Optical Illusion: ಕಣ್ಣು ಬಿಟ್ಟು ಈ ಚಿತ್ರ ನೋಡಿ, ಇಲ್ಲಿ ಅಡಗಿರುವ ಮೇಕೆಯನ್ನು ಕಂಡುಹಿಡಿಯಿರಿ

ನಮ್ಮ ಬುದ್ಧಿ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದೆ. ಹಚ್ಚ ಹಸಿರಾದ ಗಿಡಮರಗಳು ಹಾಗೂ ಬಂಡೆಗಳಿಂದ ಕೂಡಿದ ಪ್ರದೇಶದಲ್ಲಿ ಮೇಕೆಯೊಂದು ಅಡಗಿದೆ. ಹಾಗಿದ್ರೆ ಈ ಚಿತ್ರದಲ್ಲಿ ಮರೆಮಾಡಲಾಗಿರುವ ಪ್ರಾಣಿ ಎಲ್ಲಿದೆ ಎಂದು ಹುಡುಕುವ ಸವಾಲು ನೀಡಲಾಗಿದೆ. ಒಮ್ಮೆ ಟ್ರೈ ಮಾಡಿ ನೋಡಿ.

Optical Illusion: ಕಣ್ಣು ಬಿಟ್ಟು ಈ ಚಿತ್ರ ನೋಡಿ, ಇಲ್ಲಿ ಅಡಗಿರುವ ಮೇಕೆಯನ್ನು ಕಂಡುಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Oct 02, 2025 | 10:27 AM

ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಮೆದುಳಿಗೆ ವ್ಯಾಯಾಮ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ಗಳು ವೈರಲ್‌ ಆಗುತ್ತಲೇ ಇರುತ್ತವೆ. ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟವನ್ನು ಆಡುವ ಮಜಾನೇ ಬೇರೆ. ಹೆಚ್ಚಿನವರು ಇಂತಹ ಒಗಟಿನ ಚಿತ್ರಗಳತ್ತ ಕಣ್ಣು ಹಾಯಿಸುತ್ತಾರೆ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಬಂಡೆಗಳ ನಡುವೆ ಮೇಕೆಯೊಂದು ಅಡಗಿ ಕುಳಿತಿದೆ. ನಿಮ್ಮ ಐಕ್ಯೂ ಲೆವೆಲ್‌ ಪರೀಕ್ಷೆ ಮಾಡ್ಬೇಕಾ, ಹಾಗಿದ್ರೆ ನೀವು ಈ ಚಿತ್ರದಲ್ಲಿ ಅಡಗಿರುವ ಮೇಕೆಯನ್ನು ಆದಷ್ಟು ಬೇಗ ಕಂಡು ಹಿಡಿಯಿರಿ.

ಈ ಚಿತ್ರದಲ್ಲಿ ಏನಿದೆ?

ಫೈಂಡ್‌ದಿ ಸ್ನೈಪರ್ (FindTheSpiner) ಹೆಸರಿನ ರೆಡ್ಡಿಟ್ ಖಾತೆಯನ್ನು ಭ್ರಮೆ ಉಂಟು ಮಾಡುವ ಒಗಟಿನ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಒಗಟಿನ ಆಟಗಳು ಮೋಜಿನ ಜೊತೆಗೆ ನಮ್ಮಲ್ಲಿ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ಕೂಡಾ ವೃದ್ಧಿಸುತ್ತದೆ. ಈ ಚಿತ್ರವನ್ನು ನೋಡಿದ ಕೂಡಲೇ ಮೊದಲ ನೋಟದಲ್ಲೇ ನಿಮ್ಮ ಕಣ್ಣಿಗೆ ಬಂಡೆಗಳು ಹಾಗೂ ಹಚ್ಚ ಹಸಿರಿನ ಮರ ಗಿಡಗಳು ಕಾಣಿಸುತ್ತದೆ. ಆದರೆ ಇದರಲ್ಲಿ ಮೇಕೆಯೊಂದು ಅಡಗಿ ಕುಳಿತಿದ್ದು, ಈ ಪ್ರಾಣಿ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು. ಆದರೆ ಒಗಟು ಬಿಡಿಸಲು ಕಾಲದ ಮಿತಿಯಿಲ್ಲ. ಆದರೆ ನೀವು ಉತ್ತರ ಕಂಡು ಹಿಡಿದರೆ ನೀವು ಸರಾಸರಿಗಿಂತ ಹೆಚ್ಚಿನ ಐಕ್ಯೂ ಲೆವೆಲ್‌ ಮತ್ತು ತೀಕ್ಷ್ಣ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಾ ಎನ್ನುವುದು ಖಚಿತವಾಗುತ್ತದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ
ಹುಲ್ಲಿನ ನಡುವೆ ಅಡಗಿರುವ ಸಣ್ಣದಾದ ಕಪ್ಪೆಯನ್ನು ಕಂಡುಹಿಡಿಯಿರಿ
ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಹಸಿರು ಬಣ್ಣದ ಕಪ್ಪೆಯನ್ನು ಕಂಡು ಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಹಲ್ಲಿಯನ್ನು ಹುಡುಕಿ

ಇದನ್ನೂ ಓದಿ: Optical Illusion: ಹುಲ್ಲಿನ ನಡುವೆ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಿರಿ

ನಿಮ್ಮ ಕಣ್ಣಿಗೆ ಮೇಕೆ ಕಾಣಿಸಿತೇ?

ಎಷ್ಟೇ ಪ್ರಯತ್ನಿಸಿದರೂ ಒಗಟಿನ ಚಿತ್ರದಲ್ಲಿ ಅಡಗಿರುವ ಮೇಕೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ. ನೀವು ಈ ರೀತಿ ನೋಡಿದರೆ ಮೇಕೆ ಎಲ್ಲಿದೆ ಎಂದು ಪತ್ತೆ ಹಚ್ಚಲು ಕಷ್ಟವಾಗಬಹುದು. ಅತ್ಯುತ್ತಮ ವೀಕ್ಷಣಾ ಕೌಶಲ್ಯ ಹಾಗೂ ತಾಳ್ಮೆ ಇರುವವರು ಮಾತ್ರ ಮೇಕೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಾಗಿ ನೀವು ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ, ಪ್ರಾಣಿಯನ್ನು ಕಂಡುಹಿಡಿಯಲು ಪ್ರಯತ್ನಿಸಿ. ಆದಷ್ಟು ಬೇಗ ಒಗಟು ಬಿಡಿಸಿದರೆ ನೀವು ಜಾಣರೇ ಎಂದು ಪರೀಕ್ಷಿಸಿಕೊಳ್ಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ