Love : ಮನುಷ್ಯರಾದ ನಮಗಷ್ಟೇ ಪ್ರಾಣಿಗಳ ಒಡನಾಟ ಬೇಕೆನ್ನಿಸುವುದಿಲ್ಲ. ಪ್ರಾಣಿಗಳಿಗೂ ಮನುಷ್ಯರ ಒಡನಾಟ ಬೇಕೆನ್ನಿಸುತ್ತದೆ. ಇಲ್ಲೊಬ್ಬ ತಾಯಿ ಪ್ರಾಣಿಸಂಗ್ರಹಾಲಯಕ್ಕೆ ಮಗುವಿನೊಂದಿಗೆ ಹೋಗಿದ್ದಾರೆ. ಇಲ್ಲಿರುವ ಒರಾಂಗುಟಾನ್ ಕೈ ಮಾಡಿ ಈ ಮಗುವನ್ನು ತೋರಿಸಲು ಕೇಳಿಕೊಳ್ಳುತ್ತದೆ. ಮಗುವಿನ ತಾಯಿ ಅದರ ಬಳಿ ಮಗುವನ್ನು ಹಿಡಿಯುತ್ತಾರೆ. ಆಗದು ಅದರ ಕೆನ್ನೆಗೆ ಗಾಜಿನಗೋಡೆಯಿಂದಾಚೆಯೇ ಮುತ್ತು ಕೊಟ್ಟು ಮುದ್ದಿಸಲು ನೋಡುತ್ತದೆ. ಎಂಥ ಹೃದಯಸ್ಪರ್ಶಿಯಾಗಿದೆಯಲ್ಲ!
This orangutan at the Louisville Zoo in Kentucky wanted a closer look at one of its visitors, a 3-month-old human baby. https://t.co/bpv68bHgj8 pic.twitter.com/oGxl0QZaTq
ಇದನ್ನೂ ಓದಿ— ABC News (@ABC) May 23, 2023
ಈ ಮೂರು ತಿಂಗಳ ಹಸುಳೆಯನ್ನು ಹತ್ತಿರದಿಂದ ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನು ನೆನಪಿಸುವಂತಿಲ್ಲವೆ? ಬಹುಶಃ ಗಾಜಿನಗೋಡೆ ಇಲ್ಲದಿದ್ದರೆ ಖಂಡಿತ ಅದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿತ್ತು.
ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ”ಯುವಕ”ನ ಲಗೇಜು ತಾಲೀಮು
ಕೆಂಟಕಿ ಝೂನಲ್ಲಿಯ ಈ ದೃಶ್ಯವನ್ನು ನೋಡಿ ಅನೇಕರು ಈ ವಿಡಿಯೋ ನೋಡಿ ಆನಂದತುಂದಿಲರಾಗಿದ್ದಾರೆ. ನಾಲ್ಕು ಕಾಲುಗಳು ಮತ್ತು ಮೈತುಂಬಾ ಕೂದಲು ಇವೆ ಎಂದ ಮಾತ್ರಕ್ಕೆ ಇವು ಪ್ರಾಣಿಗಳು. ಆದರೆ ಒರಾಂಗುಟಾನ್ ಥೇಟ್ ಮನುಷ್ಯರಂತೆಯೇ ಎಂದಿದ್ಧಾರೆ ಒಬ್ಬರು. ಇವುಗಳು ಮನುಷ್ಯರ ಸಹವಾಸದಲ್ಲಿರಲು ಮತ್ತು ಪ್ರೀತಿಸಲು ಹಾತೊರೆಯುತ್ತವೆ ಎಂದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಸವಾರ್ ಲೂ; ಅರೆ! ಈಕೆ ಥೇಟ್ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು
ನಾನೊಮ್ಮೆ ಒರಾಂಗುಟಾನ್ ನೋಡಲು ಹೋದಾಗ, ನನ್ನನ್ನು ಕರೆದು ಬ್ಯಾಗ್ನಲ್ಲಿ ಏನಿದೆ ತೋರಿಸು ಎಂದು ಹೇಳಿದ್ದಳು. ಬ್ಯಾಗ್ ಕೊಟ್ಟಾಗ ಅದರೊಳಗೆ ಏನೇನಿದೆ ಎಂದು ಕೈಹಾಕಿ ತಡಕಾಡಿ ನೋಡಿಕೊಟ್ಟಳು ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. ಈ ವಿಡಿಯೋದಲ್ಲಿರುವ ಒರಾಂಗುಟಾನ್ ನೋಡಿದರೆ ಇದು ಪ್ರಾಣಿಸಂಗ್ರಹಾಲಯದಲ್ಲಿರದೆ, ನಮ್ಮೊಂದಿಗೆ ಇರಬೇಕಿತ್ತು ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ಧಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:18 pm, Wed, 24 May 23