ಒಗಟು (puzzles) ಬಿಡಿಸುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಒಗಟಿನ ಚಿತ್ರಗಳು ಮೆದುಳು ಹಾಗೂ ಬುದ್ಧಿಗೆ ಕೆಲಸ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವೊಮ್ಮೆ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸ್ವಲ್ಪ ಟ್ರಿಕ್ಕಿ ಆಗಿ ಕಾಣಿಸುತ್ತದೆಯಾದರೂ ಈ ಸವಾಲುಗಳು ನಿಜಕ್ಕೂ ಖುಷಿಯನ್ನು ನೀಡುತ್ತದೆ. ಆದರೆ ಇದೀಗ ಆಪ್ಟಿಕಲ್ ಇಲ್ಯೂಷನ್ ಫೋಟೋವೊಂದು ವೈರಲ್ ಆಗಿದ್ದು, ಇದರಲ್ಲಿ ಕೆಲವೊಂದು ವಸ್ತುಗಳು ಅಡಗಿವೆ. ಹೀಗಾಗಿ ನೀವು ನಿರ್ದಿಷ್ಟ ಸಮಯದೊಳಗೆ ಈ ಚಿತ್ರದಲ್ಲಿ ಅಡಗಿರುವ ಎಲ್ಲಾ ವಸ್ತುಗಳನ್ನು ಕಂಡುಹಿಡಿಯಬಹುದೇ? ಈ ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?.
ಮೊದಲಿಗೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನೀವು ಗೊಂದಲಕ್ಕೆ ಒಳಗಾಗಬಹುದು. ನಿಮಗೆ ಭ್ರಮೆಯನ್ನು ಉಂಟು ಮಾಡಬಹುದು. ಈ ಚಿತ್ರವನ್ನು ನೀವು ಮೊದಲು ನೋಡುವಾಗ ವೃತ್ತಾಕಾರದ ಗೋಡೆಯಂತೆ ಕಾಣಿಸಬಹುದು. ಚಿತ್ರದ ಕಪ್ಪು ಭಾಗವನ್ನು ಸೂಕ್ಷ್ಮವಾಗಿ ನೋಡಿದಾಗ ಮರದ ಕೊಂಬೆಗಳು ಚಾಚಿಕೊಂಡಿರುವಂತೆ ಕಾಣುತ್ತದೆ. ಸರಿಯಾಗಿ ಗಮನಿಸಿದರೆ ಮಹಿಳೆಯ ಮುಖ ಹಾಗೂ ಉದ್ದವಾದ ಕೂದಲನ್ನು ನೀವು ನೋಡುತ್ತೀರಿ.
ಇದನ್ನೂ ಓದಿ : Video : ಅಪ್ಪನಿಗೆ ನೆರಳಾದ ಮುದ್ದಿನ ಮಗಳು, ಇಲ್ಲಿದೆ ನೋಡಿ ವಿಡಿಯೋ
ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೂರು ವಿಭಿನ್ನ ವಸ್ತುಗಳು ಇವೆ. ಹೌದು, ಈ ಚಿತ್ರದಲ್ಲಿ ಎರಡು ಮರದ ಕೊಂಬೆಗಳು ಹಾಗೂ ಮಹಿಳೆಯ ಮುಖವಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ