Optical Illusion IQ Test : ನಿಮಗಿರುವ ಸಮಯ 5 ಸೆಕೆಂಡ್​, ಈ ಲೇಡೀಸ್ ಟೀ ರೂಮಿನಲ್ಲಿ ಎಷ್ಟು ಇಲಿಗಳು ಅಡಗಿವೆ?

IQ Test : ಆರಾಮಾಗಿ ಈ ಮಹಿಳೆಯರಿಬ್ಬರೂ ಚಹಾ ಕುಡಿಯುತ್ತ, ಹರಟುತ್ತ ಕುಳಿತಿದ್ದಾರೆ. ಈ ಕೋಣೆಯಲ್ಲಿ ಇಲಿಗಳು ಅಡಗಿ ಕುಳಿತಿವೆ. ಹಾಗಿದ್ದರೆ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ.

Optical Illusion IQ Test : ನಿಮಗಿರುವ ಸಮಯ 5 ಸೆಕೆಂಡ್​, ಈ ಲೇಡೀಸ್ ಟೀ ರೂಮಿನಲ್ಲಿ ಎಷ್ಟು ಇಲಿಗಳು ಅಡಗಿವೆ?
Edited By: ಶ್ರೀದೇವಿ ಕಳಸದ

Updated on: Sep 23, 2022 | 12:04 PM

Trending : ಆಪ್ಟಿಕಲ್​ ಇಲ್ಲ್ಯೂಷನ್ ಐಕ್ಯೂ ಟೆಸ್ಟ್​ (Optical Illusion IQ test). ಇಂಥ ಚಿತ್ರಗಳನ್ನು ಮುದ್ದಾಮ್ ನಿಮ್ಮ ಕಣ್ಣು ಮತ್ತು ಮೆದುಳಿನ ಮಧ್ಯೆ ಸವಾಲನ್ನು ಒಡ್ಡಿ ಭ್ರಮೆಗೆ ಬೀಳಿಸುವಂತೆ ಚಿತ್ರಿಸಲಾಗಿರುತ್ತದೆ. ಕಣ್ಣೆದುರಿಗೆ ಕಾಣುವ ಚಿತ್ರ ಒಂದಾದರೇ ಅದರಲ್ಲಿ ಅಡಗಿರುವ ಸತ್ಯ ಇನ್ನೇನೋ ಇರುತ್ತದೆ. ಆ ಸತ್ಯವನ್ನು ಕಂಡುಹಿಡಿಯಲು ನಿಮ್ಮ ಬುದ್ಧಿಶಕ್ತಿ ಕಾರ್ಯತತ್ಪರವಾಗಬೇಕಾಗುತ್ತದೆ. ಇಂಥ ಟೆಸ್ಟ್​ಗಳು ಮನೋವಿಶ್ಲೇಷಣೆಗೆ ಸಂಬಂಧಿಸಿದಂಥವು. ಒಂದು ಚಿತ್ರವನ್ನು ನೋಡುವುದರ ಮೂಲಕ ಯಾವೆಲ್ಲ ದೃಷ್ಟಿಕೋನದಿಂದ ವಿಷಯಗಳನ್ನು ಗ್ರಹಿಸುತ್ತೀರಿ ಎಂಬ ಮಾಹಿತಿಯನ್ನು ಇದು ಒದಗಿಸುತ್ತದೆ.

ಇಲ್ಲೊಂದು ಲೇಡೀಸ್​ ಟೀ ರೂಮ್​ ಇದೆ. ಇಡೀ ಚಿತ್ರವನ್ನು ನೋಡಿದಾಗ ಅಂಥ ಏನೂ ವಿಶೇಷ ಅನ್ನಿಸಲಾರದು. ಆದರೆ ಈ ಚಿತ್ರದಲ್ಲಿ ಒಟ್ಟು ಇಲಿಗಳಿವೆ ಹುಡುಕಿ ಎಂದು ಹೇಳಿದಾಗ ಸೂಕ್ಷ್ಮವಾಗಿ ಗಮನಿಸುತ್ತೀರಲ್ಲವೆ? ಹಾಗಾದರೆ ಹುಡುಕಿ, ನಿಮಗೆ ಕೊಟ್ಟಿರುವ ಸಮಯ ಕೇವಲ 5 ಸೆಕೆಂಡುಗಳು ಮಾತ್ರ.

ಒಂದು ಇಲಿ ಮಹಿಳೆಯ ಕುರ್ಚಿಯಡಿ ಅಡಗಿ ಕುಳಿತಿದೆ. ಉಳಿದವು? ಮಹಿಳೆಯರ ಉಡುಪು ಗಮನಿಸಿ ಅಥವಾ ಟೇಬಲ್​ ಹಿಂದೇನಾದರೂ ಅಡಗಿದ್ದು ಕಾಣುತ್ತಿದೆಯೇ? ಹೋಗಲಿ ಮಹಿಳೆಯರನ್ನು ಅಡಿಯಿಂದ ಮುಡಿಯವರೆಗೆ ಗಮನಿಸಿ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಾಗಿದ್ದರೆ ಗೊತ್ತಾಯಿತಾ? ಎಷ್ಟು ಇಲಿಗಳಿವೆ ಇಲ್ಲಿ ಎಂದು. ಹೌದು, ಇಲ್ಲಿ ಇರುವ ಇಲಿಗಳು ಎರಡು. ಈಗ ಎಡಬದಿಯ ಮಹಿಳೆಯ ತಲೆಯನ್ನು ಗಮನಿಸಿ.

ಮುಖಲಕ್ಷಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

 

Published On - 12:01 pm, Fri, 23 September 22

TV9 Web

TV9 Kannada

Read More
Loading...
Unable to load recommendations.
Follow Us