Optical Illusion: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ
ಆಪ್ಟಿಕಲ್ ಇಲ್ಯೂಷನ್ ಒಗಟಿನ ಚಿತ್ರಗಳನ್ನು ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಈ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ದುವುದು ಮಾತ್ರವಲ್ಲ ಮೆದುಳಿಗೆ ವ್ಯಾಯಾಮ ನೀಡುತ್ತದೆ. ಇದೀಗ ಇಲ್ಲೊಂದು ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಅಣಬೆಯನ್ನು ಗುರುತಿಸಲು ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ಬುದ್ಧಿವಂತರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ.

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಸೇರಿದಂತೆ ಇನ್ನಿತ್ತರ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡು ಕೊಳ್ಳುವುದು ಸುಲಭವಲ್ಲ. ನೀವು ಈ ಹಿಂದೆ ಇಂತಹ ಒಗಟುಗಳನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಾ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಮತ್ತೊಂದು ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಅಣಬೆಯನ್ನು ಮೂವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಮುಳುಗಿಸಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಈ ಚಿತ್ರವು ನೋಡಲು ಅದೇ ರೀತಿಯಿದೆ. ನೀವು ಈ ಚಿತ್ರದಲ್ಲಿ ಕುರಿ ಮಂದೆಯನ್ನು ಕಾಣಬಹುದು. ಕುರಿಗಳನ್ನು ಒಳಗೊಂಡ ಪ್ರದೇಶದಲ್ಲಿ ಅಣಬೆಯೊಂದಿದೆ. ನೀವು ನಿಮ್ಮ ವೀಕ್ಷಣಾ ಸಾಮರ್ಥ್ಯ ಬಳಸಿ 30 ಸೆಕೆಂಡುಗಳೊಳಗೆ ಈ ಗುಪ್ತವಸ್ತುವನ್ನು ಕಂಡು ಹಿಡಿಯಬೇಕು.
ಇದನ್ನೂ ಓದಿ:ಜಸ್ಟ್ 7 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ನವಿಲನ್ನು ಗುರುತಿಸಬಲ್ಲಿರಾ
ನಿಮ್ಮ ಕಣ್ಣಿಗೆ ಅಣಬೆ ಕಾಣಿಸಿತೇ?
ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು 30 ಸೆಕೆಂಡುಗಳನ್ನು ನೀಡಲಾಗಿದೆ. ಈ ನಿರ್ದಿಷ್ಟ ಸಮಯದೊಳಗೆ ಅಣಬೆಯನ್ನು ಗುರುತಿಸುವುದು ಸಾಧ್ಯವಾದರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ. ಒಂದು ವೇಳೆ ಈ ಚಿತ್ರದಲ್ಲಿರುವ ಗುಪ್ತ ವಸ್ತುವನ್ನು ಕಂಡು ಹಿಡಿಯುವುದು ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅಣಬೆ ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ನಾವೇ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




