
ಕೆಲವೊಮ್ಮೆ ನೀವು ನಿಮ್ಮ ಮೆದುಳು ಹಾಗೂ ಬುದ್ಧಿವಂತಿಕೆ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ನೀವೇಷ್ಟು ಬುದ್ಧಿವಂತರು ಎಂದು ತಿಳಿದುಕೊಳ್ಳಲು ಈ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸಹಾಯ ಮಾಡುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದು ಸವಾಲಿನ ಒಗಟುಗಳು ನೀವು ಬಿಡಿಸಿದರೆ ನಿಮ್ಮ ಬುದ್ಧಿ ಹಾಗೂ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂದು ತಿಳಿಸುತ್ತದೆ. ಈ ಕೆಲವು ಒಗಟುಗಳನ್ನು ಸ್ವಲ್ಪ ಟ್ರಿಕ್ಕಿ ಎನಿಸಿದರೂ ಕೂಡ ಅದರ ಬಿಡಿಸುವ ಖುಷಿನೇ ಬೇರೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿರುವ ಅಡಗಿರುವ ಸಂಖ್ಯೆಯನ್ನು ನೀವು ಗುರುತಿಸಬೇಕು. 9 ನಂಬರ್ ಗಳ ನಡುವೆ ಎಂಟು ಸಂಖ್ಯೆಯೊಂದು ಅಡಗಿ ಕುಳಿತಿದೆ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಈ ಸಂಖ್ಯೆಯನ್ನು ನಿಮ್ಮಿಂದ ಸಾಧ್ಯವೇ?.
ಈ ಚಿತ್ರದಲ್ಲಿ ಏನಿದೆ?
ಮೇಲಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಸಾಲಾಗಿ 9 ಸಂಖ್ಯೆಯನ್ನು ಬರೆಯಲಾಗಿದೆ. ಈ 9 ಸಂಖ್ಯೆಗಳ ನಡುವೆ 8 ಸಂಖ್ಯೆಯೂ ಅಡಗಿದೆ. ಹೀಗಾಗಿ ನೀವು ಚಿತ್ರವನ್ನು ಏಕಾಗ್ರತೆಯಿಂದ ಗಮನಿಸಿ, ಒಂಬತ್ತು ಸಂಖ್ಯೆಗಳ ನಡುವೆ ಅಡಗಿರುವ ಎಂಟು ಸಂಖ್ಯೆಯನ್ನು ಬೇಗ ಪತ್ತೆ ಹಚ್ಚಿ ಉತ್ತರ ಹೇಳಿ.
ಇದನ್ನೂ ಓದಿ: Optical Illusion: ಏಳು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ವಸ್ತು ಹುಡುಕಿ
ಉತ್ತರ ಇಲ್ಲಿದೆ?
ನಿಮಗೆ ಕೊಟ್ಟಿರುವ ಸಮಯ ಏಳು ಸೆಕೆಂಡುಗಳು ಅಷ್ಟೇ. ಆದರೆ ನೀವು ಹತ್ತು ಸೆಕೆಂಡುಗಳಾದರೂ 9 ರ ನಡುವೆ ಅಡಗಿರುವ 8 ಸಂಖ್ಯೆಯನ್ನು ಪತ್ತೆ ಹಚ್ಚಲು ಸೋತಿದ್ದೀರಾ? ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಸರಿಯಾಗಿ ಗಮನಿಸಿ, ಈ ಚಿತ್ರದ ಮೂರನೇ ಸಾಲಿನತ್ತ ಒಮ್ಮೆ ಕಣ್ಣಾಡಿಸಿ. ಏಳನೇ ಕಾಲಮ್ ನ ಮೂರನೇ ಸಾಲಿನಲ್ಲಿ 8 ಸಂಖ್ಯೆಯಿರುವುದನ್ನು ನೀವು ನೋಡಬಹುದು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Fri, 6 June 25