Video: 2 ನಿಮಿಷ ತಡವಾಗಿ ಬಂದಿದ್ದಕ್ಕೆ ನೀಟ್ ಪಿಜಿ ಆಕಾಂಕ್ಷಿಗೆ ಪರೀಕ್ಷೆ ಬರೆಯಲು ನಿರಾಕರಣೆ, ಗೋಳಾಡಿದ ಅಭ್ಯರ್ಥಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2024 | 12:16 PM

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET PG Exam) ಆಗಸ್ಟ್ 11 ರಂದು ನಡೆದಿದೆ. ಯಾವುದೇ ಪರೀಕ್ಷೆಯ ಸಮಯದಲ್ಲೂ ಅಭ್ಯರ್ಥಿಗಳು ತಿಳಿಸಿದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂಬ ನಿಯಮವಿದೆ. ಆದ್ರೆ ಇಲ್ಲೊಂದು ಅಭ್ಯರ್ಥಿ ಪರೀಕ್ಷಾ ಕೇಂದ್ರಕ್ಕೆ ಬರುವಾಗ 2 ನಿಮಿಷ ತಡವಾಗಿದ್ದು, ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದೆ. ಇದು ನನ್ನ ಭವಿಷ್ಯದ ಪ್ರಶ್ನೆ ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಅಭ್ಯರ್ಥಿ ಗೋಳಾಡಿದ್ದು, ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ದೇಶದ ಎಲ್ಲಾ ಸರ್ಕಾರಿ, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ ಪಡೆಯಲು ನೀಟ್‌ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಲಕ್ಷಾಂತರ ಅಭ್ಯರ್ಥಿಗಳು ಸಾವಿರಾರು ಕನಸುಗಳನ್ನು ಹೊತ್ತು ಪ್ರತಿ ವರ್ಷ ಈ ಪರೀಕ್ಷೆಯನ್ನು ಬರೆಯುತ್ತಾರೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶಾತಿ ಪರೀಕ್ಷೆ ಆಗಸ್ಟ್ 11 ರಂದು ನಡೆದಿದೆ. ಈ ಪರೀಕ್ಷೆಗೆ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂಬ ನಿಯಮವಿದೆ. ಆದ್ರೆ ಇಲ್ಲೊಂದು ಅಭ್ಯರ್ಥಿ ಪರೀಕ್ಷಾ ಕೇಂದ್ರಕ್ಕೆ ಬರುವಾಗ 2 ನಿಮಿಷ ತಡವಾಗಿದ್ದು, ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದೆ. ಇದು ನನ್ನ ಭವಿಷ್ಯದ ಪ್ರಶ್ನೆ ದಯವಿಟ್ಟು ಒಂದು ಅವಕಾಶ ಕೊಡಿ ಎಂದು ಅಭ್ಯರ್ಥಿ ಗೋಳಾದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಪರೀಕ್ಷಾ ಕೇಂದ್ರದ ಗೇಟ್ ಮುಚ್ಚುವ ಸಮಯ 8:30 ಆಗಿತ್ತು ಆದರೆ ಅಭ್ಯರ್ಥಿ 8:32 ಕ್ಕೆ ಗೇಟ್ ಬಳಿ ಬಂದಿದ್ದು, ಆಕೆ ಎಷ್ಟೇ ಬೇಡಿಕೊಂಡರು ಅಲ್ಲಿದ್ದ ಸಿಬ್ಬಂದಿಗಳು ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ. ಸೂರಜ್ (SurajPB5) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನೀಟ್ ಪಿಜಿ ಕೇಂದ್ರದಲ್ಲಿ ಅವ್ಯವಸ್ಥೆ… ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡದ ಕಾರಣ ಪಿಜಿ ಆಕಾಂಕ್ಷಿಯೊಬ್ಬಳ ಕನಸು ಭಗ್ನಗೊಂಡಿದೆ. ಗೇಟ್ ಮುಚ್ಚುವ ಸಮಯ 8:30 ಆಗಿತ್ತು ಆದರೆ 8:32 ಕ್ಕೆ ಬಂದ ಆ ಹುಡುಗಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ನಿರಾಕರಿಸಲಾಯಿತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಭ್ಯರ್ಥಿ ಇದು ನನ್ನ ಭವಿಷ್ಯದ ಪ್ರಶ್ನೆ ದಯವಿಟ್ಟು ಅವಕಾಶ ಕೊಡಿ ಎಂದು ಅಲ್ಲಿದ್ದ ಸಿಬ್ಬಂದಿಗಳ ಜೊತೆ ಬೇಡಿಕೊಳ್ಳುವುದನ್ನು ಕಾಣಬಹುದು. ಆಕೆ ಎಷ್ಟೇ ಬೇಡಿಕೊಂಡರೂ, ಗೋಳಾಡಿದರೂ ಸಿಬ್ಬಂದಿಗಳು ಆಕೆಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಅಂಗವಾಗಿ ನೀರಿನೊಳಗೆ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಕರಾವಳಿ ಪಡೆ

ಆಗಸ್ಟ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನಿಯಮ ಎಲ್ಲರಿಗೂ ಒಂದೇ. ಸಮಯಕ್ಕೆ ಸರಿಯಾಗಿ ಬರಬೇಕಿತ್ತು’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಆಕೆಗೆ ಒಂದು ಅವಕಾಶ ಕೊಡಬಹುದಿತ್ತು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:15 pm, Thu, 15 August 24