ನಿಮ್ಮ ಇಂಡಿಯಾದಲ್ಲಿ ಏನು ನಡೀತಿದೆ? ಈ ಚಿಲ್ಟಾರಿಗಳ ರೀಲ್​ ನೋಡಿ, ನಗು ಉಕ್ಕದಿದ್ದರೆ ಹೇಳಿ

| Updated By: ಶ್ರೀದೇವಿ ಕಳಸದ

Updated on: Dec 30, 2022 | 5:38 PM

Trending in India : ನಿಮ್ಮದೇ ಇಂಡಿಯಾನಲ್ಲಿ ಏನು ನಡೀತಿದೆ ನಿಮಗೆ ಗೊತ್ತೇ? ಗೊತ್ತಿಲ್ಲವಾದರೆ ಈ ಪುಟಾಣಿಗಳ ರೀಲ್ಸ್​ ನೋಡಿ. ಏನು ಟ್ರೆಂಡಿಂಗ್​ನಲ್ಲಿದೆ ಎನ್ನುವುದನ್ನು ಇವರು ಹೇಳುತ್ತಾರೆ. ಮತ್ತೆ ಮತ್ತೆ ನೋಡಿ ಮರುಳಾಗಿ.

ನಿಮ್ಮ ಇಂಡಿಯಾದಲ್ಲಿ ಏನು ನಡೀತಿದೆ? ಈ ಚಿಲ್ಟಾರಿಗಳ ರೀಲ್​ ನೋಡಿ, ನಗು ಉಕ್ಕದಿದ್ದರೆ ಹೇಳಿ
ಇಂಡಿಯಾದಲ್ಲಿ ಏನು ಟ್ರೆಂಡಿಂಗ್​ ಇದೆ?
Follow us on

Viral Video : ಗಯ್ಸ್​, ನಿಮ್ಮ ಇಂಡಿಯಾದಲ್ಲಿ ಏನು ನಡೀತಿದೆ? ಎನ್ನುವುದರೊಂದಿಗೆ ಈ ರೀಲ್ ಶುರುವಾಗುತ್ತದೆ. ತಾವಿಬ್ಬರೂ ಯಾವುದೋ ಒಂದು ವೇದಿಕೆಯ ಮೇಲೆ ನಿಂತಿದ್ದೇವೆ ಎಂಬ ಭಾವನೆಯೊಂದಿಗೆ ಈ ಇಬ್ಬರೂ ಹುಡುಗಿಯರು ಲವಲವಿಕೆಯಿಂದ ಮಾತನಾಡಲು ತೊಡಗುತ್ತಾರೆ. ದೊಡ್ಡ ಹುಡುಗಿ, ಪುಟ್ಟ ಹುಡುಗಿಗೆ ನಿಮ್ಮ ಇಂಡಿಯಾದಲ್ಲಿ ಏನು ನಡೀತಿದೆ ಎಂದು ಕೇಳಿದಾಗ ಪುಟ್ಟ ಹುಡುಗಿ ಯಾವ ಹಾಡು ಹಾಡತೊಡಗುತ್ತಾಳೆ ಕೇಳಿ.

ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ಈತನಕ ಸುಮಾರು 2 ಮಿಲಿಯನ್ ಜನರು ನೋಡಿದ್ಧಾರೆ. 3 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಇವರಿಬ್ಬರೂ ಇಂಡಿಯಾದ ಟ್ರೆಂಡಿಂಗ್​ ಬಗ್ಗೆ ನಡೆಸಿರುವ ಸಂಭಾಷಣೆ ಜನಮನಸೂರೆಗೊಳ್ಳುತ್ತಿದೆ. ಈ ವಿಡಿಯೋ ಅನ್ನು ನಿಂಗ್ಮಾರ್ ಯೋಂಜನ್​ ಎಂಬ ಇನ್​ಸ್ಟಾಗ್ರಾಂ ಖಾತೆದಾರರು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ನೋಡಿ : Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

ಮೇರೆ ಇಂಡಿಯಾ ಮೇ? ಎಂದು ಪುಟ್ಟ ಹುಡುಗಿ ಕೇಳುವ ರೀತಿ ಮತ್ತು ಮೇರಾ ದಿಲ್ ಯೇ ಪುಕಾರೆ ಆಜಾ ಹಾಡನ್ನು ಉತ್ಸಾಹದಿಂದ ಹಾಡುತ್ತಾ ನರ್ತಿಸುವ ರೀತಿ ಯಾರಿಗೆ ತಾನೆ ಇಷ್ಟವಾಗದು. ಈ ಹಾಡನ್ನು ಪಾಕಿಸ್ತಾನಿ ಯುವತಿ ಆಯೇಶಾ ಹಾಡಿದಾಗಿನಿಂದ ಈತನಕವೂ ಇದು ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ನೋಡಿ : ಮೇರಾ ದಿಲ್​ ಏ ಪುಕಾರೆ; ಲತಾದೀಯ ಹಾಡಿಗೆ ಪಾಕಿಸ್ತಾನಿ ಯುವತಿಯ ಡ್ಯಾನ್ಸ್

ಮತ್ತೆ ಇನ್ನೇನು ನಡೀತಿದೆ ಎಂದು ದೊಡ್ಡ ಹುಡುಗಿ ಕೇಳಿದಾಗ, ಪಟ್ಲಿ ಕಮರಿಯಾ ಮೋರಿ ಎಂದು ಹಾಡಲು ಶುರು ಮಾಡುತ್ತಾಳೆ. ಮುದ್ದು ಉಕ್ಕಿ ಉಕ್ಕಿ ಹರಿಯುತ್ತಿದೆ. ಮಾತುಗಳೇ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಮಕ್ಕಳ ನಗು ಎಷ್ಟು ಸ್ಫೂರ್ತಿಯುತವಾಗಿದೆ ಎಂದು ಅನೇಕರು ಕೊಂಡಾಡುತ್ತಿದ್ಧಾರೆ. ಬಹಳ ಸಹಜವಾಗಿ ಬಂದಿದೆ ಇವರ ಈ ರೀಲ್​ ಎಂದು ಹಲವಾರು ಜನ ಶುಭಾಶಯ ಹೇಳುತ್ತಿದ್ಧಾರೆ. ಸಾಕಲ್ಲ ಹೊಸ ವರ್ಷಕ್ಕೆ ಇಷ್ಟು ಉತ್ಸಾಹ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:37 pm, Fri, 30 December 22