
ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಒಗಟಿನ ಆಟಗಳ ಬಗ್ಗೆ ನಿಮಗೆ ಗೊತ್ತಿರುತ್ತದೆ. ಇವುಗಳು ನಮ್ಮ ಮೆದುಳಿಗೆ ಕೆಲಸ ನೀಡುವುದು ಮಾತ್ರವಲ್ಲ, ಭ್ರಮೆಯಲ್ಲಿ ಸಿಲುಕಿಸಬಹುದು. ಆದರೆ, ಕಣ್ಣಿಗೆ ಸವಾಲು ಹಾಕುವ ಈ ಒಗಟನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಕೆಲವರು ಸುಲಭವಾಗಿ ಒಗಟುಗಳನ್ನು ಬಿಡಿಸಿ ಉತ್ತರ ಕಂಡುಕೊಳ್ಳುತ್ತಾರೆ. ನೀವು ಕೂಡ ಈ ಹಿಂದೆ ಭ್ರಮೆಯನ್ನುಂಟು ಮಾಡುವ ಈ ಒಗಟಿನ ಚಿತ್ರಗಳನ್ನು ಬಿಡಿಸಿದ್ದೀರಬಹುದು. ಇದೀಗ ಅಂತಹದ್ದೇ ಚಿತ್ರ ವೈರಲ್ ಆಗಿದ್ದು ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡುಹಿಡಿಯಬೇಕು. ಈ ಒಗಟನ್ನು ಬಿಡಿಸಲು ಇಂತಿಷ್ಟು ಸಮಯವಕಾಶವಿಲ್ಲದಿದ್ದರೂ ನೀವು ಎಷ್ಟು ಬೇಗ ಕಂಡುಹಿಡಿಯುತ್ತೀರಿ ಎನ್ನುವುದರ ಮೇಲೆ ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಎಂದು ಪರೀಕ್ಷಿಸಿಕೊಳ್ಳಬಹುದು.
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಿ
r/FindTheSpiner ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರವನ್ನು ಗಮನಿಸಿದರೆ ಕಾಡಿನ ನಡುವೆ ಸಣ್ಣದಾದ ಹೊಳೆಯೊಂದು ಇದೆ. ಹೌದು, ದೊಡ್ಡದಾದ ಪಾಚಿಯಿಂದ ಆವೃತವಾದ ಬಂಡೆಗಳ ನಡುವೆ ನೀರು ಹರಿಯುತ್ತಿದೆ. ಒಣಗಿ ಕೆಳಗೆ ಬಿದ್ದಿರುವ ಕೊಂಬೆಗಳು, ಹಚ್ಚ ಹಸಿರಾದ ವಾತಾವರಣವನ್ನು ನೀವಿಲ್ಲಿ ಕಾಣಬಹುದು. ಆದರೆ ಈ ಚಿತ್ರದಲ್ಲಿ ಹಾವೊಂದು ಅಡಗಿದೆ. ಅದನ್ನು ಕಂಡುಹಿಡಿಯುವ ಸವಾಲನ್ನು ನೀಡಲಾಗಿದೆ.
ಎಷ್ಟೇ ಹುಡುಕಿದರೂ ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಯೋಚನೆ ಮಾಡುವುದು ಬೇಡ. ಈ ಚಿತ್ರವನ್ನು ನೋಡಿದಾಗ ಮೇಲ್ನೋಟಕ್ಕೆ ನಿಮ್ಮ ಕಣ್ಣಿಗೆ ದೊಡ್ಡದಾದ ಬಂಡೆಗಳು ಹಚ್ಚ ಹಸಿರಿನ ಮರಗಳು ಕಾಣಿಸಬಹುದು. ಆದರೆ ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಹಾವೊಂದು ನಿಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಬಂಡೆಗಳ ಪಕ್ಕ ಇರುವ ಕೋಲುಗಳ ನಡುವೆ ಈ ಹಾವು ಇದೆ.
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿ ಉತ್ತರವನ್ನು ಹೇಳಿದ್ದಾರೆ. ಒಬ್ಬ ಬಳಕೆದಾರರು ದೊಡ್ಡಬಂಡೆಗಳ ನಡುವೆ ಕೋಲುಗಳ ಮೇಲೆ ಹಾವು ಇದೆ. ನಾನು ಉತ್ತರ ಕಂಡುಕೊಂಡೆ ಎಂದಿದ್ದಾರೆ. ಇನ್ನೊಬ್ಬರು, ಈ ಒಗಟನ್ನು ಬಿಡಿಸಲು ನನಗೆ ತುಂಬಾನೇ ಸಮಯ ಹಿಡಿಯಿತು ಎಂದು ಹೇಳಿದ್ದಾರೆ. ಈ ಮೇಲಿನ ಎಲ್ಲಾ ಕಾಮೆಂಟ್ ಗಳನ್ನು ಓದಿದ ಮೇಲೂ ನನಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Thu, 24 July 25