Optical Illusion: ಚಿತ್ರದಲ್ಲಿ ಸಂಖ್ಯೆ 973 ಎಲ್ಲಿದೆ ಎಂದು ನಿಮ್ಮಿಂದ ಹುಡುಕಲು ಸಾಧ್ಯವೇ?

ಇಲ್ಲಿರುವ ಫೋಟೋದಲ್ಲಿ ನೀವು ಸಾಕಷ್ಟು 975 ಸಂಖ್ಯೆ ನೋಡಬಹುದು. ಆದರೆ ಅಷ್ಟೂ ಸಂಖ್ಯೆಗಳ ಮಧ್ಯೆ ಅಡಗಿರುವ ಒಂದೇ ಒಂದು ಸಂಖ್ಯೆ 973 ರನ್ನು ಎಲ್ಲಿದೆ ಎಂದು ನೀವು ಗುರುತಿಸಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎನ್ನುತ್ತಾರೆ ತಜ್ಞರು.

Optical Illusion: ಚಿತ್ರದಲ್ಲಿ ಸಂಖ್ಯೆ 973 ಎಲ್ಲಿದೆ ಎಂದು ನಿಮ್ಮಿಂದ ಹುಡುಕಲು ಸಾಧ್ಯವೇ?
Optical Illusion

Updated on: Mar 07, 2024 | 6:03 PM

ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟಕ್ಕೆ ವಿಶೇಷ ಪರಿಚಯ ಅಗತ್ಯವಿಲ್ಲ. ಇವು ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿವೆ. ಅನೇಕ ಜನರು ಈಗ ಇದನ್ನು ಟೈಮ್ ಪಾಸ್ ಆಗಿ ಆಡುತ್ತಾರೆ. ಆದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಸವಾಲಿನ ಆಟವನ್ನು ಆಡುವ ಮೂಲಕ ಮೆದುಳಿನ ಕಾರ್ಯ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡ, ಆತಂಕದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ನಿಜವಾದ ಸವಾಲೇನೆಂದರೆ ಕಡಿಮೆ ಸಮಯದಲ್ಲಿ ಉತ್ತರವನ್ನು ಕಂಡುಹಿಡಿಯುವುದು.

ಇಲ್ಲಿರುವ ಫೋಟೋದಲ್ಲಿ ನೀವು ಸಾಕಷ್ಟು 975 ಸಂಖ್ಯೆ ನೋಡಬಹುದು. ಆದರೆ ಅಷ್ಟೂ ಸಂಖ್ಯೆಗಳ ಮಧ್ಯೆ ಅಡಗಿರುವ ಒಂದೇ ಒಂದು ಸಂಖ್ಯೆ 973 ರನ್ನು ಎಲ್ಲಿದೆ ಎಂದು ನೀವು ಗುರುತಿಸಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಮದುವೆಗೆ ಯಾಕೆ ಕರೆದಿಲ್ಲ?; ಮುಕೇಶ್‌ ಅಂಬಾನಿಯನ್ನು ಪ್ರಶ್ನಿಸಿದ ರಾಖಿ ಸಾವಂತ್‌

ಈಗ ಕೊಟ್ಟಿರುವ ಆಪ್ಟಿಕಲ್ ಇಲ್ಯೂಷನ್ ನಲ್ಲಿ 973 ಎಲ್ಲಿದೆ ಎಂದು ಚೆನ್ನಾಗಿ ಹುಡುಕಿದೆ. ಇಷ್ಟು ಕಡಿಮೆ ಸಮಯದಲ್ಲಿ ಉತ್ತೆ ಸಿಕ್ಕವರಿಗೆ ಅಭಿನಂದನೆಗಳು. ಇನ್ನೂ ಉತ್ತರ ಸಿಗದವರು ಚಿಂತಿಸಬೇಕಿಲ್ಲ. ಕೆಳಗಿನಿಂದ ಎರಡನೇ ಸಾಲಿನಲ್ಲಿ ಮತ್ತು ಅಂತ್ಯದಿಂದ ಮೂರನೇ ಸಾಲಿನಲ್ಲಿ ಸಂಖ್ಯೆ 973 ಇದೆ.

ಇತಿಹಾಸಕಾರರು ಹೇಳುವಂತೆ ಆಪ್ಟಿಕಲ್ ಇಲ್ಯೂಷನ್ಗಳನ್ನು ಮೊದಲು ಗ್ರೀಸ್‌ನಲ್ಲಿ ಕಂಡುಹಿಡಿಯಲಾಯಿತು. ಅಲ್ಲಿರುವ ಪ್ರಾಚೀನ ದೇವಾಲಯಗಳ ಮೇಲೆ ಇವುಗಳನ್ನು ಬಿಡಿಸಲಾಗಿದೆ. ಈ ಇಲ್ಯೂಷನ್ಗಳು ಗ್ರೀಸ್‌ನಲ್ಲಿ ಹುಟ್ಟಿವೆ ಎಂದು ಅನೇಕ ಜನರು ಹೇಳುತ್ತಾರೆ. ಹೇಗಾದರೂ, ಈ ಇಲ್ಯೂಷನ್ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ