
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಮೋಜಿನ ಆಟಗಳು ಖುಷಿಕೊಡುವುದರ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟಿನ ಚಿತ್ರವನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಬುದ್ಧಿವಂತರು ಕಡಿಮೆ ಸಮಯದಲ್ಲಿ ಉತ್ತರ ಕಂಡು ಹಿಡಿದು ಜಾಣರು ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗವುದಿಲ್ಲ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ. ಎಲೆಗಳ ನಡುವೆ ಪುಟ್ಟ ಪಕ್ಷಿಯೊಂದು ಅಡಗಿದೆ. ಹದಿನೈದು ಸೆಕೆಂಡುಗಳಲ್ಲಿ ಈ ಹಕ್ಕಿ ಎಲ್ಲಿದೆ ಎಂದು ಹುಡುಕಿ ಹೇಳಬೇಕು. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಫೈಂಡ್ ದಿ ಸ್ನೈಪರ್ ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎಲೆಗಳ ನಡುವೆ ಒಂದು ಪುಟ್ಟ ಹಕ್ಕಿಯೊಂದು ಅಡಗಿದೆ. 15 ಸೆಕೆಂಡುಗಳ ಒಳಗೆ ಪುಟ್ಟ ಹಕ್ಕಿಯನ್ನು ಗುರುತಿಸುವ ಸವಾಲು ನೀಡಲಾಗಿದೆ. ಎಲೆಗಳು ರಾಶಿಯೂ ನಿಮ್ಮ ಕಣ್ಣನ್ನು ಮೋಸ ಗೊಳಿಸುತ್ತದೆ. ಈ ಸುತ್ತಮುತ್ತಲಿನ ಪ್ರದೇಶದಿಂದಾಗಿ ಎಲ್ಲೋ ಅಡಗಿರುವ ಪುಟ್ಟ ಹಕ್ಕಿಯನ್ನು ಗುರುತಿಸುವುದು ಕಷ್ಟಕರವಾಗಿಸುತ್ತದೆ. ಈ ಪಕ್ಷಿಯೂ ನಿಮ್ಮ ಕಣ್ಣಿಗೆ ಬಿದ್ದರೆ ವೀಕ್ಷಣಾ ಕೌಶಲ್ಯವು ಅತ್ಯುತ್ತಮ ವಾಗಿದೆ ಎಂದರ್ಥ.
ಇದನ್ನೂ ಓದಿ: Optical Illusion: ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ? 10 ಸೆಕೆಂಡುಗಳಲ್ಲಿ ಗುರುತಿಸಿ
ನೀವು ಎಷ್ಟೇ ಪ್ರಯತ್ನಿಸಿದರೂ ಪುಟ್ಟ ಹಕ್ಕಿಯೂ ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ. ನಿಮ್ಮ ಕಣ್ಣಿಗೆ ಹಕ್ಕಿಯೊಂದು ಕಾಣಿಸಿತು ಎಂದು ನಾವು ಭಾವಿಸುತ್ತೇವೆ. ಇಲ್ಲವಾದರೆ ಹಕ್ಕಿ ಎಲ್ಲಿದೆ ಎಂದು ನಾವೇ ನಿಮಗೆ ತಿಳಿಸುತ್ತೇವೆ. ಈ ಚಿತ್ರದ ಕೆಳಗಿನ ಬಲಭಾಗದ ಬಳಿ ಕೊಂಬೆಯ ಮೇಲೆ ಕುಳಿತಿರುವ ಪುಟ್ಟ ಹಕ್ಕಿಯೂ ಕುಳಿತಿದ್ದು ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Wed, 17 September 25