ರೈಲ್ವೆ ಹಳಿಗಳ ಮೇಲೆ ಕಲ್ಲು ಇತ್ಯಾದಿ ಯಾವುದೇ ವಸ್ತುಗಳನ್ನು ಇಟ್ಟು ಮೋಜು ಮಸ್ತಿ ಮಾಡಬಾರದು ಎಂದು ಎಚ್ಚರಿಕೆಗಳನ್ನು ನೀಡಲಾಗುತ್ತಿರುತ್ತದೆ. ಹೀಗಿದ್ದರೂ ಕೆಲವೊಬ್ಬರು ರೈಲು ಬರುವ ಸಂದರ್ಭದಲ್ಲಿ ರೈಲ್ವೆ ಹಳಿಯ ಮೇಲೆ ಕಲ್ಲು, ರಾಡ್ ಇತ್ಯಾದಿ ವಸ್ತುಗಳನ್ನಿಟ್ಟು ಇಟ್ಟು ದುಶ್ಕೃತ್ಯ ಮೆರೆಯುತ್ತಿರುತ್ತಾರೆ. ಹೀಗೆ ರೈಲ್ವೆ ಹಳಿಗಳ ಮೇಲೆ ಇಂತಹ ವಸ್ತುಗಳನ್ನು ಇಟ್ಟಾಗ ವೇಗವಾಗಿ ಬರುವ ರೈಲು ಹಳಿ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರ ಕನಿಷ್ಠ ಜ್ಞಾನವೂ ಇಲ್ಲದೆ ಇಲ್ಲೊಬ್ಬ ಯೂಟ್ಯೂಬರ್ ಲೈಕ್ಸ್, ವೀವ್ಸ್, ಹಣಕ್ಕಾಗಿ ರೈಲಿನ ಮೇಲೆ ದೊಡ್ಡ ಕಲ್ಲುಗಳು, ಸೈಕಲ್, ಗ್ಯಾಸ್ ಸಿಲಿಂಡರ್ ಇಟ್ಟು ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆತನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ಲಾಲ್ಗೋಪಾಲ್‌ಗಂಜ್‌ನ ಗುಲ್ಜಾರ್ ಶೇಖ್ ಎಂಬ ಯುವಕ ಯುಟ್ಯೂಬ್‌ನಲ್ಲಿ ಹಣ, ವೀವ್ಸ್ ಗಳಿಸಲು ರೈಲ್ವೆ ಟ್ರಾಕ್ ಮೇಲೆ ಸೈಕಲ್, ಗ್ಯಾಸ್ ಸಿಲಿಂಡರ್ ಇತ್ಯಾದಿ ವಸ್ತುಗಳನ್ನಿಟ್ಟು ಡೇಂಜರಸ್ ರೀಲ್ಸ್ ಮಾಡಿದ್ದಾನೆ. ತನ್ನ ಹುಚ್ಚಾಟಕ್ಕಾಗಿ ಸಾವಿರಾರು ಜೀವದ ಜೊತೆ ಆಟವಾಡಿದ ಈತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
This is Mr Gulzar Sheikh from Lalgopalganj, UP who puts random things Infront of trains for YouTube Money, He is putting lives of 1000s of passengers in danger.
Strict action should be taken against him, @RailwayNorthern @rpfnr_ @drm_lko Sharing all the information Below👇 pic.twitter.com/g8ZipUdbL6— Trains of India (@trainwalebhaiya) July 31, 2024
Trains Of India ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಲೈಕ್ಸ್. ವೀವ್ಸ್‌ಗಾಗಿ ರೈಲ್ವೆ ಹಳಿ ಮೇಲೆ ಅಪಾಯಕಾರಿ ವಸ್ತುಗಳನ್ನಿಟ್ಟು ವಿಡಿಯೋ ಮಾಡಿ ಸಾವಿರಾರು ಜೀವಗಳ ಜೊತೆ ಆಟವಾಡಿದ ಈತವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಈ ಯುವಕ ರೈಲು ಇನ್ನೇನು ಬರಬೇಕು ಎನ್ನುವಷ್ಟರಲ್ಲಿ ರೈಲ್ವೆ ಹಳಿಗಳ ಮೇಲೆ ಕೋಳಿ, ಕಲ್ಲುಗಳು, ಸೈಕಲ್, ಗ್ಯಾಸ್ ಸಿಲಿಂಡರ್ ಇಟ್ಟು ಡೇಂಜರಸ್ ವಿಡಿಯೋ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅರರೇ… ಹಾವಿಗೂ ರೊಮ್ಯಾಂಟಿಕ್ ಲಿಪ್ ಕಿಸ್ ಕೊಟ್ಟ ಯುವಕ
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜನರ ಪ್ರಾಣಕ್ಕೆ ಕುತ್ತು ತರುವ ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕುʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼದಯವಿಟ್ಟು ಇವನನ್ನು ಬಂಧಿಸಿʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ