Optical Illusion: ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳನ್ನು ಬಿಡಿಸುವುದು ಕಷ್ಟದಾಯಕವಾಗಿದ್ದರೂ, ಇದು ಸ್ವಲ್ಪ ಸಮಯದವರೆಗೂ ಮೈಂಡ್‌ನ್ನು ರಿಲ್ಯಾಕ್ಸ್ ಆಗಿಸುತ್ತದೆ. ಕೆಲವರು ಈ ಒಗಟಿನ ಚಿತ್ರ ಬಿಡಿಸುವಾಗ ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಕಡಿಮೆ ಸಮಯದಲ್ಲಿ ಟ್ರಿಕ್ಕಿ ಒಗಟನ್ನು ಸಲೀಸಾಗಿ ಬಿಡಿಸುತ್ತಾರೆ. ಇದೀಗ ಕಠಿಣ ಸವಾಲಿನ ಒಗಟಿನ ಚಿತ್ರ ವೈರಲ್ ಆಗಿದ್ದು, ಇದರಲ್ಲಿ ಮಲಗಿರುವ ಬೆಕ್ಕನ್ನು ಜಸ್ಟ್ ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.

Optical Illusion: ಈ ಚಿತ್ರದಲ್ಲಿ ಮಲಗಿರುವ ಬೆಕ್ಕನ್ನು ಕಂಡು ಹಿಡಿಯಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Reddit

Updated on: Aug 26, 2025 | 7:13 PM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸವಾಲಿನ ಆಟಗಳು ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಆದರೆ ಈ ಚಿತ್ರಗಳು ನೂರಕ್ಕೆ ನೂರರಷ್ಟು ಮೆದುಳಿಗೆ ಕೆಲಸ ನೀಡುತ್ತವೆ. ಇಂತಹ ಮೋಜಿನ ಆಟಗಳು ಸ್ವಲ್ಪ ಟ್ರಿಕ್ಕಿ ಆಗಿದ್ದರೂ ಈ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ. ನಾವೆಷ್ಟು ಬುದ್ಧಿವಂತರು ಹಾಗೂ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯಬೇಕಿದ್ರೆ ಇಂತಹ ಒಗಟುಗಳನ್ನು ಬಿಡಿಸಬೇಕು. ನಿರ್ದಿಷ್ಟ ಸಮಯದಲ್ಲಿ ಈ ಒಗಟಿನ ಚಿತ್ರಗಳನ್ನು ಬಿಡಿಸಲು ಸಾಧ್ಯವಾದ್ರೆ ನೀವು ಜಾಣರು ಎಂದರ್ಥ. ಇದೀಗ ತಲೆಕೆರೆದುಕೊಳ್ಳುವಂತಹ ಕಠಿಣ ಸವಾಲಿನ ಚಿತ್ರವೊಂದು ವೈರಲ್‌ ಆಗಿದೆ. ಈ ಚಿತ್ರದಲ್ಲಿ ಬೆಕ್ಕೊಂದು ಹಾಯಾಗಿ ನಿದ್ರಿಸುತ್ತಿದ್ದು, ಬೆಕ್ಕು ಎಲ್ಲಿದೆ ಎಂದು ಕೇವಲ ಹತ್ತು ಸೆಕೆಂಡುಗಳಲ್ಲಿ ಹೇಳಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವಿದೆಯೇ? ಹಾಗಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಏನಿದೆ?

ಈ ಚಿತ್ರವನ್ನು ಜನಪ್ರಿಯ ಗುಂಪಿನ ಫೈಂಡ್ ದಿ ಸ್ನೈಪರ್‌ನಲ್ಲಿ ಕಾನ್ಷಿಯಸ್ ಒಬ್ಸರ್ವರ್_22 ಎಂಬ ಬಳಕೆದಾರರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನೀವು ನೋಡಿದಾಗ ನಿಮ್ಮ ಕಣ್ಣಿಗೆ ಹಚ್ಚಹಸಿರಿನ ಸಸ್ಯಗಳು ಕಾಣಿಸುತ್ತದೆ. ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಕಾರು ಇದೆ. ಆದರೆ ಇದರಲ್ಲಿ ಒಗಟು ಏನೆಂದರೆ ಈ ಚಿತ್ರದಲ್ಲಿ ಬೆಕ್ಕೊಂದು ಮಲಗಿದೆ. ಆ ಬೆಕ್ಕನ್ನು ಕೇವಲ ಹತ್ತು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಆದರೆ ತೀಕ್ಷ್ಣ ದೃಷ್ಟಿ ಇರುವವರು ಮಾತ್ರ ಬೆಕ್ಕನ್ನು ತ್ವರಿತವಾಗಿ ಗುರುತಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಐದು ಪುಸ್ತಕಗಳನ್ನು ಹುಡುಕುವಿರಾ?
ಈ ಚಿತ್ರದಲ್ಲಿ ಅಡಗಿರುವ ಮೊಸಳೆಯನ್ನು ಹುಡುಕಬಲ್ಲಿರಾ?
ದಟ್ಟ ಕಾನನದ ನಡುವೆ ಜಿಂಕೆ ಎಲ್ಲಿದೆ ಎಂದು ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಮೀನನ್ನು 15 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಈ ಸವಾಲನ್ನು ಸ್ವೀಕರಿಸಿದ್ದೀರಾ?

ಈ ಚಿತ್ರದಲ್ಲಿ ಹಸಿರು ಸಸ್ಯಗಳ ನಡುವೆ ಹಾಯಾಗಿ ನಿದ್ರಿಸುತ್ತಿರುವ ಬೆಕ್ಕನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಆಕರ್ಷಕ ಒಗಟು ಅನುಭವಿ ಆಟಗಾರರಿಗೂ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಕಡಿಮೆ ಸಮಯದಲ್ಲಿ ಉತ್ತರ ಕಂಡು ಹಿಡಿಯುವುದು ಕಷ್ಟಕರ. ಆದರೆ ವೀಕ್ಷಣಾ ಕೌಶಲ್ಯಗಳ ಚೆನ್ನಾಗಿದ್ರೆ ಉತ್ತರ ಕಂಡುಕೊಳ್ಳುವುದು ದೊಡ್ಡ ವಿಷಯವೇ ಅಲ್ಲ. ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಒಗಟು ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಐದು ಪುಸ್ತಕಗಳನ್ನು ಜಸ್ಟ್ 9 ಸೆಕೆಂಡುಗಳಲ್ಲಿ ಹುಡುಕುವಿರಾ?

ಮಲಗಿರುವ ಬೆಕ್ಕು ಕಾಣಿಸಿತೇ?

ಈ ಚಿತ್ರದಲ್ಲಿ ಅಡಗಿರುವ ಹಾಯಾಗಿ ಮಲಗಿರುವ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?. ನೀವು ಬೆಕ್ಕನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರೆ ವೀಕ್ಷಣಾ ಕೌಶಲ್ಯ ಉತ್ತಮವಾಗಿದೆ ಎಂದರ್ಥ. ಎಷ್ಟೇ ಪ್ರಯತ್ನ ಪಟ್ಟರೂ ಬೆಕ್ಕನ್ನು ಹುಡುಕಲು ಸಾಧ್ಯವಾಗಿಲ್ಲವೇ?, ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಚಿತ್ರದಲ್ಲಿ ಎಡಭಾಗದಲ್ಲಿ ಎರಡು ಹೂವುಗಳಿವೆ. ಅದರ ಕೆಳಭಾಗದಲ್ಲಿ ನೆರಳಂತಿರುವುದು ನೀವು ಗಮನಿಸಬಹುದು. ಅದುವೇ ಕಪ್ಪು ಬಣ್ಣದ ಮಲಗಿರುವ ಬೆಕ್ಕಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:09 pm, Tue, 26 August 25