರೆ. ಈ ಪೋಸ್ಟ್‌ನ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ತುಂಬಾ ಅಪಹಾಸ್ಯಕಾರಿಯಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪೋಸ್ಟ್ ತಮಾಷೆಯಾಗಿದೆ, ಆದರೆ ದುರದೃಷ್ಟವಶಾತ್ ನಿಜ ಎಂದು ಕರೆದಿದ್ದಾರೆ. ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ ಮೆಟ್ರೋ ಪ್ರವೇಶದೊಂದಿಗೆ ಡಬಲ್ ಡೆಕ್ಕರ್ ಫ್ಲೈಓವರ್ ಅಲ್ಲಿಯೂ ಬರಬಹುದಲ್ಲ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ