ಒಳಗಿದ್ದಾಗ ಬಿಳಿ, ಹೊರಗಿದ್ದಾಗ ಗುಲಾಬಿ; ಎಲ್ಲ ಆ ಸೂರ್ಯನ ಕರಾಮತ್ತು!
Dress : ‘ರೀ ಮೇಡಮ್ಮೋರೆ, ನಿಮ್ಮ ಡ್ರೆಸ್ನೊಳಗೆ ಯಾರೋ ಒಬ್ಬ ಮಹಾಶಯ ಅಡಗಿ ಕೂತಿದಾರೆ. ಅವರು ಸ್ಪೀಡಾಗಿ ಡ್ರೆಸ್ಸಿಗೆ ಬಣ್ಣಾ ಬಳೀತಿದಾರೆ, ಅಷ್ಟೇಯಾ...’ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ನೋಡಿದಲ್ಲಿ.
Viral Video : ಒಳಗೊಂದು ಬಣ್ಣ ಹೊರಗೊಂದು ಬಣ್ಣ. ಬೇಕಾದಾಗ ಬೇಕಾದ ಬಣ್ಣವನ್ನು ಮೇಲೆಮಾಡಿ ತೊಡಬಹುದಾದಂಥ ಬಟ್ಟೆಗಳ ಬಗ್ಗೆ ನಿಮಗೆ ಗೊತ್ತಿದೆ. ಆದರೆ ನೆರಳಿನಲ್ಲಿದ್ದಾಗ ಒಂದು ಬಣ್ಣ, ಬಿಸಿಲಿಗೆ ಬಂದರೆ ಇನ್ನೊಂದು ಬಣ್ಣ. ಇಂತ ಡ್ರೆಸ್ ನೀವು ನೋಡಿದ್ದೀರಾ? ಹಾಗಿದ್ದರೆ ಈ ವಿಡಿಯೋ ನೋಡಿ. ಇಜ್ಜಿ ಎನ್ನುವ ಕಲಾವಿದೆ ಇಂಥ ಮ್ಯಾಜಿಕ್ ಡ್ರೆಸ್ ಅನ್ನು ತೊಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತಾನು ಖರೀದಿಸಿದ PH5 ಎಂಬ ಬ್ರ್ಯಾಂಡ್ ಕೂಡ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿView this post on Instagram
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ವೈರಲ್ ಆಗಿದೆ. ಈತನಕ 25.6 ಮಿಲಿಯನ್ ಜನರು ನೋಡಿದ್ದಾರೆ. 2.3 ಮಿಲಿಯನ್ ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
‘ವಾವ್ ಕೂಲ್’ ಎಂದಿದ್ದಾರೆ ಒಬ್ಬರು. ‘ಎಲ್ಲಾ ಸುಳ್ಳು. ಈ ಡ್ರೆಸ್ನೊಳಗೆ ಯಾರೋ ಒಬ್ಬ ವ್ಯಕ್ತಿ ಅಡಗಿ ಕುಳಿತಿದ್ದಾರೆ. ಅತ್ಯಂತ ಸ್ಪೀಡಾಗಿ ನಿಮ್ಮ ಉಡುಗೆಗೆ ಬಣ್ಣ ಹಚ್ಚುತ್ತಿದ್ದಾರೆ’ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು. ‘ಇದು ನಿಜಕ್ಕೂ ಅಚ್ಚರಿ ಮತ್ತು ಅದ್ಭುತ’ ಎಂದು ಮಗದೊಬ್ಬರು ಮೆಚ್ಚಿದ್ದಾರೆ.
ಬೇಕಾ ನಿಮಗೂ ಇಂಥ ಡ್ರೆಸ್?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ