Video: ಮಧ್ಯರಾತ್ರಿ ಪಾರ್ಕ್​​ನಲ್ಲಿ ಯುವಕನ ಮುಂದೆ ಬೆತ್ತಲೆಯಾಗಿ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 3:11 PM

ಮಹಿಳೆಯರು ಒಬ್ಬಂಟಿಯಾಗಿ ರಾತ್ರಿಯಲ್ಲಿ ಓಡಾಡಬಾರದು, ಅದು ಸುರಕ್ಷಿತವಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ಆದ್ರೆ ಇಲ್ಲೊಂದು ಇದಕ್ಕೆ ತಧ್ವಿರದ್ಧವಾದ ಘಟನೆ ನಡೆದಿದ್ದು, ವಿವಸ್ತ್ರವಾದ ಮಹಿಳೆಯೊಬ್ಬಳು ನಡು ರಾತ್ರಿಯಲ್ಲಿ ಪಾರ್ಕ್ ಒಂದರಲ್ಲಿ ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಈ ವಿಡಿಯೋ ತುಣುಕು ಇದೀಗ ಭಾರೀ ವೈರಲ್ ಆಗುತ್ತಿದ್ದು, ಪುರುಷರಿಗೂ ಕೂಡಾ ಸೂಕ್ತ ರಕ್ಷಣೆ ಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Video: ಮಧ್ಯರಾತ್ರಿ ಪಾರ್ಕ್​​ನಲ್ಲಿ ಯುವಕನ ಮುಂದೆ ಬೆತ್ತಲೆಯಾಗಿ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆ
ವೈರಲ್​​ ವಿಡಿಯೋ
Follow us on

ಮಹಿಳೆಯರು ಮಾತ್ರವಲ್ಲ ಪುರುಷರ ಮೇಲೂ ಲೈಂಗಿಕ ದೌರ್ಜನ್ಯಗಳಾಗುತ್ತಿರುತ್ತವೆ. ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಲ್ಲಿ ಬಹುತೇಕರು ಮಹಿಳೆಯರಾಗಿದ್ದರೂ,ಪುರುಷರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿರ್ಲಕ್ಷಿಸಲಾಗದು. ಹೌದು ಮಹಿಳೆಯರಿಂದ ಪುರುಷ ಮೇಲೂ ಕೂಡಾ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಇದಕ್ಕೆ ಸೂಕ್ತ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ನಟ್ಟ ನಡು ರಾತ್ರಿಯಲ್ಲಿ ವಿವಸ್ತ್ರವಾಗಿ ಪಾರ್ಕ್ ಗೆ ಬಂದಂತಹ ಮಹಿಳೆಯೊಬ್ಬಳು ಅಲ್ಲಿದ್ದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಈ ಅಘಾತಕಾರಿ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಪುರುಷರಿಗೂ ಕೂಡಾ ಸೂಕ್ತ ರಕ್ಷಣೆ ಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ರಾತ್ರಿ ವೇಳೆ ಪಾರ್ಕ್ ಅಲ್ಲಿ ಹಾಯಾಗಿ ಕುಳಿತಿದ್ದ ಯುವಕನನ್ನು ಕಂಡ ರಷ್ಯಾದ ಮಹಿಳೆಯೊಬ್ಬಳು ವಿವಸ್ತ್ರವಾಗಿ ಆತನ ಬಳಿ ಹೋಗಿ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಆತನ ಮೇಲೆ ದೌರ್ಜನ್ಯ ಎಸಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾಳೆ. ಕೊನೆಯಲ್ಲಿ ಪೊಲೀಸರು ಬಂದು ಆ ಯುವಕನ್ನು ರಕ್ಷಿಸಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು Human Nature ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪಾರ್ಕ್‌ನಲ್ಲಿ ಮಹಿಳೆ ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ನೋಡುತ್ತಾ ನಿಂತ ಪೊಲೀಸರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:


ವೈರಲ್ ವಿಡಿಯೋದಲ್ಲಿ ಬೆತ್ತಲೆ ಮಹಿಳೆಯೊಬ್ಬಳು ನಡು ರಾತ್ರಿಯಲ್ಲಿ ಪಾರ್ಕ್ ಗೆ ಬಂದು ಅಲ್ಲಿದ್ದ ಯುವಕನ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿರುವ ದೃಶ್ಯವನ್ನು ಕಾಣಬಹುದು. ಇದಕ್ಕೆ ಒಪ್ಪದ ಆ ಯುವಕನ ಮೇಲೆ ಮಹಿಳೆ ಹಲ್ಲೆ ನಡೆಸಿದ್ದಾಳೆ. ಈಕೆಯ ಈ ಹುಚ್ಚಾಟದಿಂದ ಪಾರಾಗಲು ಯುವಕ ಒದ್ದಾಡುತ್ತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆ ಮಹಿಳೆಯನ್ನು ಹಿಡಿದು ಬಂಧಿಸಿದ್ದಾರೆ.

ಇದನ್ನೂ ಓದಿ: ಐಫೋನ್ ಬೇಕೆಂದು ಊಟ ಬಿಟ್ಟು ಕುಳಿತ ಮಗ, ಹೂ ಮಾರಿ ಫೋನ್ ಕೊಡಿಸಿದ ತಾಯಿ

ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ ಪುರುಷರಿಗೆ ರಕ್ಷಣೆ ಎಲ್ಲಿದೆ’ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಪುರುಷನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆಕೇಗೆ ಯಾವ ಶಿಕ್ಷೆ ಕೊಡ್ತೀರಾ’ ಎಂಬ ಕಾಮೆಂಟ್ ಬರೆದುಕೊಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ