ನಾನು ಗೌರವಿಸಲ್ಪಟ್ಟಿದ್ದೇನೆ; 89ರ ಹರೆಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ

Education : ಈ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ 17,700 ಜನರ ಪೈಕಿ ಜೋನ್​ ಅತ್ಯಂತ ಹಿರಿಯ ವ್ಯಕ್ತಿ. ‘ವಯಸ್ಸು ಮೀರಿತು ಎಂದು ಅನ್ನಿಸಿಯೇ ಇಲ್ಲ, ಏಕೆಂದರೆ ಸ್ನಾತಕೋತ್ತರ ಪದವಿ ಪಡೆಯುವುದು ನನ್ನ ಉದ್ದೇಶವಾಗಿತ್ತು’ ಜೋನ್.

ನಾನು ಗೌರವಿಸಲ್ಪಟ್ಟಿದ್ದೇನೆ; 89ರ ಹರೆಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ
89 ವರ್ಷದ ಜೋನ್​ ಡೋನೋವನ್​ ಸ್ನಾತಕೋತ್ತರ ಪದವಿ ಪೂರೈಸಿದ ಸಂದರ್ಭ
Updated By: ಶ್ರೀದೇವಿ ಕಳಸದ

Updated on: Jan 07, 2023 | 5:53 PM

Viral : ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ವಯಸ್ಸು ಎಂದೂ ಅಡ್ಡಿ ಬರುವುದೇ ಇಲ್ಲ. ಜವಾಬ್ದಾರಿಗಳನ್ನು ಪೂರೈಸುತ್ತ ತಮ್ಮ ಆಸಕ್ತಿಯನ್ನು ಮುಂದುವರಿಸುತ್ತಾರೆ. ಸದರ್ನ್​ ನ್ಯೂ ಹ್ಯಾಂಪ್​ಶೈರ್​ ವಿಶ್ವವಿದ್ಯಾಲಯದಿಂದ ಇಂಗ್ಲಿಷ್​ ಮತ್ತು ಸೃಜನಾತ್ಮಕ ಬರೆವಣಿಗೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ 89 ವರ್ಷದ ಅಜ್ಜಿಯೊಬ್ಬರು ಇದೀಗ ಸುದ್ದಿಯಲ್ಲಿದ್ದಾರೆ. ಈ ಪದವಿಯನ್ನು ಪಡೆದ ನಾನು ಗೌರವಿಸಲ್ಪಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪದವಿ ಪಡೆಯುವುದು ತಡವಾಯಿತು ಎಂದು ನನಗೆ ಅನ್ನಿಸಿಯೇ ಇಲ್ಲ ಏಕೆಂದರೆ ಪದವಿ ಪಡೆಯುವುದೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ : ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್​ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್​ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್

89 ವರ್ಷದ ಜೋನ್​ ಡೋನೋವನ್  ಅವರ ಶೈಕ್ಷಣಿಕ ಜೀವನವು ಮೊದಲಿನಿಂದಲೂ ಅಸಾಮಾನ್ಯವಾಗಿಯೇ ಸಾಗುತ್ತ ಬಂದಿದೆ. ನಾಲ್ಕೂವರೆ ವರ್ಷದವರಿದ್ಧಾಗ ಒಂದನೇ ತರಗತಿಗೆ ಸೇರಿದರು. 16 ನೇ ವಯಸ್ಸಿನಲ್ಲಿದ್ದಾಗ ಪದವಿಯನ್ನು ಪಡೆದರು. ನಂತರ ಮದುವೆಯಾದರು, ಆರು ಮಕ್ಕಳನ್ನು ಹೆತ್ತರು. ಸಂಪೂರ್ಣ ಕೌಟುಂಬಿಕ ಜವಾಬ್ದಾರಿಯಲ್ಲಿ ಮುಳುಗಿದ ಅವರಿಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಕೋಪಗೊಂಡ ಹಿಪ್ಪೋಪೊಟೋಮಸ್ ಪ್ರವಾಸಿಗರ ಸ್ಪೀಡ್​ಬೋಟ್​ ಬೆನ್ನಟ್ಟಿದ ವಿಡಿಯೋ ವೈರಲ್

ಆದರೆ ನಾಲ್ಕು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳಲು ಆಲೋಚಿಸಿದರು. ಇವರ ಪ್ರೊ. ನೇಪಿಯರ್, ‘ಜೋನ್​ ಅಪಾರ ಬುದ್ಧಿಶಕ್ತಿ ಹೊಂದಿದ್ದಾರೆ. ಸೃಜನಶೀಲತೆಯೊಂದಿಗೆ ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದಾರೆ. ಲವಲವಿಕೆಯ ವ್ಯಕ್ತಿತ್ವವುಳ್ಳ ಇವರು ಎಲ್ಲರೊಂದಿಗೂ ಬೆರೆಯುತ್ತಿದ್ದರು. ನಾವು ಯಾಕೆ ಸೃಜನಾತ್ಮಕತೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು’ ಎಂದಿದ್ದಾರೆ.

ಇದನ್ನೂ ಓದಿ: ರಾಮೆನ್​ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್​ ವಿಡಿಯೊ ವೈರಲ್

ಈ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ 17,700 ಜನರ ಪೈಕಿ ಜೋನ್​ ಅತ್ಯಂತ ಹಿರಿಯ ವ್ಯಕ್ತಿ. ಶಿಕ್ಷಣವನ್ನು ಮುಂದುವರಿಸುವುದಕ್ಕೆ ಸಮಯ, ವಯಸ್ಸು ಮೀರಿತು ಎಂದು ನನಗೆ ಎಂದೂ ಅನ್ನಿಸಿಲ್ಲ ಏಕೆಂದರೆ ಸ್ನಾತಕೋತ್ತರ ಪದವಿ ಹೊಂದುವುದು ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ ಜೋನ್​.

ನೀವೇನಂತೀರಿ?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:52 pm, Sat, 7 January 23