Viral Video : ಎಂಥ ಮಳೆಯಲ್ಲಿ, ಎಂಥ ಚಳಿಯಲ್ಲಿ, ಎಂಥ ಬಿಸಿಲಲ್ಲಿ ಮತ್ತು ಕಿಕ್ಕಿರಿದ ಟ್ರಾಫಿಕ್ಕಿನಲ್ಲಿಯೂ ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಆಹಾರವನ್ನು ಮತ್ತು ಸಾಮಾನುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಏಜೆಂಟರುಗಳ ಬಗ್ಗೆ ಹೀಗೆ ಈ ಹೌಸಿಂಗ್ ಸೊಸೈಟಿಯವರು ಕಟ್ಟಳೆ ಹೇರಿರುವುದು ಯಾಕೆ? ಐಎಎಸ್ ಅಧಿಕಾರಿ ಅವನೀಶ ಶರಣ ಹೌಸಿಂಗ್ ಬೋರ್ಡ್ನ ಗೋಡೆಗೆ ಅಂಟಿಸಿರುವ ಈ ನೋಟೀಸಿನ ಕುರಿತು ಪ್ರಶ್ನಿಸಿದ್ದಾರೆ. ನೆಟ್ಟಿಗರು ಈ ಸೊಸೈಟಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.
No Caption. pic.twitter.com/T1I9JGXdYN
ಇದನ್ನೂ ಓದಿ— Awanish Sharan (@AwanishSharan) November 22, 2022
ಸೊಸೈಟಿಯಲ್ಲಿ ವಾಸಿಸುವವರಿಗೆ ಮಾತ್ರ ಈ ಲಿಫ್ಟ್ ಬಳಕೆ. ಉಳಿದಂತೆ ಸ್ವಿಗ್ಗಿ, ಝೊಮ್ಯಾಟೋ ಮತ್ತು ಇನ್ನುಳಿದ ಯಾವುದೇ ಡೆಲಿವರಿ ಏಜೆಂಟರುಗಳು ಈ ಲಿಫ್ಟ್ ಉಪಯೋಗಿಸುವಂತಿಲ್ಲ ಎಂದು ಗೋಡೆಯ ಮೇಲೆ ನೊಟೀಸ್ ಅಂಟಿಸಿದ್ದಾರೆ ಈ ಹೌಸಿಂಗ್ ಸೊಸೈಟಿಯವರು. ಈ ತನಕ ಈ ಟ್ವೀಟ್ ಅನ್ನು17,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,200 ಜನರು ಲೈಕ್ ಮಾಡಿದ್ದಾರೆ. 1,500 ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್
ಹೀಗೆ ಬರೆದು ಅಂಟಿಸುವ ಬದಲು ಡೆಲಿವರಿ ಏಜೆಂಟರುಗಳ ಸಲುವಾಗಿಯೇ ಪ್ರತ್ಯೇಕ ಲಿಫ್ಟ್ ಅಳವಡಿಸಬೇಕು. ಇದು ಸಾಕಷ್ಟು ಅಪಾರ್ಟ್ಮೆಂಟ್ಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದಿದ್ದಾರೆ ಒಬ್ಬರು. ಶುಚಿತ್ವ ಮತ್ತು ಸುರಕ್ಷತೆ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿದ್ಯುತ್ ವೆಚ್ಚ ಹೆಚ್ಚುವ ಬಗ್ಗೆ ಕಟ್ಟಡ ಮಾಲೀಕರಿಗೆ ವ್ಯಥೆಯಾಗಿ ಹೀಗೆ ಹೇಳಿರಲು ಸಾಧ್ಯ ಎಂದು ಮಗದೊಬ್ಬರು ಹೇಳಿದ್ದಾರೆ.
ಈ ನೋಟೀಸ್ನೊಂದಿಗೆ ಇನ್ನೊಂದು ನೋಟೀಸ್ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್ ಪಡೆದುಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ. ಹೌದು, ಇವರು ಹೀಗೆ ನೋಟೀಸ್ ಅಂಟಿಸಿರುವುದು ಅನ್ಯಾಯ. ಅದಕ್ಕೆ ಪರ್ಯಾಯವನ್ನೂ ಅವರು ಸೂಚಿಸಬೇಕಿತ್ತು ಎಂದಿದ್ದಾರೆ ಇನ್ನೂ ಒಬ್ಬರು. ಈ ತಾರತಮ್ಯ ಸರಿಯಲ್ಲ, ಕನಿಷ್ಟ ಪ್ರಜ್ಞೆ ಇರಬೇಕಿತ್ತು, ಡೆಲಿವರಿ ಏಜೆಂಟರುಗಳು ಯಾರಿಗೆ ಸಹಾಯ ಮಾಡಲು ಬರುತ್ತಾರೆ ಎನ್ನುವುದನ್ನು ಯೋಚಿಸಬೇಕಿತ್ತು ಎಂದಿದ್ದಾರೆ ಹಲವರು.
ಇದನ್ನು ಓದಿದ ನೀವು ಏನು ಅಭಿಪ್ರಾಯ ಕೊಡುತ್ತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:17 pm, Fri, 25 November 22