Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು 15 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಒಗಟಿನ ಚಿತ್ರಗಳನ್ನು ಬಿಡಿಸುವುದು ಬಹುತೇಕರಿಗೆ ಇಷ್ಟ, ಕೆಲವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಚಿತ್ರಗಳತ್ತ ಕಣ್ಣು ಹಾಯಿಸುತ್ತಾರೆ. ಇದೊಂದು ಮೋಜಿನ ಆಟವಾಗಿದ್ದು, ದೃಷ್ಟಿ ಸಾಮರ್ಥ್ಯ ಹೆಚ್ಚಿರುವವರು ಕ್ಷಣಾರ್ಧದಲ್ಲಿ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇದೀಗ ಇಂತಹದೊಂದು ಚಿತ್ರವು ವೈರಲ್ ಆಗಿದ್ದು ಈ ಚಿತ್ರದಲ್ಲಿ ಒಂದು ಕೋಣೆಯನ್ನು ಕಾಣಬಹುದು. ಈಗ ನಿಮಗಿರುವ ಸವಾಲು ಈ ಕೋಣೆಯಲ್ಲಿ ಮೀನೊಂದು ಇದೆ. ಇದನ್ನು ಹದಿನೈದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು. ಈ ಒಗಟನ್ನು ಬಿಡಿಸುವ ಆಸಕ್ತಿ ನಿಮಗಿದ್ದರೆ ಈಗಲೇ ಒಗಟು ಬಿಡಿಸುವತ್ತ ಗಮನಹರಿಸಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು 15 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌

Updated on: Aug 21, 2025 | 3:55 PM

ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳಿಗೆ ಉತ್ತರ ಹುಡುಕುತ್ತಾ ಕುಳಿತರೆ ಸಮಯ ಕಳೆದಿದ್ದೆ ತಿಳಿಯುವುದಿಲ್ಲ. ಮೆದುಳಿಗೆ ಕೆಲಸ ನೀಡುವುದರೊಂದಿಗೆ ಇದು ದೃಷ್ಟಿ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತವೆ. ಆದರೆ ಉತ್ತರ ಹುಡುಕುವಷ್ಟರಲ್ಲಿ ಸಾಕಾಗಿ ಹೋಗಿರುತ್ತದೆ. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ನೀವು ಒಂದು ಕೋಣೆಯನ್ನು ಕಾಣಬಹುದು. ಇದರಲ್ಲಿ ನಾಯಿ, ಬೆಕ್ಕು, ಪುಸ್ತಕ ಹೀಗೆ ಒಂದಿಷ್ಟು ವಸ್ತುಗಳಿವೆ. ಆದರೆ ಇಲ್ಲಿರುವ ಸವಾಲು ಮೀನು ಎಲ್ಲಿದೆ ಎಂದು ಹುಡುಕಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯವಕಾಶ ಹದಿನೈದು ಸೆಕೆಂಡುಗಳು ಮಾತ್ರ. ಈ ಒಗಟಿನ ಚಿತ್ರ ಬಿಡಿಸಲು ನಿಮ್ಮಿಂದ ಸಾಧ್ಯವೇ.

ಈ ಚಿತ್ರದಲ್ಲಿ ಏನಿದೆ?

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡು ಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಸಿಂಹಗಳನ್ನು ನೀವು ಗುರುತಿಸಬಲ್ಲಿರಾ?
ಹಚ್ಚಹಸಿರಿನ ಮರಗಳ ನಡುವೆ ಅಡಗಿದೆ ಚಂದದ ಗಿಣಿ; 10 ಸೆಕೆಂಡುಗಳಲ್ಲಿ ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಆಂಗ್ರಿ ಫೇಸ್ ಇಮೋಜಿ ಕಂಡುಹಿಡಿಯಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಂದು ಕೋಣೆಯಿದೆ. ಇದರಲ್ಲಿ ನಾಯಿ, ಬೆಕ್ಕು ಪುಸ್ತಕ ಹೀಗೆ ನಾನಾ ವಸ್ತುಗಳಿವೆ. ಆದರೆ ಇದರಲ್ಲೊಂದು ಮೀನು ಇದೆ. ಈ ಕೋಣೆಯಲ್ಲಿ ಒಂದಿಷ್ಟು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಲಾಗಿದ್ದು, ಹೀಗಾಗಿ ಮೇಲ್ನೋಟಕ್ಕೆ ಮೀನು ಕಾಣಿಸಲ್ಲ. ತುಂಬಾ ಸೂಕ್ಷ್ಮವಾಗಿ ಗಮನಿಸಿದ್ರೆ ಮೀನು ಖಂಡಿತ ಕಣ್ಣಿಗೆ ಬೀಳುತ್ತದೆ. ಆದರೆ, ಕೇವಲ 15 ನಿಮಿಷದಲ್ಲಿ ಮೀನು ಎಲ್ಲಿದೆ ಹೇಳಿದ್ರೆ ನೀವು ಬುದ್ಧಿವಂತರು ನಿಮ್ಮ ಐಕ್ಯೂ ಲೆವೆಲ್ ಚೆನ್ನಾಗಿದೆ ಎಂದರ್ಥ. ಒಗಟನ್ನು ಬಿಡಿಸಲು ನೀವು ತಯಾರಾಗಿದ್ದೀರಿ ಅಂದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಇದನ್ನೂ ಓದಿ:Optical illusion: ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡು ಹಿಡಿಯಬಲ್ಲಿರಾ?

ಉತ್ತರ ಇಲ್ಲಿದೆ

ಅಯ್ಯೋ ಎಷ್ಟೇ ಹುಡುಕಿದರೂ ಉತ್ತರ ಸಿಗುತ್ತಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸೂಕ್ಷ್ಮವಾಗಿ ಹಾಗೂ ತಾಳ್ಮೆಯಿಂದ ಗಮನಿಸಿದರೆ ಉತ್ತರವು ಖಂಡಿತ ನಿಮ್ಮ ಕಣ್ಣಿಗೆ ಬೀಳುತ್ತದೆ. ಉತ್ತರ ಹುಡುಕಲು ನಿಮಗೆ ಸಾಧ್ಯವಾದರೆ ನಿಮ್ಮ ಐಕ್ಯೂ ಲೆವೆಲ್ ಚೆನ್ನಾಗಿದೆ ಎನ್ನುವುದು ಖಚಿತವಾಗುತ್ತದೆ. ನಿಮಗೆ ಹದಿನೈದು ಸೆಕೆಂಡುಗಳಲ್ಲಿ ಉತ್ತರ ಹುಡುಕಲು ಸಾಧ್ಯವಾಗಿಲ್ಲ ಅಂದ್ರೆ ನಾವೇ ಉತ್ತರ ಎಲ್ಲಿದೆ ಎಂದು ಹೇಳುತ್ತೇವೆ. ಈ ಚಿತ್ರದಲ್ಲಿ ಬಲಭಾಗದಲ್ಲಿ ಕೆಳಗಡೆ ಕಣ್ಣು ಹಾಯಿಸಿ. ಅಲ್ಲಿ ಬಿದ್ದಿರುವ ಹೂ ಕುಂಡದಲ್ಲಿ ಮೀನಿದೆ. ಈ ಮೀನು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ನಾವು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ