
ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದರೆ ಕೆಲಸ ಮಾಡುವ ಸ್ಥಳದಲ್ಲಿಯೇ ನೆಮ್ಮದಿ ಅನ್ನೋದೇ ಇಲ್ಲವಾದರೆ ಏನು ಮಾಡೋದು. ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಸಾಹಸ ಆದ್ರೆ, ಇಂತಹ ಸ್ಥಳದಲ್ಲಿ ಎಷ್ಟು ದುಡಿದ್ರು ಬೆಲೆಯೇ ಇಲ್ಲ. ಆದರೆ ಇಲ್ಲೊಬ್ಬ 25 ವರ್ಷದ ಯುವಕನಿಗೂ ಅದೇ ರೀತಿಯ ಅನುಭವ ಆಗಿದೆ. ಇಂಜಿನಿಯರ್ ಆಗಿರುವ ಸೌರಭ್ ಮಿತ್ತಲ್ (Sourabh Mittal) 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರೂ ಸಂಬಳದೊಂದಿಗೆ ಬಿಪಿಸಿಎಲ್ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕೈ ತುಂಬಾ ಸಂಬಳಯಿದ್ರೂ ಒತ್ತಡ ತಾಳಲಾರದೇ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ. ತನ್ನ ಕೆಲಸ ತೊರೆಯುವ ನಿರ್ಧಾರದ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌರಭ್ ಮಿತ್ತಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕೆಲಸದ ಜಾಗದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ. ಅಲ್ಲದೆ ಹಿರಿಯ ಉದ್ಯೋಗಿಗಳ ಮಾನಸಿಕ ಒತ್ತಡವೇ ಕೆಲಸ ತ್ಯಜಿಸಲು ಕಾರಣ ಎಂದು ಬರೆದುಕೊಂಡಿದ್ದಾನೆ.
ಈ ವಿಡಿಯೋದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಏನಾದ್ರೂ ತುರ್ತು ಅಗತ್ಯವಿದ್ದಾಗ ಗೋದಾಮಿನಿಂದ ಮನೆಗೆ ಹೋಗಬೇಕಾಗಿತ್ತು. ಬಹುತೇಕ ಉದ್ಯೋಗಿಗಳಿಗೆ ರಜೆಯೇ ಇರಲಿಲ್ಲ. ರಜೆಯಿಲ್ಲದೇ ಕಷ್ಟಪಟ್ಟು ಕೆಲಸ ಮಾಡಿದ್ರು ಸಂಬಳ ಹೆಚ್ಚಳ ಹಾಗೂ ಪ್ರಮೋಷನ್ ದೂರದ ಮಾತಾಗಿತ್ತು. ಸಂಬಳ ಹೆಚ್ಚಳ ಮಾಡಿದ್ರೂ ಹೆಚ್ಚೇನು ಇರಲಿಲ್ಲ. ಮೇಲಿನ ಅಧಿಕಾರಿಗಳು ಹೆಚ್ಚು ಒತ್ತಡ ಹಾಕುತ್ತಿದ್ದರು. ಅವರ ವೈಯುಕ್ತಿಕ ಕೆಲಸಗಳನ್ನು ನಮ್ಮ ಕೈಯಲ್ಲಿ ಮಾಡಿಸಿಕೊಳ್ಳುತ್ತಿದ್ದರು ಎಂದು ಕೆಲಸದ ಸ್ಥಳದಲ್ಲಿನ ವಾಸ್ತವ ಸ್ಥಿತಿಯಲ್ಲಿ ವಿವರಿಸಿದ್ದಾನೆ. ಹೆತ್ತವರ ಸಲಹೆ ಮೇರೆಗೆ ಕೆಲಸ ತೊರೆದ ಯುವಕ ಪ್ರಸ್ತುತ ಗುರಗಾಂವ್‌ನಲ್ಲಿ ಎಂಬಿಎ ಓಡುತ್ತಿದ್ದಾರೆ. ಯುವ ವೃತ್ತಿಪರರಿಗೆ ಮಾರ್ಗದರ್ಶನ ನೀಡಲು ಕಂಟೆಂಟ್ ಕ್ರಿಯೇಟರ್ ಆಗಿದ್ದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಸಂಪಾದನೆಗಿಂತ ನೆಮ್ಮದಿ ಮುಖ್ಯ ಎಂದಿದ್ದಾರೆ. ಮತ್ತೊಬ್ಬರು, ನಾನು ನಿಮ್ಮ ಪರಿಸ್ಥಿತಿಯನ್ನೇ ಎದುರಿಸಿ ಹೊರ ಬಂದಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ