Viral Video : ಅಯ್ಯೋ ಯಾವಾಗ ಭಾನುವಾರ ಬರುತ್ತದೋ ಅಂತ ಕಾಯುತ್ತಾ ಮಿಡ್ ವೀಕ್ ಬ್ಲ್ಯೂಸ್ನಲ್ಲಿ ತಟಸ್ಥರಾಗಿದ್ದೀರಾ? ಹೇಗೆ ನಿಮ್ಮನ್ನು ನೀವು ಚಿಯರ್ ಅಪ್ ಮಾಡಿಕೊಳ್ಳೋದು ಅಂತ ಯೋಚಿಸುತ್ತಿದ್ದೀರಾ? ಆ ಕೆಲಸವನ್ನು ನಾವು ಮಾಡುತ್ತೇವೆ. ನೀವು ನೋಡುವುದನ್ನಷ್ಟೇ ಮಾಡಿ. ಹೆಚ್ಚು ಏನೂ ಯೋಚಿಸಬೇಡಿ ಎನ್ನುತ್ತಿವೆ ಈ ಮರಿಕೋತಿಗಳು. ಇವುಗಳ ಉತ್ಸಾಹವು ಖಂಡಿತ ನಿಮ್ಮನ್ನು ಮುದಗೊಳಿಸುತ್ತದೆ.
Monkeys having fun.. ? pic.twitter.com/ejB3CcXAnI
ಇದನ್ನೂ ಓದಿ— Buitengebieden (@buitengebieden) November 5, 2022
ಪಿಕ್ನಿಕ್ ಕರೆದುಕೊಂಡು ಹೋಗಿದ್ದರೇನೋ ಇವುಗಳ ಅಪ್ಪ ಅಮ್ಮ. ಮಕ್ಕಳ ಈಜುಗೊಳ ಕಂಡಿದ್ದೇ ನೆಗೆಯಲು ಶುರುಮಾಡಿವೆ. ಹೇಳಿಕೇಳಿ ಕೋತಿ. ಹೇಳುವವರುಂಟೇ ಇವಕ್ಕೆ? ಒಂದಾದ ಮೇಲೊಂದು ಸರದಿಯಲ್ಲಿ ನಿಂತು ನೀರಿನಲ್ಲಿ ಧುಡುಂ ಎಂದು ಜಿಗಿದಿವೆ.
ಯಾರು ಹೇಳಿಕೊಟ್ಟಿದ್ದರೋ ಹೀಗೆ ಒಬ್ಬರಾದ ಮೇಲೆ ಜಿಗಿಯಬೇಕು ಎಂದು? ಬಹಳಷ್ಟು ಮಂದಿ ಈ ವಿಡಿಯೋ ನೋಡಿ ನಕ್ಕಿದ್ದಾರೆ, ಪ್ರತಿಕ್ರಿಯಿಸಿದ್ದಾರೆ. ಮಂಗಗಳೂ ಮಜಾ ಮಾಡುತ್ತಿವೆ, ಮನುಷ್ಯರಾಗಿ ನಾವು ಖಿನ್ನತೆಯಿಂದ ಬಳಲುತ್ತಿದ್ದೇವೆ ಎಂದಿದ್ದಾರೆ ಒಬ್ಬರು. ನಾನಂತೂ ಹತ್ತು ಸಲ ನೋಡಿದೆ ಈ ವಿಡಿಯೋ ಎಂದಿದ್ದಾರೆ ಇನ್ನೂ ಒಬ್ಬರು. ಅಷ್ಟೇನಾ? ನಾ ಇಡೀ ದಿನ ನೋಡಿದೆ ಎಂದು ಮಗದೊಬ್ಬರು ಪ್ರತಿಕ್ರಿಯಸಿದ್ದಾರೆ. ಥೇಟ್ ನಮ್ಮ ಥರಹವೇ ಆಡುತ್ತಿವೆಯಲ್ಲ? ಎಂದಿದ್ದಾರೆ ಮಗದೊಬ್ಬರು.
ನಿಮಗೀಗ ಹೀಗೇ ನೀರಲ್ಲಿ ನೆಗೆಯಬೇಕು ಅಂತ ಅನ್ನಿಸ್ತಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:26 pm, Wed, 9 November 22