
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು, ಬ್ರೈನ್ ಟೀಸರ್ (brain teaser) ಗಳಂತಹ ಒಗಟಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಈ ಚಿತ್ರಗಳು ಮೆದುಳಿಗೆ ಕೆಲಸ ನೀಡುವುದಲ್ಲದೇ, ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಈ ಚಿತ್ರಗಳು ನಿಮಗೆ ಭ್ರಮೆಯನ್ನುಂಟು ಮಾಡಲುಬಹುದು. ಆದರೆ ಇದೀಗ ಇಂತಹದ್ದೇ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಕುದುರೆಗಳಿವೆ. ಆದರೆ ಈ ಕುದುರೆಗಳಲ್ಲಿ ಒಂದು ಕುದುರೆಗೆ ಬಾಲವೇ ಇಲ್ಲ. ನೀವು ಈ ಬಾಲವಿಲ್ಲದ ಕುದುರೆಯನ್ನು ನಿರ್ದಿಷ್ಟ ಸಮಯದೊಳಗೆ ಗುರುತಿಸಬೇಕು. ಈ ಸವಾಲನ್ನು ನೀವು ಸ್ವೀಕರಿಸಿದ್ದೀರಾ?
ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಜಕ್ಕೂ ಆಸಕ್ತಿದಾಯಕವಾಗಿದೆ. ಈ ಫೋಟೋದಲ್ಲಿ ಅನೇಕ ಕುದುರೆಗಳು ಓಡುತ್ತಿರುವುದನ್ನು ಕಾಣಬಹುದು. ಬಿಳಿ ಬ್ಲ್ಯಾಕ್ ಗ್ರೌಂಡ್‌ನಲ್ಲಿ ಕುದುರೆಗಳು ಒಂದರ ಹಿಂದೆ ಒಂದು ಓಡುತ್ತಿರುವಂತೆ ಇದೆ. ಆದರೆ ಈ ಕುದುರೆಗಳಲ್ಲಿ ಒಂದು ಕುದುರೆಗೆ ಬಾಲವೇ ಇಲ್ಲ. ಬಾಲ ಕತ್ತರಿಸಿರುವ ಏಕೈಕ ಕುದುರೆಯನ್ನು ನೀವು ಇಂತಿಷ್ಟು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.
ಉತ್ತರ ಇಲ್ಲಿದೆ
ಅಯ್ಯೋ ನೀವು ಎಷ್ಟೇ ಹುಡುಕಿದರೂ ಐದು ಸೆಕೆಂಡಿನಲ್ಲಿ ಬಾಲವಿಲ್ಲದ ಕುದುರೆಯನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಚಿತ್ರದ ಮಧ್ಯಭಾಗವನ್ನು ಸರಿಯಾಗಿ ಗಮನಿಸಿ, ಇಲ್ಲಿ ಬಾಲವಿಲ್ಲದ ಕುದುರೆಯೊಂದು ನಿಮಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Thu, 12 June 25