Optical Illusion: ಈ ಒಗಟಿನ ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕಿದ್ರೆ ನೀವೇ ಜಾಣರು
ಇಂಟರ್‌ನೆಟ್‌ನಲ್ಲಿ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹರಿದಾಡುತ್ತಿರುತ್ತವೆ. ನೋಡಲು ಸುಲಭದಾಯಕವಾಗಿ ಕಂಡರೂ ಈ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಆದರೆ ಇದೀಗ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಹಲ್ಲಿಯನ್ನು ಕಂಡು ಹಿಡಿಯುವುದೇ ನಿಮ್ಮ ಮುಂದಿರುವ ಸವಾಲು. ಈ ಸವಾಲು ಸ್ವೀಕರಿಸಲು ರೆಡಿ ಇದ್ರೆ ಈ ಚಿತ್ರವನ್ನೊಮ್ಮೆ ಕಣ್ಣು ಬಿಟ್ಟು ನೋಡಿ.

ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಮೆದುಳನ್ನು ಚುರುಕುಗೊಳಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವರು ಇಂತಹ ಚಿತ್ರಗಳನ್ನು ಬಿಡಿಸಿ ತಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇದೀಗ ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವ ಸಮಯ. ಈ ಚಿತ್ರದಲ್ಲಿ ಹಲ್ಲಿ (lizard) ಎಲ್ಲಿದೆ ಎಂದು ನೀವು ಕಂಡು ಹಿಡಿಯಬೇಕು. ನೀವು ಈ ಒಗಟನ್ನು ಬಿಡಿಸಲು ಸಾಧ್ಯವಾದರೆ ನೀವು ನಿಜ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಲೀಸಾಗಿ ನಿಭಾಯಿಸುತ್ತೀರಿ ಎಂದರ್ಥ. ಆದರೆ ಈ ಒಗಟನ್ನು ಹದಿನೈದು ಸೆಕೆಂಡುಗಳೊಳಗೆ ಬಿಡಿಸಲು ಸಾಧ್ಯವೇ ಎಂದು ನೋಡಿ.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಹಜವಾಗಿರುವಂತೆ ಕಾಣಿಸುತ್ತದೆ. ಇದರಲ್ಲಿರುವ ಗುಪ್ತ ವಸ್ತುಗಳು ಅಷ್ಟು ಸುಲಭವಾಗಿ ಒಗಟು ಬಿಡಿಸುವವರ ಕಣ್ಣಿಗೆ ಬೀಳುವುದಿಲ್ಲ. ಈ ಇಲ್ಯೂಷನ್ ಚಿತ್ರದಲ್ಲಿ ನೀವು ಮನೆಯ ಹೊರಾಂಗಣ ನೋಟವನ್ನು ಕಾಣಬಹುದು. ಹೂ ಕುಂಡಗಳು, ಮರಗಳಿವೆ. ಇದೆಲ್ಲದರ ನಡುವೆ ಹಲ್ಲಿಯೊಂದು ಅಡಗಿ ಕುಳಿತಿದೆ. ನಿಮಗೆ ಈ ಜೀವಿಯನ್ನು ಕಂಡು ಹಿಡಿಯುವುದು ಕಷ್ಟವಾಗಬಹುದು. ಈ ಸವಾಲನ್ನು ನೀವು ಸ್ವೀಕರಿಸಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ
ಹಲ್ಲಿಯನ್ನು ಗುರುತಿಸಲು ಸಾಧ್ಯವಾಯಿತೇ?

ಅನುಭವಿ ಆಟಗಾರರಿಗೂ ಈ ಇಲ್ಯೂಷನ್ ಚಿತ್ರವನ್ನು ಬಿಡಿಸಲಾಗುವುದಿಲ್ಲ. ಈ ಮೇಲಿನ ಚಿತ್ರದಲ್ಲಿ ಮರೆಮಾಡಲಾಗಿರುವ ಹಲ್ಲಿಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಚಿಂತಿಸಬೇಡಿ, ಹಲ್ಲಿ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ಹಲ್ಲಿಯನ್ನು ಗುರುತಿಸಿದ್ದು, ನೀವು ಗಮನಿಸಿದ್ದೀರಿ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Fri, 30 January 26
