ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳನ್ನು ನೋಡಿದಾಕ್ಷಣ ಬೆರಗಾಗುವುದಂತೂ ನಿಜ. ಜತೆಜತೆಗೆ ನಂಬಲೂ ಕಷ್ಟವಾಗುತ್ತಿದೆ ಎನ್ನುತ್ತಾರೆ ನೆಟ್ಟಿಗರು. ಏನೇ ಆದ್ರೂ ತಮಾಷೆಯ ವಿಡಿಯೋಗಲು ಹೆಚ್ಚು ಮನಸ್ಸು ಗೆಲ್ಲುತ್ತವೆ. ಕೆಲವು ಸ್ಟಂಟ್ ವಿಡಿಯೋಗಳನ್ನು ನೋಡಿ ಆಶ್ಚರ್ಯಗೊಂಡ ಸನ್ನಿವೇಶಗಳೂ ಇವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ. ಅಜ್ಜಿ, ಯಮಹಾ ಬೈಕ್ ಏರಿ ಕುಳಿತಿದ್ದೊಂದೇ ಅಲ್ಲ! ಬೈಕ್(Bike Ride) ಓಡಿಸುತ್ತಾ ಕ್ಯಾಮರಾಕ್ಕೆ(Camera) ಫೋಸ್ ಕೊಟ್ಟಿದ್ದರೆ. ಅಜ್ಜಿ(Old lady) ನಿಜವಾಗಿಯೋ ಬೈಕ್ ಓಡಿಸ್ತಿದ್ದಾರಾ? ಎಂಬುದೇ ಡೌಟು ಎನ್ನುತ್ತಿದ್ದಾರೆ ನೆಟ್ಟಿಗರು..
ವೃದ್ಧೆಯೋರ್ವರು ಬೈಕ್ ಹತ್ತಿ ರೈಡ್ ಹೋದ ವಿಡಿಯೋವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಹಾಗೂ ವೃದ್ಧೆ ಎಲ್ಲಿರವರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದರೆ ವಿಡಿಯೋ ನೋಡುತ್ತಾ ಜನರು ತಮಾಷೆ ಎಮೋಜಿಗಳನ್ನು ಕಳುಹಿಸುತ್ತಾ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಶುಭಮ್ 5ಎಕ್ಸ್ ಎಂಬ ಖಾತೆಯಿಂದ ವಿಡಿಯೋ ಹರಿಬಿಡಲಾಗಿದೆ. ವಿಡಿಯೋ 78.4 ವಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 5.5 ಮಿಲಿಯನ್ಗೂ ಹೆಚ್ಚು ಲೈಕ್ಸ್ಗಳು ಲಭ್ಯವಾಗಿವೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿ ಸ್ವತಃ ಬೈಕ್ ಓಡಿಸುತ್ತಿಲ್ಲ, ಯಾರೋ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ವಿಡಿಯೋ ಎಡಿಟ್ ಮಾಡಿರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಏನೇ ಆದರೂ ಕೂಡಾ ವೃದ್ಧೆ ಬೈಕ್ ಓಡಿಸುತ್ತಿರುವ ದೃಶ್ಯ ಗಮ್ಮತ್ತಾಗಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಇದನ್ನೂ ಓದಿ:
Viral Video: ಬೈಕ್ ಸ್ಟಂಟ್ ಮಾಡಲು ಹೋಗಿ ನೆರೆಮನೆಯ ಗೋಡೆ ಒಡೆದ ಭೂಪ!
Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ