
ಬಾಲ್ಯದ ದಿನಗಳಲ್ಲಿ ಈ ಒಗಟಿನ ಆಟಗಳು, ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು. ಹೆಚ್ಚಿನವರು ಇಂತಹ ಆಟಗಳನ್ನು ಆಡಿಯೇ ಇರುತ್ತೀರಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಹಾಗೂ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಇಂತಹದ್ದೇ ಚಿತ್ರವೊಂದು ಇಲ್ಲಿ ನೀಡಲಾಗಿದ್ದು, ಸೋಫಾದ ಮೇಲೆ ಕುಳಿತಿರುವ ಯುವತಿಯ ಚಿತ್ರವಿದ್ದು, ಈ ಎರಡು ಚಿತ್ರಗಳಲ್ಲಿ ಏನೆಲ್ಲಾ ವ್ಯತ್ಯಾಸಗಳಿವೆ ಎಂದು ಪತ್ತೆ ಹಚ್ಚುವುದು ನಿಮ್ಮ ಕೆಲಸ. ಆದರೆ ಇದಕ್ಕೆ ನೀಡಲಾಗಿರುವ ಸಮಯಾವಕಾಶ ಹದಿನೈದು ಸೆಕೆಂಡುಗಳು ಮಾತ್ರ. ನೀವು ಒಗಟನ್ನು ಬಿಡಿಸಲು ಸಾಧ್ಯವಾಗಿದ್ದರೆ ಇದೀಗ ನಿಮ್ಮ ಸಮಯ ಆರಂಭವಾಗುತ್ತದೆ.
ಈ ಚಿತ್ರದಲ್ಲಿ ಏನಿದೆ ಎಂದು ಒಮ್ಮೆ ನೋಡಿ
ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುವ, ಮೆದುಳಿಗೆ ಕೆಲಸ ನೀಡುವ ಈ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಯುವತಿಯೊಬ್ಬಳು ಸೋಫಾ ಮೇಲೆ ಕುಳಿತುಕೊಂಡಿದ್ದಾಳೆ. ತನ್ನ ಎರಡು ಕೈಗಳನ್ನು ಕಿವಿಯ ಮೇಲೆ ಇಟ್ಟಿದ್ದಾಳೆ. ಎರಡು ಒಂದೇ ರೀತಿಯ ಚಿತ್ರವಾಗಿದ್ದು, ಸಾಮಾನ್ಯವಾಗಿ ನೋಡುವಾಗ ಏನು ವ್ಯತ್ಯಾಸವು ಕಾಣಿಸುವುದಿಲ್ಲ. ಆದರೆ ಈ ಎರಡು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಏಳು ವ್ಯತ್ಯಾಸಗಳಿವೆ. ನಿರ್ದಿಷ್ಟ ಸಮಯದೊಳಗೆ ಈ ವ್ಯತ್ಯಾಸವನ್ನು ಗುರುತಿಸುವ ಸವಾಲು ನೀಡಲಾಗಿದೆ.
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಅಡಗಿರುವ ಮಿಡತೆಯನ್ನು 10 ಸೆಕೆಂಡಿನಲ್ಲಿ ಕಂಡು ಹಿಡಿಯಬಲ್ಲಿರಾ?
ಉತ್ತರ ಇಲ್ಲಿದೆ
ಎಷ್ಟೇ ದಿಟ್ಟಿಸಿದರೂ ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲವೇ, ಹೆಚ್ಚು ಚಿಂತಿಸಬೇಡಿ. ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ