Viral: ಪ್ರವಾಹ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕಿಮ್ ಜಾಂಗ್ ಉನ್‌

ಉತ್ತರ ಕೊರಿಯಾ ಅಲ್ಲಿನ ವಿಚಿತ್ರ ಹಾಗೂ ಕಟ್ಟುನಿಟ್ಟಿನ ಕಾನೂನುಗಳಿಗೆ ಪ್ರಸಿದ್ಧ. ಅಲ್ಲಿನ ಕಾನೂನು ಕ್ರಮ ನೋಡಿದರೆ ಎಂಥವರಿಗೂ ಒಂದು ಕ್ಷಣ ತಲೆ ತಿರುಗುತ್ತದೆ. ಹೌದು ಅಲ್ಲಿ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ಹೊರಡಿಸುವ ಕಾನೂನನ್ನು ಪ್ರತಿಯೊಬ್ಬ ನಾಗರಿಕ ಕೂಡಾ ಪಾಲಿಸಲೇಬೇಕು. ಇದೀಗ ಉತ್ತರ ಕೊರಿಯ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಜುಲೈ ತಿಂಗಳ ಅಂತ್ಯದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಕಾರಣ ಇಲ್ಲಿ ಅನೇಕ ಅವು ನೋವುಗಳು ಸಂಭವಿಸಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ ಕೋಪಗೊಂಡ ಕಿಮ್‌ ಜಂಗ್‌ ಉನ್‌ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ವರದಿಗಳು ಹೇಳಿವೆ.

Viral: ಪ್ರವಾಹ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕಿಮ್ ಜಾಂಗ್ ಉನ್‌
ಕಿಮ್‌ ಜಂಗ್‌ ಉನ್‌
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 04, 2024 | 5:24 PM

ಉತ್ತರ ಕೊರಿಯಾ ಎಂದಾಕ್ಷಣ ನಮಗೆಲ್ಲರಿಗೂ ನೆನಪಾಗುವುದೇ ಇಲ್ಲಿನ ಚಿತ್ರ ವಿಚಿತ್ರ ಹಾಗೂ ಕಠಿಣ ಕಾನೂನುಗಳು. ಅದರಲ್ಲೂ ಈ ದೇಶದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ವಿಚಿತ್ರ ಕಾನೂನುಗಳನ್ನು ಪರಿಚಯಿಸುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಲ್ಲಿನ ಸರ್ವಾಧಿಕಾರಿ ಆಡಳಿತವಿದ್ದು, ಸರ್ಕಾರ ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳನ್ನು ಇಲ್ಲಿನ ನಾಗರಿಕರು ಪಾಲಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುವುದು ಖಂಡಿತ. ಇದೀಗ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಜುಲೈ ತಿಂಗಳ ಅಂತ್ಯದಲ್ಲಿ ಸಂಭವಿಸಿದ ಭಾರೀ ಪ್ರವಾಹದ ಕಾರಣ ಇಲ್ಲಿ ಅನೇಕ ಅವು ನೋವುಗಳು ಸಂಭವಿಸಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ ಕೋಪಗೊಂಡ ಕಿಮ್‌ ಜಂಗ್‌ ಉನ್‌ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಉತ್ತರ ಕೊರಿಯಾದಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಭೂ ಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಈ ನೈಸರ್ಗಿಕ ವಿಕೋಪದ ಕಾರಣ ಹಲವಾರು ಸಾವು ನೋವುಗಳು ಸಂಭವಿಸಿದೆ. ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕೋಪಗೊಂಡ ಕಿಮ್‌ ಜಾಂಗ್‌ ಉನ್‌ ಇಲ್ಲಿನ ಒಟ್ಟು 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಚೋಸನ್‌ ಟಿವಿ ವರದಿ ತಿಳಿಸಿದೆ.

ಇದನ್ನೂ ಓದಿ: ಇದು ಲವ್‌ ಬಾಂಬ್‌ ದಾಳಿ, ಮಾತಲ್ಲೇ ಮರಳು ಮಾಡಿ ಪ್ರೀತಿಯ ಬಲೆಗೆ ಬೀಳಿಸಿ, ಯುವಕರ ಜೀವನ ನಾಶ ಮಾಡುವ ತಂತ್ರ

ಈ ಭೀಕರ ಪ್ರವಾಹದಲ್ಲಿ 4 ಸಾವಿರಕ್ಕೂ ಹೆಚ್ಚು ಜನ ಪ್ರಾಣವನ್ನು ಕಳೆದುಕೊಂಡಿದ್ದು, 15 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಕಿಮ್ ಜಾಂಗ್‌ ಉನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಪ್ರವಾಹ ಸಂದರ್ಭದಲ್ಲಿ ಅಧಿಕಾರಿ ತೋರಿದ ನಿರ್ಲಕ್ಷ್ಯದ ಕಾರಣಕ್ಕೆ 30 ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪ ಹೊರಿಸಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ ಎಂದು ವರದಿಗಳು ತಿಳಿಸಿವೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿದ್ಯಾರ್ಥಿನಿಯರ ಮೇಲೆ ಗೂಳಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಮೈದಾನ ರಾಮಾವತಾರ ಗಣೇಶ ಮೆರವಣಿಗೆಯ ವಿಡಿಯೋ ನೋಡಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ಕೋಲಾರ: ಸಂಕಷ್ಟಹರ ಗಣಪತಿ ದೇವಾಲಯದಲ್ಲಿ 10001 ಕರಿಗಡುಬಿನಲ್ಲಿ ಅರಳಿದ ಗಣಪತಿ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ದರ್ಶನ್​​ ಹಾಗೂ ಪವಿತ್ರಾ ಸಂಬಂಧ ಎಂಥದ್ದು? ಚಾರ್ಜ್​ಶೀಟ್​ನಲ್ಲಿರೋ ಉಲ್ಲೇಖ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ
ಮೈಸೂರಿನಲ್ಲಿ ಗಮನ ಸೆಳೆಯುತ್ತಿವೆ ವಿಶೇಷ ಗಣಪತಿ ವಿಗ್ರಹಗಳು, ವಿಡಿಯೋ ನೋಡಿ