ಮೈಸೂರು ಅರಮನೆಯ ದೀಪಾಲಂಕಾರವನ್ನು ನೋಡುವುದೇ ಚೆಂದ. ಅದರಲ್ಲೂ ದಸರಾ ಸಮಯದಲ್ಲಿ ಇಡೀ ಅರಮನೆ, ಬೀದಿ-ಬೀದಿಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾದದಿಂದ ಕಂಗೊಳಿಸುತ್ತಿರುತ್ತದೆ. ಈ ದೀಪಾಲಂಕಾರವನ್ನು ನೋಡಲೆಂದೇ ಹಲವಾರು ಜನ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ನೀವು ಕೂಡಾ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿಯ ವೇಳೆ ಅರಮನೆಯ ಗುಮ್ಮಟದ ಮೇಲೆ ಕೆಂಪು ಬಣ್ಣದ ದೀಪವೊಂದು ಸದಾ ಉರಿಯುವುದನ್ನು ಗಮನಿಸಿರುತ್ತೀರಿ ಅಲ್ವಾ. ಆ ಕೆಂಪು ದೀಪ ಏಕೆ ಉರಿಯುತ್ತದೆ, ಅದರ ಅರ್ಥವೇನು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಅರಮನೆಯ ಗುಮ್ಮಟದ ಮೇಲೆ ಸದಾ ಉರಿಯುವ ಕೆಂಪು ಬಣ್ಣದ ದೀಪದ ಅರ್ಥವೇನೆಂದರೆ ಅಲ್ಲಿ ಮಹಾರಾಜರು ಇಲ್ಲ ಎಂಬ ಅರ್ಥವಂತೆ. ಹಸಿರು ದೀಪ ಉರಿದರೆ ಅಲ್ಲಿ ಮಹಾರಾಜರು ಇದ್ದಾರೆ ಎಂದರ್ಥ. ಈ ಕುರಿತ ಅದ್ಭುತ ಮಾಹಿತಿಯನ್ನು ಧರ್ಮೇಂದ್ರ ಕುಮಾರ್ ಅರೇನಹಳ್ಳಿ (dharmendra5294) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅವರು ಹೇಳ್ತಾರೆ ಅರಮನೆಯ ಗುಮ್ಮಟದ ಮೇಲೆ ಕೆಂಪು ಬಣ್ಣದ ದೀಪ ಉರಿಯುವುದರ ಅರ್ಥವೇನೆಂದರೆ , ಅರಮನೆಯಲ್ಲಿ ಮಹಾರಾಜರು ಇಲ್ಲ ಎಂದು. ಮಹಾರಾಜರು ಇದ್ರೆ ಅಲ್ಲಿ ಹಸಿರು ಬಣ್ಣದ ಲೈಟ್ ಉರಿಯುತ್ತೆ. 1947 ರಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಮಹಾರಾಜರು ತಮ್ಮ ಸಿಂಹಾಸನವನ್ನು ಬಿಟ್ಟು ಇಳಿದ ನಂತರ ಆವತ್ತಿನಿಂದ ಇವತ್ತಿನವರೆಗೂ ಅರಮನೆ ಗುಮ್ಮಟದಲ್ಲಿ ಕೆಂಪು ದೀಪವೇ ಉರಿಯುತ್ತಿದೆ. ಮುಂಚೆಯೆಲ್ಲಾ ಜಯಚಮರಾಜೇಂದ್ರ ಒಡೆಯರ್ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲೆಲ್ಲಾ ಮಹಾರಾಜರು ಅರಮನೆಯಲ್ಲಿ ಇದ್ದಾರೆ ಎಂದಾಗ ಅಲ್ಲಿ ಹಸಿರು ಬಣ್ಣದ ದೀಪ ಉರಿಯುತ್ತಿತ್ತು, ಅವರು ಏನಾದ್ರೂ ಪ್ರವಾಸದ ನಿಮಿತ್ತ ಹೊರಗಡೆ ಹೋದಾಗ ಕೆಂಪು ಲೈಟ್ ಉರಿಯುತ್ತಿತ್ತು. ನಾವು ಆಗ ಈ ಕೆಂಪು-ಹಸಿರು ದೀಪದ ಮೂಲಕವೇ ಮಹಾರಾಜರು ಅರಮನೆಯಲ್ಲಿ ಇದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬಹುದಿತ್ತು ಎಂಬ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: 155 ವರ್ಷ ಹಳೆಯ MIT ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವೈರಲ್, ಹೇಗಿತ್ತು ನೋಡಿ ಬೀಜ ಗಣಿತ ಪ್ರಶ್ನೆ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಅದ್ಭುತ ವಿಚಾರವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅರ್ಥಗರ್ಭಿತವಾದ ವಿಷಯಗಳನ್ನು ನಮ್ಮಗೆಲ್ಲಾ ತಿಳಿಸಿಕೊಡುತ್ತಿದ್ದೀರಾ, ನಿಮಗೆ ತುಂಬು ಹೃದಯದ ಧನ್ಯವಾದಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ