Viral: ಗ್ರಾಹಕನಿಗೆ ಯೂಸರ್‌ ಮಾನ್ಯುಯಲ್‌ ಕೊಡದ ಮೊಬೈಲ್‌ ಕಂಪೆನಿಗೆ 5 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಮೊಬೈಲ್‌ ಖರೀದಿಸಿದಾಗ ಯೂಸರ್‌ ಮಾನ್ಯುಯಲ್‌ ನೀಡದ ಮೊಬೈಲ್‌ ಕಂಪೆನಿಯ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಗ್ರಾಹಕರ ನ್ಯಾಯಾಲಯವು ಗ್ರಾಹಕನಿಗೆ ಕೈಪಿಡಿ ನೀಡದ ಒನ್‌ ಪ್ಲಸ್‌ ಇಂಡಿಯಾಗೆ 5 ಸಾವಿರ ರೂ. ದಂಡ ವಿಧಿಸಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಗ್ರಾಹಕನಿಗೆ ಯೂಸರ್‌ ಮಾನ್ಯುಯಲ್‌ ಕೊಡದ ಮೊಬೈಲ್‌ ಕಂಪೆನಿಗೆ 5 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ
ಸಾಂದರ್ಭಿಕ ಚಿತ್ರ
Edited By:

Updated on: Dec 09, 2024 | 4:22 PM

ಯಾವುದೇ ಎಲೆಕ್ಟ್ರಾನಿಕ್‌ ವಸ್ತು ಅಥವಾ ಗ್ಯಾಜೆಟ್‌ಗಳನ್ನು ಕೊಂಡಾಗ ಆ ಕಂಪೆನಿಯು ಬಳಕೆದಾರರ ಕೈ ಪಿಡಿ ಅಂದರೆ ಯೂಸರ್‌ ಮಾನ್ಯುಯಲ್‌ ಅನ್ನು ಕೊಟ್ಟಿರುತ್ತಾರೆ. ಯಾಕಂದ್ರೆ ಕೈ ಪಿಡಿಯ ಸಹಾಯದಿಂದ ಖರೀದಿಸಿದ ಉಪಕರಣದಲ್ಲಿ ಯಾವುದೇ ಸಮಸ್ಯೆ ಅಥವಾ ಲೋಪದೋಷಗಳು ಕಂಡು ಬಂದಾಗ ಅದರ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ಆ ಉಪಕರಣದ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಕೂಡಾ ತಿಳಿದುಕೊಳ್ಳಬಹುದು. ಆದ್ರೆ ಇಲ್ಲೊಂದು ಮೊಬೈಲ್‌ ಕಂಪೆನಿ ಫೋನ್‌ ಖರೀದಿಸಿದ ಗ್ರಾಹಕನಿಗೆ ಯಾವುದೇ ರೀತಿಯ ಕೈಪಿಡಿ ನೀಡಿಲ್ಲ. ಈ ಬಗ್ಗೆ ಆ ವ್ಯಕ್ತಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಮೊಬೈಲ್‌ ಕಂಪೆನಿಗೆ ಬರೋಬ್ಬರಿ 5 ಸಾವಿರ ರೂ. ದಂಡ ವಿಧಿಸಿದೆ.

ವರದಿಗಳ ಪ್ರಕಾರ ಬೆಂಗಳೂರಿನ ಸಂಜಯ್‌ ನಗರದ ನಿವಾಸಿ ಎಸ್.ಎಂ ರಮೇಶ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ 24,598 ರೂ. ಗಳ ಒನ್‌ಪ್ಲಸ್‌ ನಾರ್ಡ್‌ ಸಿಇ 3 ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿದ್ದರು. ಮೊಬೈಲ್‌ ಖರೀದಿಸಿದ ಸಂದರ್ಭದಲ್ಲಿ ಕಂಪೆನಿ ಇವರಿಗೆ ಯೂಸರ್‌ ಮಾನ್ಯುಯಲ್‌ ಅನ್ನು ನೀಡಿರಲಿಲ್ಲ. ಇದರಿಂದಾಗಿ ಅವರು ಫೋನ್‌ನ ವಾರಂಟಿ ಮಾಹಿತಿ ಮತ್ತು ಕಂಪೆನಿಯ ವಿಳಾಸವನ್ನು ಕಂಡುಹಿಡಿಯಲು ಪರದಾಡಬೇಕಾಯಿತು. ಈ ಬಗ್ಗೆ ಕಂಪೆನಿಯನ್ನು ಪದೇ ಪದೇ ಸಂಪರ್ಕಿಸಿದಾಗ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಅಂದರೆ ಏಪ್ರಿಲ್‌ನಲ್ಲಿ ಕೈಪಿಡಿಯನ್ನು ಕಳುಹಿಸಿಕೊಟ್ಟಿತು. ಗ್ರಾಹಕರ ಸಮಸ್ಯೆಗಳಿಗೆ ಸರಿಯಾದ ಸಮಯಕ್ಕೆ ಸ್ಪಂದಿಸದಿದ್ದ ಕಾರಣಕ್ಕೆ ಬೇಸರಗೊಂಡು ಹಾಗೂ ಮಾನಸಿಕ ಯಾತನೆ ಅನುಭವಿಸಿದ ರಮೇಶ್‌ ಜೂನ್‌ನಲ್ಲಿ ಈ ಬಗ್ಗೆ ಬೆಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ

ನವೆಂಬರ್‌ 29 ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ “ಇದು ಒನ್‌ ಪ್ಲಸ್‌ ಇಂಡಿಯಾದ ಪರಿಪೂರ್ಣ ನಿರ್ಲಕ್ಷ್ಯ ಮತ್ತು ಉದಾಸೀನತೆಯಾಗಿದೆ, ಗ್ರಾಹಕರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವುದು ಯಾವುದೇ ಕಂಪೆನಿಯ ಕರ್ತವ್ಯವಾಗಿದೆ ಎಂದು ಹೇಳಿ ಗ್ರಾಹಕನಿಗೆ ಮಾನಸಿಕ ಯಾತನೆ ನೀಡಿದ್ದಕ್ಕೆ 5,000 ದಂಡ ಮತ್ತು ಆ ಗ್ರಾಹಕನ ಕಾನೂನು ಹೋರಾಟದ ವೆಚ್ಚಕ್ಕಾಗಿ 1, ಸಾವಿರ ರೂ. ಪರಿಹಾರ ನಿಡುವಂತೆ ಒನ್‌ ಪ್ಲಸ್‌ ಇಂಡಿಯಾಗೆ ಆದೇಶಿಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ