Viral Video : ಒಂದೇ ಬಲೂನು, ಹತ್ತಾರು ನಾಯಿಗಳು. ಆದರೆ ಆ ಬಲೂನನ್ನು ನೆಲಕ್ಕೆ ಬೀಳಿಸದಂತೆ ಮತ್ತು ಉಳಿದವರಿಗೆ ಸಿಗದಂತೆ ಒಂದೇ ಒಂದು ನಾಯಿ ಮಾತ್ರ ಅದನ್ನು ಗುರಿಯಾಗಿಸಿಕೊಂಡು ಜಾಣತನದಿಂದ ಆಡುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ನೆಟ್ಟಿಗರನ್ನು ನಾನಾ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ. ಉಳಿದ ನಾಯಿಗಳನ್ನು ಹಿಂದಿಕ್ಕಿ ತಾನು ಮಾತ್ರ ಇದನ್ನು ಸಾಧಿಸಿಕೊಳ್ಳಬೇಕು ಎಂದು ಸ್ಪರ್ಧೆಗೆ ಬಿದ್ದಿರುವ ಈ ನಾಯಿಯನ್ನು ಆಧುನಿಕ ಮನುಷ್ಯನ ಜಾಣತನಕ್ಕೆ ಹೋಲಿಸಬಹುದಲ್ಲವೆ?
So much fun.. ? pic.twitter.com/2DBIHqfEbF
— Buitengebieden (@buitengebieden) November 5, 2022
ಅನೇಕರು ಈ ವಿಡಿಯೋ ನೋಡಿ ತಮ್ಮ ನಾಯಿ ಬೆಕ್ಕುಗಳ ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ. 75,500 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸುಮಾರು 500 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮ್ಮ ನೋಟವನ್ನು ವ್ಯಕ್ತಪಡಿಸಿದ್ದಾರೆ.
ಶಕ್ತಿಶಾಲಿಯಾದವನೇ ಗೆಲ್ಲುವುದು ಎಂದು ಒಬ್ಬರು. ಗುರಿ ಎಂದರೆ ಹೀಗೇ ಇಡಬೇಕು ಎಂದು ಇನ್ನೊಬ್ಬರು. ಸ್ವಲ್ಪವೂ ತನ್ನ ಗೆಳೆಯರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಕರುಣೆ ಇಲ್ಲವಾ ಎಂದು ಮತ್ತೊಬ್ಬರು. ದೂರದಿಂದ ಓಡಿಬರುವ ಆ ಒಂಟಿನಾಯಿ ನಾನೇ ಎಂದು ಮಗದೊಬ್ಬರು. ಎಲ್ಲಾ ನನಗೇ ಬೇಕು, ನಾನೇ ಗೆಲ್ಲಬೇಕು ಎಂಬ ಸ್ವಕೇಂದ್ರಿತ ಮನಃಸ್ಥಿತಿಯನ್ನು ಇದು ಸೂಚಿಸುವುದಿಲ್ಲವಾ ಎಂದು ಇನ್ನೂ ಒಬ್ಬರು.
ಆಡಾಡುತ್ತಲೇ ಜೊತೆಗಿರುವ ತನ್ನ ಸ್ನೇಹಿತರನ್ನು ಹಿಂದಿಕ್ಕಿ ರೂಪಿಸುವ ಈ ತಂತ್ರಗಾರಿಕೆ ನಾಯಿಗೆ ಚೆನ್ನಾಗಿ ಒದಗಿದೆಯಲ್ಲವೆ?
ಏನು ಅನ್ನಿಸುತ್ತೆ ನಿಮಗೆ ಇದನ್ನು ನೋಡಿದಾಗ…
ಮತ್ತಷ್ಟು ವೈರಲ್ ವಿಡಿಯೋಗಳನ್ನು ಕ್ಲಿಕ್ ಮಾಡಿ