Viral Video : ಮಳೆಯ ರೌದ್ರಾವತಾರದಿಂದ ಬೆಂಗಳೂರು ಮುಳುಗೇಳುತ್ತಿದೆ. ಹಾಗಾಗಿ ನೆಟ್ಟಿಗರು ಮನೆಯಿಂದಲೇ ಕೆಲಸ ಮಾಡಲು ಅನುಕೂಲ ಮಾಡಿಕೊಡುವಂತೆ ಕಂಪೆನಿಗಳಿಗೆ ವಿನಂತಿಸಿಕೊಳ್ಳುತ್ತಿದ್ದಾರೆ. ನೀರಿನಿಂದ ಆವೃತಗೊಂಡಿರುವ ಇಲ್ಲಿಯ ಪ್ರದೇಶಗಳು, ರಸ್ತೆಗಳು, ಮನೆಗಳನ್ನು ನೋಡುತ್ತಿದ್ದರೆ ಭಯವಾಗುತ್ತಿದೆ. ಹಾಗಾಗಿ ಕಂಪೆನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳುತ್ತ ಮಳೆಗೆ ಸಂಬಂಧಿಸಿದ ವಿಡಿಯೋ, ಫೋಟೋಗಳೊಂದಿಗೆ #bengalururains ಎಂಬ ಹ್ಯಾಶ್‌ಟ್ಯಾಗಿನಡಿ ಟ್ವೀಟ್ ಮಾಡಲಾರಂಭಿಸಿದ್ದಾರೆ.
This is’nt a river,its my building’s basement.#bbmp #bengalururains pic.twitter.com/NFU2wmr5o8
— Jeeshan Kohli (@JeeshanKohli) October 20, 2022
ಬೆಂಗಳೂರಿನಲ್ಲಿ ಬುಧವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಪ್ರವಾಹದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ನಿಂದಾಗಿ ಜನರು ಮನೆ ಮತ್ತು ಆಫೀಸು ತಲುಪಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ ಕ್ಯಾಬ್ಗಳ ಬೆಲೆ ಗಗನಕ್ಕೇರುತ್ತಿವೆ. ಕ್ಯಾಬ್ ಬುಕ್ ಮಾಡುವುದು ಕಷ್ಟವಾಗುತ್ತಿದೆ. ಬುಕ್ ಮಾಡಿದರೂ ಕ್ಯಾನ್ಸಲ್ ಚಾಲಕರು ಮಾಡುತ್ತಿದ್ದಾರೆ. ಇನ್ನು ಆಟೋ ಡ್ರೈವರ್ಗಳು ಮೀಟರ್ ಹಾಕದೆ ದುಪ್ಪಟ್ಟು ಹಣವನ್ನು ಕೇಳುತ್ತಿದ್ದಾರೆ. ಒಟ್ಟಾರೆಯಾಗಿ ಮಳೆಯಿಂದ ಎಲ್ಲರಿಗೂ ತೊಂದರೆಯಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂಬ ಕಾರಣಗಳನ್ನು ನೆಟ್ಟಿಗರು ವಿವರಿಸಿದ್ದಾರೆ.
ಇನ್ನು ಬೆಂಗಳೂರು ಐಟಿ ರಾಜಧಾನಿ. ಸಾಮಾನ್ಯವಾಗಿ ಎಲ್ಲ ಕಂಪೆನಿಗಳು ಕೊರೊನಾ ಸಂದರ್ಭದಲ್ಲಿಯೇ ವರ್ಕ್ ಫ್ರಂ ಹೋಂ ಸಂಸ್ಕೃತಿಯನ್ನು ರೂಢಿಸಿಕೊಂಡಾಗಿದೆ. ಹಾಗಾಗಿ ಈಗಲೂ ವರ್ಕ್ ಫ್ರಂ ಹೋಂ ಮುಂದುವರಿಸಿದರೆ ಸಮಸ್ಯೆ ಉಂಟಾಗಲಾರದು ಎಂದಿದ್ದಾರೆ ಇನ್ನೂ ಕೆಲವರು.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆ ಇದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:30 pm, Fri, 21 October 22