Optical Illusion Trending : ಎಂಥ ಒತ್ತಡವನ್ನೂ ಕಡಿಮೆ ಮಾಡುವ ಶಕ್ತಿ ಹಸಿರಿಗಿದೆ. ಹಾಗೆಯೇ ಅನನ್ಯ ಜೀವರಾಶಿಯನ್ನು ಅಡಗಿಸಿಟ್ಟುಕೊಂಡು ಸಲಹುವ ಸಾಮರ್ಥ್ಯವೂ ಇದಕ್ಕಿದೆ. ಈ ನೀಲಿ ಬೆಂಚು, ನೀಲಿ ದೀಪ ಸುತ್ತಲೂ ದಟ್ಟಮರಗಳು ಯಾರಿಗೂ ಕ್ಷಣ ಕೂತು ವಿರಮಿಸಿಕೊಳ್ಳಬೇಕು ಎನ್ನಿಸುವಂತಿದೆಯಲ್ಲ? ಹಾಗಿದ್ದರೆ ಬನ್ನಿ. ಹತ್ತೇ ಸೆಕೆಂಡಿನೊಳಗೆ ಇಲ್ಲಿರುವ ಇಗುವಾನಾ ಹಲ್ಲಿಯನ್ನು ಹುಡುಕಿ. ಆಗುಬಹುದಾ?
ಇದು ಆಪ್ಟಿಕಲ್ ಇಲ್ಲ್ಯೂಷನ್ ಒಂದೇ ಏಟಿಗೆ ನಿಮಗೆ ಇಗುವಾನಾ ಹಲ್ಲಿ ಸಿಗದು. ಏಕೆಂದರೆ ಶೇ. 99 ರಷ್ಟು ಜನಕ್ಕೆ ಹತ್ತು ಸೆಕೆಂಡು ಸಾಕಾಗದೇ ಸೋತಿದ್ದಾರೆ. 20 ಸೆಕೆಂಡು ತೆಗೆದುಕೊಂಡರೂ ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಇಗುವಾನಾ ಹಲ್ಲಿಯನ್ನು ನಿಗದಿತ ಸಮಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಗುರುತಿಸಲಾಗಿಲ್ಲ.
ಆದರೆ ನೀವು ಆಗಾಗ ಇಂಥ ಸಮಸ್ಯೆಗಳನ್ನು ಥಟ್ಟನೆ ಬಿಡಿಸುವ ಸಾಮರ್ಥ್ಯ ಹೊಂದಿದ್ದೀರಿ ಎನ್ನವುದು ಸಾಬೀತಾಗಿದೆ. ಹಾಗಾಗಿ ಖಂಡಿತ ನೀವು ಗುರುತಿಸಬಲ್ಲಿರಿ. ಪ್ರಯತ್ನಿಸಿದಿರಾ? ಗೊತ್ತಾಗುತ್ತಿಲ್ಲವಾ? ಸುಳಿವು ಬೇಕಾ?
ಈ ಚಿತ್ರದ ಎಡಬದಿಯ ಗಿಡಗಳನ್ನು ಗಮನಿಸಿ. ಮೇಲಿಂದ ಕೆಳಗೆ ಕೆಳಗಿಂದ ಮೇಲೆ. ಈಗ? ಈಗಲೂ ಕಾಣಲಿಲ್ಲವಾ? ಎಡಬದಿಗೆ ಮರದ ಟೊಂಗೆಯೊಂದು ಚಾಚಿಕೊಂಡಿದೆ. ಅಲ್ಲಿ ನೀಲಿ ಬಣ್ಣದಲ್ಲಿ ಇಗುವಾನಾ ಹಲ್ಲಿ ಇಣುಕಿಹಾಕಿದೆ. ಈಗ ಕಂಡಿತಾ?
ಇಲ್ಲಿದೆ ಇಗುವಾನಾ ಹಲ್ಲಿಇಷ್ಟೇ ಇಷ್ಟು ಕಾಣುವ ಇಗುವಾನಾ ಹಲ್ಲಿ ಈತನಕ ಎಷ್ಟೊಂದು ಕಾಡಿತಲ್ಲವೆ?
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ