ಟೀಶರ್ಟ್ ಲೇಬಲ್ ನೆನಪಾಗ್ತಿದೆಯಾ ಈ ಚಾಕೋಲೇಟ್ ನೋಡ್ತಿದ್ದ ಹಾಗೆ?
Chocolate : ಸ್ವಲ್ಪ ಮುರಿದರೆ ಜಾಸ್ತಿ, ಜಾಸ್ತಿ ಮುರಿದರೆ ಸ್ವಲ್ಪ. ಅಂತೂ ಎಷ್ಟು ಬೇಕೋ ಅಷ್ಟು ಚಾಕೋಲೇಟನ್ನು ತಿನ್ನಲು ಆಗುವುದೇ ಇಲ್ಲ ಎಂದು ಬೇಸರಿಸಿಕೊಳ್ಳುವವರಿಗೆ ಇಲ್ಲೊಂದು ಮಜಾ ಇದೆ!
Viral : ಸ್ವಲ್ಪ ಚಾಕೋಲೇಟ್ ತಿನ್ನಿ ಅದು ನಿಮಗೆ ಆ ಕ್ಷಣಕ್ಕೆ ಕೊಡುವ ಶಕ್ತಿ ಮಾತ್ರ ಅದ್ಭುತ. ಎನರ್ಜಿ ಬೂಸ್ಟರ್ನಂತೆ ಚಾಕೋಲೇಟ್. ಮಕ್ಕಳನ್ನು ಗಮನಿಸಿ. ಮೊದಲೇ ಪುಟಿಯುವ ಚೆಂಡುಗಳು. ಇನ್ನು ಚಾಕೋಲೇಟ್ ತಿಂದರೆ ಕೇಳಬೇಕೆ? ಆದರೆ ದೊಡ್ಡವರಾದ ನಿಮಗೆ ಇಡೀ ದೊಡ್ಡ ಚಾಕೋಲೇಟ್ ಬಾರನ್ನು ತಿನ್ನುವುದು ಜಾಸ್ತಿ ಎನ್ನಿಸಬಹುದು. ಆಗ ಎಷ್ಟು ಬೇಕೋ ಅಷ್ಟು ಮುರಿಯುವುದು ಚೂರು ಕಷ್ಟ. ಹಾಗಂತ ಇನ್ನು ಇದಕ್ಕಾಗಿ ಬಹಳ ಯೋಚಿಸಬೇಕಿಲ್ಲ. ಏಕೆಂದರೆ ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಚಾಕೋಲೇಟ್ ಬಾರಿನಲ್ಲಿ ಬಟ್ಟೆಗಳ ಮೇಲೆ ಬರೆದಿರುವಂತೆ ವಿವಿಧ ಅಳತೆಗಳನ್ನು ನಮೂದಿಸಿದ್ದಾರೆ!
this is such a brilliant idea im in love pic.twitter.com/gLsjLKJ0P7
ಇದನ್ನೂ ಓದಿ— goated takes™ (@awtitty) October 25, 2022
ಇನ್ನು ನೀವು ಎಷ್ಟು ಬೇಕೋ ಅಷ್ಟಷ್ಟನ್ನೇ ಮುರಿದು ತಿನ್ನುವುದು ಸುಲಭ. ಈ ಐಡಿಯಾ ಚೆನ್ನಾಗಿದೆಯಲ್ಲ? ಟೀಶರ್ಟ್ನ ಲೇಬಲ್ ಮೇಲೆ ಬರೆದಂತೆ “XS,” “S,” “L,” ಮತ್ತು “XL” ನೋಡಲು ಮಜಾ. ತಿನ್ನಲೂ ಮಜಾ ಮತ್ತು ಸುಲಭ. ಪುಡಿಪುಡಿಯಾಯಿತು ಎಂದೋ, ಜಾಸ್ತಿ ಮುರಿಯಿತು ಎಂದೋ ಯೋಚಿಸಬೇಕಿಲ್ಲ. ಎಷ್ಟು ಬೇಕೋ ಅಷ್ಟು ತಿಂದು ಸಮಾಧಾನವಾಗಿ ಬ್ಯಾಗಿನೊಳಗಿಟ್ಟುಕೊಳ್ಳಬಹುದು.
ಈತನಕ ಸುಮಾರು 4,000 ಜನರು ಈ ಟ್ವೀಟ್ ಇಷ್ಟಪಟ್ಟಿದ್ದಾರೆ. ಅನೇಕರುಈ ಐಡಿಯಾ ಅನ್ನು ಹೊಗಳಿದ್ದಾರೆ. ‘ಎಲ್ಲಿದ್ದೀಯಪ್ಪಾ ಸೃಷ್ಟಿಕರ್ತ. ನಿಮ್ಮ ಪ್ರತಿಭೆ ಅದ್ಭುತ. ಒಮ್ಮೆ ಭೇಟಿ ಮಾಡಬೇಕಿದೆ.’ ಎಂದಿದ್ದಾರೆ ಒಬ್ಬರು. ‘ನನಗೆ XS ಸರಿ ಇದೆ’ ಎಂದಿದ್ದಾರೆ ಇನ್ನೂ ಒಬ್ಬರು. ‘ನೀವೇನೇ ತಲೆ ಉಪಯೋಗಿಸಿ. ಆದರೆ ನಾನು ಮಾತ್ರ ಈ ಬಾರನ್ನು ಒಂದೇ ಏಟಿಗೆ ತಿನ್ನುತ್ತೇನೆ’ ಎಂದಿದ್ಧಾರೆ ಮತ್ತೊಬ್ಬರು.
ಅಲ್ವಾ? ಇಷ್ಟಿಷ್ಟೇ ಮುರಿದಿಟ್ಟುಕೊಂಡು ಚಾಕೋಲೇಟ್ ತಿನ್ನುವುದು ಸ್ವಲ್ಪ ಏನು ಬಾರೀ ಕಷ್ಟವೇ ಅಲ್ಲವೇ!?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:32 am, Sat, 29 October 22