Optical Illusion: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಬಲ್ಲಿರಾ

ನಿಮ್ಮ ಮೆದುಳು ಎಷ್ಟು ಚುರುಕುತನದಿಂದ ಕೂಡಿದೆ ಎಂದು ತಿಳಿಯಬೇಕೇ, ಹಾಗಾದ್ರೆ ನೀವು ಈ ಒಗಟಿನ ಚಿತ್ರವನ್ನು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ. ಇದೀಗ ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಕಂಡು ಹಿಡಿಯಬೇಕು. ಈ ಟ್ರಿಕ್ಕಿ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ?, ಒಮ್ಮೆ ಪ್ರಯತ್ನಿಸಿ ನೋಡಿ.

Optical Illusion: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Feb 01, 2026 | 10:49 AM

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಒಗಟಿನತ್ತ ಆಸಕ್ತಿ ತೋರಿಸುತ್ತಾರೆ, ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಜೀಬ್ರಾಗಳ ಗುಂಪಿನಲ್ಲಿ ಅಡಗಿ ಕುಳಿತಿರುವ ಹುಲಿಯನ್ನು ಎಂಟು ಸೆಕೆಂಡುಗಳಲ್ಲಿ ಹುಡುಕುವ ಸವಾಲು ಇಲ್ಲಿದೆ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಹಚ್ಚ ಹಸಿರಿನ ಪ್ರದೇಶದಲ್ಲಿ ಜೀಬ್ರಾಗಳ ಹಿಂಡು ಓಡುತ್ತಿದೆ. ಇದೆಲ್ಲದರ ನಡುವೆ ಹುಲಿಯೊಂದು ಅಡಗಿ ಕುಳಿತಿದೆ. ಈ ಹುಲಿಯನ್ನು ತಕ್ಷಣಕ್ಕೆ ಹುಡುಕಲು ನಿಮಗೆ ಕಷ್ಟವಾಗಬಹುದು.

ಇದನ್ನೂ ಓದಿ: ಈ ಒಗಟಿನ ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕಿದ್ರೆ ನೀವೇ ಜಾಣರು

ಹುಲಿಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್ ಒಗಟುಗಳಲ್ಲಿನ ವಿನ್ಯಾಸಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಿರಬಹುದು. ಈ ಇಲ್ಯೂಷನ್ ಚಿತ್ರದಲ್ಲಿ ಹುಲಿ ಎಷ್ಟು ವೇಷ ಮರೆಸಿದೆ ಎಂದರೆ ಅದು ಯಾರಿಗೂ ಕಾಣದಂತೆ ಅಡಗಿಕೊಂಡಿದೆ. ನಿಮ್ಮ ಕಣ್ಣಿಗೆ ಹುಲಿಯೂ ಕಾಣದೇ ಇರಬಹುದು. ಈ ಕೆಳಗಿನ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಿದ್ದೇವೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ