Viral: ಪಿವಿಆರ್ ಪಾಪ್​ಕಾರ್ನ್ ಬೆಲೆಯೂ ಅಮೇಝಾನ್ ತ್ರೈಮಾಸಿಕ​ ಚಂದಾ ಬೆಲೆಯೂ ಒಂದೇ

|

Updated on: Jul 05, 2023 | 4:38 PM

PVR : ''ಪಿವಿಆರ್​ನಲ್ಲಿ ಒಂದು ಸಿನೆಮಾ ನೋಡಲು ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದಕ್ಕಿಂತ ಮನೆಯಲ್ಲಿಯೇ ಕುಳಿತು ಅಮೇಝಾನ್ ಪ್ರೈಮ್ ವಿಡಿಯೋದಲ್ಲಿ ವರ್ಷವಿಡೀ ಸಿನೆಮಾ ನೋಡುವುದೇ ಒಳ್ಳೆಯದು!''

Viral: ಪಿವಿಆರ್ ಪಾಪ್​ಕಾರ್ನ್ ಬೆಲೆಯೂ ಅಮೇಝಾನ್ ತ್ರೈಮಾಸಿಕ​ ಚಂದಾ ಬೆಲೆಯೂ ಒಂದೇ
ಸೌಜನ್ಯ : ಅಂತರ್ಜಾಲ
Follow us on

Noida : ನೋಯ್ಡಾದ ಪಿವಿಆರ್ (PVR) ಬಿಲ್​ ಇದೀಗ ವೈರಲ್ ಆಗುತ್ತಿದೆ. ತ್ರಿದೀಪ್​ ಕೆ. ಮಂಡಲ್​ ಎನ್ನುವವರು ತಮ್ಮ ಕುಟುಂಬದೊಂದಿಗೆ ಡಿಎಲ್​ಎಫ್ ಮಾಲ್​ ಆಫ್ ಇಂಡಿಯಾದಲ್ಲಿರುವ (DLF Mall of India) ಪಿವಿಆರ್​ಗೆ ಸಿನೆಮಾ ನೋಡಲು ಹೋದಾಗ ಪಾಪ್​ಕಾರ್ನ್ (Popcorn)​ ಎಂಬ ಹೂವಿನಷ್ಟು ಹಗೂರವಾದ ತಿನಿಸು ತಮಗೆ ಹೇಗೆ ಭಾರವೆನ್ನಿಸಿತು ಎನ್ನುವುದನ್ನು ಬಿಲ್ ಸಮೇತ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಕುಟುಂಬದೊಂದಿಗೆ ಪಿವಿಆರ್​ಗೆ ಹೋಗಿ ಸಿನೆಮಾ ನೋಡುವುದು ಈಗಿನ ದಿನಮಾನಗಳಲ್ಲಿ ಅಷ್ಟು ಸರಳವಲ್ಲ ಎಂದೂ ಹೇಳಿದ್ದಾರೆ. ಈ ಟ್ವೀಟ್​ಗೆ ನೆಟ್ಟಿಗರು ಅಹುದಹುದೆಂದು ತಲೆ ಅಲ್ಲಾಡಿಸುತ್ತಿದ್ದಾರೆ. ತಮ್ಮ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಕೊವಿಡ್​ ಸಮಯದಲ್ಲಿ ಸಿನೆಮಾ ಮಂದಿರಗಳು ನಷ್ಟವನ್ನು ಅನುಭವಿಸಿದವು. ಲಾಕ್​ಡೌನ್​ ಪರಿಣಾಮವಾಗಿ ಜನರು OTT ಪ್ಲ್ಯಾಟ್​ಫಾರ್ಮ್​ಗಳಿಗೆ ಅಂಟಿಕೊಂಡರು. ಈಗಲೂ ಒಟಿಟಿಯನ್ನೇ ಜನರು ಹೆಚ್ಚು ಆಶ್ರಯಿಸಿರುವುದರಿಂದ ಪಿವಿಆರ್ ಸಿನೆಮಾ ಮಂದಿರಗಳು ಹೆಚ್ಚಿನ ಪಾಲು ಖಾಲಿಯಾಗಿಯೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ತಿಂಡಿತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದಕ್ಕೆ ಸಾಕ್ಷಿ ಈ ವೈರಲ್ ಪೋಸ್ಟ್​.

ಇದನ್ನೂ ಓದಿ : Viral Video: ಜಿಯಾ ಜಲೇ ಜಾನ್​ ಜಲೇ; ಹಾರ್ಮೋನಿಯಂನಲ್ಲಿ ದಿಲ್​ಸೇ ಹಾಡು

ತ್ರಿದೀಪ್​ ಮಂಡಲ್ ವೃತ್ತಿಯಲ್ಲಿ ಪತ್ರಕರ್ತರು. ಅವರು ರೆಗ್ಯುಲರ್ ಸೈಝ್​ ಚೀಸ್​ ಪಾಪ್​ಕಾರ್ನ್ (Chees Popcorn) ​ ಮತ್ತು ಅದೇ ಸೈಝಿನ ಪೆಪ್ಸಿಯನ್ನು (Pepsi)  ಖರೀದಿಸಿದರು. ಆದರೆ ಬಿಲ್​ ಪಾವತಿಸುವಾಗ ಅವರ ಎದೆ ಢವಗುಟ್ಟಿತು. ಏಕೆಂದರೆ 55 ಗ್ರಾಂ ಚೀಸ್​ ಪಾಪ್​ ಕಾರ್ನ್​ ಬೆಲೆ ರೂ. 460. 600 ಮಿ.ಲೀ ಪೆಪ್ಸಿಗೆ ರೂ. 360! ಆನಂತರ ಸುಧಾರಿಸಿಕೊಂಡು ಬಿಲ್ ಅನ್ನು ಟ್ವೀಟ್ ಮಾಡಿದರು.

ಇದನ್ನೂ ಓದಿ : Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

ಅಂದರೆ ಅಮೇಝಾನ್ ಪ್ರೈಮ್​​ ವಿಡಿಯೋದ (Amazon Prime Video) ತ್ರೈಮಾಸಿಕ ಚಂದಾಹಣ ಈ ತಿನಿಸು ಮತ್ತು ಪೇಯದ ಮೊತ್ತಕ್ಕೆ ಸಮ! ಹೀಗಿರುವಾಗ ಮುಂದಿನ ದಿನಮಾನಗಳಲ್ಲಿ ಜನರು ಪಿವಿಆರ್ ಗೆ ಸಿನೆಮಾ ನೋಡಲು ಹೋಗಬಹುದೆ? ನೆಟ್ಟಿಗರಂತೂ ನಾ ಒಲ್ಲೆ ನೀ ಒಲ್ಲೆ ಎನ್ನುತ್ತಿದ್ದಾರೆ. ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 4:32 pm, Wed, 5 July 23