Optical Illusions: ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವೇ?

ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ರೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಿ. ಎಷ್ಟೇ ಹುಡುಕಿದರೂ ಚಿರತೆ ಇನ್ನೂ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೆಂದಾದರೆ, ಲೇಖನದ ಅಂತ್ಯದಲ್ಲಿ ಚಿರತೆ ಇರುವ ಜಾಗವನ್ನು ಹಳದಿ ಬಣ್ಣದ ವೃತ್ತದಲ್ಲಿ ಗುರುತಿಸಲಾಗಿದೆ.

Optical Illusions: ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವೇ?
ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಿ
Follow us
ಅಕ್ಷತಾ ವರ್ಕಾಡಿ
|

Updated on: Jul 05, 2024 | 10:13 AM

ನಿಮ್ಮ ಕಣ್ಣಿಗೆ ಸವಾಲು ನೀಡುವ ಆಪ್ಟಿಕಲ್ ಇಲ್ಯೂಷನ್​​​ ಸವಾಲಿನ ಆಟ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿರುತ್ತವೆ. ಇದು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಮತ್ತು ಮೆದುಳನ್ನು ಚುರುಕುಗೊಳಿಸುವಲ್ಲಿ ಸಹಾಯಕವಾಗಿದೆ. ಇದೀಗ ವೈರಲ್​​​ ಆಗಿರುವ ಫೋಟೋದಲ್ಲಿ ನೀವು ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಬೇಕಿದೆ. ಆದರೆ ಕೇವಲ 10ರಿಂದ 15 ಸೆಕೆಂಡುಗಳ ಒಳಗಡೆ ಚಿರತೆ ಎಲ್ಲಿದೆ ಎಂದು ನೀವು ಕಂಡುಹಿಡಿಯಬೇಕು.

ಹಿಮಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಚಿರತೆ ಎಲ್ಲಿದೆ ಎಂದು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ರೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಅಡಗಿರುವ ಚಿರತೆಯನ್ನಯ ಪತ್ತೆ ಹಚ್ಚಿ ನಮಗೆ ತಿಳಿಸಿ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಕೆಲವೇ ಕೆಲವು ಸೆಕೆಂಡುಗಳಲ್ಲಿ ನೀವು ಚಿರತೆ ಇರುವ ಜಾಗವನ್ನು ಪತ್ತೆ ಹಚ್ಚುವಿರಿ.

ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ? ಕೆಲ ಹೊತ್ತಿನ ವರೆಗೆ ಚಿತ್ರವನ್ನು ಸರಿಯಾಗಿ ನೋಡಿ. ಸೂಕ್ಷ್ಮವಾಗಿ ನೋಡಿದರೆ ಮಾತ್ರ ನಿಮಗೆ ಚಿರತೆಯೊಂದು ನಿಂತಿರುವುದು ಕಾಣಬಹುದು. ಆದ್ರೆ ಎಷ್ಟೇ ಹುಡುಕಿದರೂ ಚಿರತೆ ಇನ್ನೂ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೆಂದಾದರೆ, ಈ ಕೆಳಗಿನ ಚಿತ್ರದಲ್ಲಿ ಚಿರತೆ ಇರುವ ಜಾಗವನ್ನು ಹಳದಿ ಬಣ್ಣದ ವೃತ್ತದಲ್ಲಿ ಗುರುತಿಸಲಾಗಿದೆ.

ಕೆಳಗಿನ ಚಿತ್ರದಲ್ಲಿ ಚಿರತೆ ಇರುವ ಜಾಗವನ್ನು ನೋಡಿ:

ಇದನ್ನೂ ಓದಿ: ಇದೆಂಥಾ ಫುಟ್ಬಾಲ್‌ ಪ್ರೇಮ; ಸಾವಿನ ಮನೆಯಲ್ಲಿ ಶವದ ಮುಂದೆ ಫುಟ್ಬಾಲ್‌ ಮ್ಯಾಚ್‌ ವೀಕ್ಷಿಸಿದ ಕುಟುಂಬಸ್ಥರು

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಪ್ಟಿಕಲ್ ಭ್ರಮೆ ಫೋಟೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ