Viral Video: ಮಾತ್ರೆ, ಟಿಷ್ಯೂ,ನೀರು, ಚಾಕೋಲೇಟ್​, ಹೇರ್​ಬ್ಯಾಂಡ್​! ಏನೇನಿಲ್ಲ ಈ ಕ್ಯಾಬ್​ನಲ್ಲಿ

Cab Driver: ನೋಡಲು ಇದೊಂದು ಸಾಧಾರಣ ಕ್ಯಾಬ್​. ಆದರೆ ಒಳಹೊಕ್ಕರೆ ನೀವು ಜಗತ್ತನ್ನೇ ಮರೆಯುತ್ತೀರಿ. ನೋಯ್ಡಾದ ಈ ಕ್ಯಾಬ್​ ಡ್ರೈವರ್ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳನ್ನು ಸೀಟಿನ ಹಿಂಬದಿಯಲ್ಲಿ ಇರಿಸಿದ್ದಾರೆ. ಇದನ್ನು ನೋಡಿದ ಬ್ಲಾಗರ್​ ಒಬ್ಬರು ವಿಡಿಯೋ ಮಾಡಿ ಇನ್​ಸ್ಟಾಗ್ರಾಮಿಗೆ ಅಪ್​ಲೋಡ್ ಮಾಡಿದ್ದಾರೆ. ಖಂಡಿತ ನೀವು ಈ ವಿಡಿಯೋ ನೋಡಲೇಬೇಕು, ಹಾಗಿದೆ!

Viral Video: ಮಾತ್ರೆ, ಟಿಷ್ಯೂ,ನೀರು, ಚಾಕೋಲೇಟ್​, ಹೇರ್​ಬ್ಯಾಂಡ್​! ಏನೇನಿಲ್ಲ ಈ ಕ್ಯಾಬ್​ನಲ್ಲಿ
ನೋಯ್ಡಾ ಕ್ಯಾಬ್​ ಒಂದರಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಇರಿಸಿರುವ ಅಗತ್ಯ ವಸ್ತುಗಳು

Updated on: Nov 17, 2023 | 12:04 PM

Cab: ಕ್ಯಾಬ್​ನಲ್ಲಿ ಕುಳಿತಾಗ ನೀವು ಮೊಬೈಲ್​ ಮುಖಕ್ಕೆ ಹಿಡಿಯುತ್ತೀರಿ ಇಲ್ಲವೇ ಕಿಟಕಿಯಾಚೆ ನೋಡುತ್ತ ಕುಳಿತುಕೊಳ್ಳುತ್ತೀರಿ. ಅಪರೂಪಕ್ಕೆ ಡ್ರೈವರ್ (Driver) ಜೊತೆ ಮಾತಿಗಿಳಿಯುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ಕ್ಯಾಬ್​ ನೋಡಿದರೆ ನಿಮಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯುವತಿಯೊಬ್ಬಾಕೆ ಈ ಕ್ಯಾಬ್​ನಲ್ಲಿ ಪ್ರಯಾಣಿಸುತ್ತಿರುವಾಗ ಸೀಟ್​ನ ಹಿಂದೆ ಇದ್ದ ಪುಟ್ಟ ಅಂಗಡಿಯನ್ನು ನೋಡಿ ಬೆರಗಾಗಿದ್ದಾಳೆ. ಆ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ ಕೂಡ. ಹೇರ್ ಬ್ಯಾಂಡ್​, ಚಾಕೋಲೇಟ್​, ನೀರು, ಫ್ರೂಟಿ, ನ್ಯಾಪ್​ಕಿನ್​, ಮಾತ್ರೆ, ಟಿಷ್ಯೂ… ಏನೆಲ್ಲ ಅಗತ್ಯ ವಸ್ತುಗಳು ಇಲ್ಲಿವೆ. ಈ ವಿಡಿಯೋವನ್ನು ಇದೀಗ 12 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ.

ಇದನ್ನೂ ಓದಿ : Viral Video: ಸ್ಪೈಡರ್​ಕ್ಯಾಟ್​; ಕಂಡೀರಾ ಗೋಡೆ ಏರುವ ಬೆಕ್ಕನ್ನು?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರಾಧಾ ಪುಂದಿರ್ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಾವು ಕ್ಯಾಬ್​ನೊಳಗೆ ಕಂಡ ಅಚ್ಚರಿಯ ಜಗತ್ತನ್ನು ನೆಟ್ಟಿಗರಿಗೆ ತೋರಿಸಿದ್ದಾರೆ. ನೋಯ್ಡಾದಲ್ಲಿ ನಾನು ಕ್ಯಾಬ್​ ಬುಕ್ ಮಾಡಿದೆ. ಇದೊಂದು ಸಾಮಾನ್ಯವಾದ ಕ್ಯಾಬ್​. ಆದರೆ ಒಳನೋಡಿದಾಗ ನಿಜಕ್ಕೂ ಇದು ವಿಶೇಷ ಎನ್ನಿಸಿತು. ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ವಸ್ತಗಳೂ ಅಲ್ಲಿದ್ದವು. ನನಗಂತೂ ಇದೊಂದು ಹೊಸ ಅನುಭವ ಎಂದಿದ್ದಾರೆ.

ಇಲ್ಲಿದೆ ಆ ವಿಶೇಷ ಕ್ಯಾಬ್​

ಅನೇಕರು ಕ್ಯಾಬ್​ ಡ್ರೈವರ್​ನನ್ನು ಶ್ಲಾಘಿಸಿದ್ದಾರೆ. ಕೆಲವರು ತಾವೂ ಕೂಡ ಈ ಕ್ಯಾಬ್​ನಲ್ಲಿ ಪ್ರಯಾಣಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಡ್ರೈವರ್ ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ ಒಬ್ಬರು. ಈ ಸಾಮಾನುಗಳೆಲ್ಲ ಉಚಿತವೆ ಅಥವಾ ಹೆಚ್ಚುವರಿಯಾಗಿ ಹಣ ಪಾವತಿಸಬೇಕೆ? ಎಂದು ಕೇಳಿದ್ದಾರೆ ಕೆಲವರು. ಅದಕ್ಕೆ ರಾಧಾ, ಎಲ್ಲವೂ ಉಚಿತ ಎಂದಿದ್ದಾರೆ. ಅವನ ಬಳಿ ಉಚಿತ ಆಹಾರ ಕೂಡ ಲಭ್ಯ, ದೇಣಿಗೆ ಪಟ್ಟಿಯನ್ನೂ ಸೀಟಿನ ಕವರಿಎ ಅಂಟಿಸಿದ್ದಾರೆ, ಇದು ಒಳ್ಳೆಯದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಟಿಂಡರ್​; ಹುಡುಗರು ಯಾಕಿಷ್ಟು ಹತಾಶೆಗೊಳಗಾಗುತ್ತಿದ್ದಾರೆ? ಯುವತಿಯ ಪ್ರಶ್ನೆ

ನಾನೂ ಈ ಕ್ಯಾಬ್​ನಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕು ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಈ ವ್ಯಕ್ತಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಸಾಕಷ್ಟು ಜನ ಹಾರೈಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ