Optical Illusion : ಈ ಚಿತ್ರದಲ್ಲಿ 25, 7 ರ ನಡುವೆ ಅಡಗಿರುವ 52 ಸಂಖ್ಯೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?

ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ನಂತಹ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ನಿಮ್ಮ ವೀಕ್ಷಣಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಇದೀಗ ವೈರಲ್ ಆಗಿದ್ದು, 25 ಹಾಗೂ 7 ರ ನಡುವೆ ಅಡಗಿರುವ 52 ಸಂಖ್ಯೆಯನ್ನು ನೀವು ಪತ್ತೆ ಹಚ್ಚಬೇಕು.

Optical Illusion : ಈ ಚಿತ್ರದಲ್ಲಿ 25, 7 ರ ನಡುವೆ ಅಡಗಿರುವ 52 ಸಂಖ್ಯೆಯನ್ನು ಹುಡುಕಲು ನಿಮ್ಮಿಂದ ಸಾಧ್ಯನಾ?
ಆಪ್ಟಿಕಲ್‌ ಇಲ್ಯೂಷನ್‌

Updated on: Jul 02, 2025 | 2:59 PM

ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಆಟಗಳನ್ನು ಬಿಡಿಸಲು ಇಷ್ಟಪಡುತ್ತಾರೆ. ಇದು ಟೈಮ್ ಪಾಸ್ ಮಾತ್ರವಲ್ಲದೇ, ಮೆದುಳಿಗೆ ವ್ಯಾಯಾಮವನ್ನು ನೀಡುತ್ತದೆ. ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸಲು (intelligence test) ಇದು ಸಹಕಾರಿಯಾಗಿದ್ದು, ಮೇಲ್ನೋಟಕ್ಕೆ ಈ ಕೆಲವು ಪ್ರಶ್ನೆಗಳು ಟ್ರಿಕ್ಕಿ ಎನಿಸಿದರೂ ಉತ್ತರವು ಅಷ್ಟೇ ಸುಲಭವಾಗಿರುತ್ತದೆ. ಆದರೆ ಕೆಲವರು ಸುಲಭವಾಗಿ ಈ ಒಗಟುಗಳಿಗೆ ಉತ್ತರ ಕಂಡುಹಿಡಿದರೆ, ಇನ್ನು ಕೆಲವರು ಎಷ್ಟೇ ಸಮಯ ತೆಗೆದುಕೊಂಡರೂ ಉತ್ತರ ಹುಡುಕುವುದು ಸಾಧ್ಯವಾಗದು. ಇದೀಗ ಇಂತಹದ್ದೇ ಕಠಿಣ ಚಿತ್ರವೊಂದು ವೈರಲ್ ಆಗಿದ್ದು, 25 ಹಾಗೂ 7 ರ ನಡುವೆ ಅಡಗಿರುವ 52 ಸಂಖ್ಯೆಯನ್ನು ಕೇವಲ ಐದು ಸೆಕೆಂಡುಗಳಲ್ಲಿ ಕಂಡು ಹಿಡಿಯುವ ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದಾದರೆ ಈಗಾಗಲೇ ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.

25 ಹಾಗೂ 7 ರ ನಡುವೆ ಅಡಗಿರುವ 52 ಸಂಖ್ಯೆಯನ್ನು ಹುಡುಕಿ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಒಂದಕ್ಕೊಂದು ಅಂಟಿಕೊಂಡು 25 ಹಾಗೂ 7 ಸಂಖ್ಯೆಗಳು ಇರುವುದನ್ನು ಕಾಣಬಹುದು. ಆದರೆ ಈ ಸಂಖ್ಯೆಗಳ ನಡುವೆ 52 ಸಂಖ್ಯೆಯೊಂದು ಅಡಗಿದೆ. ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಎಂದು ಪರೀಕ್ಷಿಸಿಕೊಳ್ಳುವ ಸಮಯ ಇದಾಗಿದ್ದು, ಐದೇ ಸೆಕೆಂಡಿನಲ್ಲಿ ಈ ಸಂಖ್ಯೆಯನ್ನು ಕಂಡುಹಿಡಿಯಿರಿ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಹುಡುಕಿ
ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಗುರುತಿಸಲು ನಿಮ್ಮಿಂದ ಸಾಧ್ಯನಾ?
ಈ ಉಲ್ಟಾ 24 ರ ನಡುವೆ ಅಡಗಿರುವ ಸೀದಾ 24 ಸಂಖ್ಯೆಯನ್ನು ಹುಡುಕಬಲ್ಲಿರಾ?
ಕಪ್ಪು ಬಿಳುಪಿನ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದ ಹುಡುಕಬಲ್ಲಿರಾ?

ಸವಾಲನ್ನು ಸ್ವೀಕರಿಸಲು ನೀವು ಸಿದ್ಧವಿದ್ದೀರಾ?

ಈ ಚಿತ್ರದಲ್ಲಿ 25 ಹಾಗೂ 7 ಸಂಖ್ಯೆಗಳು ಒಂದಕ್ಕೊಂದು ಅಂಟಿಕೊಂಡು ಸಾಲಾಗಿ ಇರುವುದನ್ನು ಕಾಣಬಹುದು. ಆದರೆ ನೀವು ಈ ಸಂಖ್ಯೆಗಳ ನಡುವೆ ಅಡಗಿರುವ 52 ಸಂಖ್ಯೆಯನ್ನು ಕಂಡುಹಿಡಿಯಬೇಕು. ಈ ಸಂಖ್ಯೆಯನ್ನು ಪತ್ತೆ ಹಚ್ಚಲು ಎಲ್ಲರಿಗೂ ಸಾಧ್ಯವಿಲ್ಲವಂತೆ. ಆದ್ರೆ ನೀವು ಬುದ್ಧಿವಂತರಾಗಿದ್ರೆ  5 ಸೆಕೆಂಡಿನಲ್ಲಿ ಗುರುತಿಸಬಹುದಂತೆ. ಈಗಲೇ ನೀವು ಈ ಒಗಟನ್ನು ಬಿಡಿಸಲು ಈಗಾಗಲೇ ಸಿದ್ಧರಾಗಿ.

ಇದನ್ನೂ ಓದಿ : Optical Illusion : ಈ ಚಿತ್ರದಲ್ಲಿ ಅಡಗಿರುವ ವಿಮಾನವನ್ನು ಹುಡುಕಿ

ಉತ್ತರ ಇಲ್ಲಿದೆ

ಎಷ್ಟೇ ಹುಡುಕಿದರೂ ನಿಮಗೆ 25 ಹಾಗೂ 7 ಸಂಖ್ಯೆಗಳ ನಡುವೆ ಅಡಗಿರುವ 52 ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಹೆಚ್ಚು ಚಿಂತಿಸಬೇಡಿ, ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಐದನೇ ಸಾಲನ್ನು ಸೂಕ್ಷ್ಮವಾಗಿ ಗಮನಿಸಿ, ಐದನೇ ಸಾಲಿನ ಕೊನೆಯಲ್ಲಿ ಉತ್ತರವು ಅಡಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ