Love Marriage: ವ್ರೀನಿ ಖನ್ನಾ ಮತ್ತು ಹಿತೇನ್ ಎಂಟು ವರ್ಷ ಪ್ರೀತಿಸಿದ ನಂತರ ಮದುವೆ ತಯಾರಿ ನಡೆಸಿದರು. ಮದುವೆ ಇನ್ನೇನು ಒಂದು ತಿಂಗಳಿದೆ ಎನ್ನುವಾಗ ಹಿತೇನ್ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ. ಮೆದುಳು ತೀವ್ರವಾಗಿ ಗಾಯಗೊಂಡಿದ್ದರಿಂದ ಕೋಮಾಗೆ (Coma) ಜಾರಿಬಿಟ್ಟ. ವೈದ್ಯರು ಬದುಕುಳಿಯುವುದು ಕಷ್ಟ ಎಂದರು. ಆದರೂ ಅದೃಷ್ಟವಶಾತ್ ವೈದ್ಯೋಪಚಾರ ಮತ್ತು ವ್ರೀನಿಯ ಸತತ ಪ್ರೀತಿ, ಆರೈಕೆಯಲ್ಲಿ 3 ತಿಂಗಳುಗಳ ನಂತರ ಕೋಮಾದಿಂದ ಹೊರಬಂದ. ಈ ವೇಳೆಗೆ ಬರೋಬ್ಬರಿ 30 ಕಿ. ಗ್ರಾಂ ತೂಕ ಕಳೆದುಕೊಂಡಿದ್ದ. ಆದರೆ ಇವನನ್ನೇ ಮದುವೆಯಾಗುವುದು ಎಂದು ವ್ರೀನಿ ಹಠ ತೊಟ್ಟಿದ್ದಳು. ಇವನೊಂದಿಗೆ ಮದುವೆ ಬೇಡ ಎಂದು ಆಕೆಯ ಮನೆಯವರೆಲ್ಲ ಬುದ್ಧಿ ಹೇಳಿದರು. ನಂತರ 2022ರ ಜು. 6ರಂದು ಇವರಿಬ್ಬರ ಮದುವೆ ನಡೆಯಿತು.
ಇದನ್ನೂ ಓದಿ : Viral Video: ವೈರಲ್ ಆಗುತ್ತಿದೆ ಈ ಡ್ರೈಫ್ರೂಟ್ಸ್ ಪಿಝಾ; ಇಟಲಿಗರು ಈ ಪಿಝಾವಾಲಾನನ್ನು ಹುಡುಕುತ್ತಿದ್ದಾರೆ ಎಂದ ನೆಟ್ಟಿಗರು
ನಾಲ್ಕು ಗಂಟೆಗಳ ಹಿಂದೆಯಷ್ಟೇ officialpeopleofindia ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಈತನಕ ಸುಮಾರು 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ವ್ರೀನಿ ಮತ್ತು ಹಿತೇನ್ ದಂಪತಿಯನ್ನು ಅಭಿನಂದಿಸಿದ್ದಾರೆ. ವ್ರಿನಿಯ ತಾಳ್ಮೆ ಮತ್ತು ಪ್ರೀತಿಯನ್ನು ಶ್ಲಾಘಿಸಿದ್ದಾರೆ.
ತನ್ನ ಹುಡುಗ/ಗಂಡನಿಗಾಗಿ ಹೆಣ್ಣುಮಕ್ಕಳು ಯಾವಾಗಲೂ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದಿದ್ದಾರೆ ಒಬ್ಬರು. ಜಗತ್ತಿನಲ್ಲಿ ಪ್ರೀತಿಯೇ ಎಲ್ಲದಕ್ಕಿಂತ ದೊಡ್ಡ ಶಕ್ತಿ. ವೈದ್ಯರೂ ಕೈಚೆಲ್ಲಿದಾಗ ನೀವು ಅವರನ್ನು ಬದುಕಿಸಿಕೊಂಡಿರಿ ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೋ ನೋಡಿ ನಾನು ಅಳುತ್ತಿದ್ದೇನೆ, ಸ್ವಾರ್ಥ ಬಯಸುವ ಅನೇಕರನ್ನು ನೋಡಿದ್ದೇನೆ. ಆದರೆ ನಿಮ್ಮಂಥ ಹೆಣ್ಣುಮಗಳು ನಿಜಕ್ಕೂ ಅಪರೂಪ, ನಿಮಗಿಬ್ಬರಿಗೂ ಒಳಿತಾಗಲಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಬರೀಗೈಯಿಂದ ಹಾವು ಹಿಡಿಯುತ್ತಿರುವ ಯುವತಿಯ ವಿಡಿಯೋ ವೈರಲ್
ನಿಮ್ಮ ಜಾಗದಲ್ಲಿ ನನ್ನನ್ನು ನಾನು ನಿಲ್ಲಿಸಿಕೊಂಡು ನೋಡಿದೆ, ನನಗರಿವಿಲ್ಲದೇ ನನ್ನ ಕಣ್ಣಿಂದ ನೀರು ಇಳಿಯುತ್ತಿವೆ ಎಂದಿದ್ಧಾರೆ ಒಬ್ಬರು. ನಿಮ್ಮ ಈ ವಿಡಿಯೋ ನೋಡಿ ಮೈನವಿರೆದ್ದಿತು, ತುಂಬಾ ಅಪರೂಪದ ಜೋಡಿ ನಿಮ್ಮದು, ನಿಮ್ಮ ಆರೋಗ್ಯ ಇನ್ನಷ್ಟು ಸುಧಾರಿಸಲಿ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ