Viral: ಮೊಬೈಲ್‌ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಂಗಿಲ್ಲ, ವಿದ್ಯಾರ್ಥಿಗಳ ಫೋನ್‌ ಪುಡಿ ಪುಡಿ ಮಾಡಿದ ಮದರಸ ಗುರು

ಸಾಮಾನ್ಯವಾಗಿ ಮದರಸಗಳಲ್ಲಿ ಕುರಾನ್‌, ಹದೀಸ್‌, ಇಸ್ಲಾಂನ ಕಟ್ಟುಪಾಡುಗಳು ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಗುಣಸ್ವಭಾವಗಳ ಬಗ್ಗೆ ಭೋದಿಸಲಾಗುತ್ತದೆ. ಆದ್ರೆ ಇಲ್ಲೊಬ್ರು ಮದರಸ ಗುರು ಮೊಬೈಲ್‌ ಬಳಸಬಾರದೆಂದು ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ. ಹೌದು ಮೊಬೈಲ್‌ ಫೋನ್‌ ನಾಸ್ತಿಕರ ಆವಿಷ್ಕಾ ಅದನ್ನೆಲ್ಲಾ ನಾವು ಬಳಸಂಗಿಲ್ಲ ಎಂದು ಹೇಳುತ್ತಾ ಮದರಸ ವಿದ್ಯಾರ್ಥಿಗಳ ಫೋನನ್ನು ಸಾಲಾಗಿ ಸುತ್ತಿಗೆಯಿಂದ ಒಡೆದು ಹಾಕಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Viral: ಮೊಬೈಲ್‌ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಂಗಿಲ್ಲ, ವಿದ್ಯಾರ್ಥಿಗಳ ಫೋನ್‌ ಪುಡಿ ಪುಡಿ ಮಾಡಿದ ಮದರಸ ಗುರು
Edited By:

Updated on: Sep 11, 2024 | 3:43 PM

ಇತ್ತೀಚಿಗಂತೂ ಶಾಲೆಗೆ ಹೋಗುವ ಮಕ್ಕಳು ಈ ಸ್ಮಾರ್ಟ್‌ಫೋನ್‌ಗಳಿಗೆ ದಾಸರಾಗುತ್ತಿದ್ದಾರೆ. ಹೌದು ಈ ಮಕ್ಳು ಆಟ-ಪಾಠ, ಊಟವನ್ನು ಬಿಟ್ಟು ಕೂಡಾ ಗಂಟೆಗಟ್ಟಲೆ ಮೊಬೈಲ್‌ ನೋಡುತ್ತಾ ಕೂತು ಬಿಡುತ್ತಾರೆ. ಮಕ್ಕಳ ಸ್ಮಾರ್ಟ್‌ಫೋನ್‌ ಗೀಳು ಪೋಷಕರಿಗೆ ದೊಡ್ಡ ತಲೆಬಿಸಿಯಾಗಿಬಿಟ್ಟಿದೆ. ಹೀಗೆ ಪಾಠ ಕೇಳದೆ ಧಾರ್ಮಿಕ ಆಚಾರ ವಿಚಾರಗಳನ್ನು ಪಾಲಿಸದೆ ಹೆಚ್ಚಿನ ಸಮಯ ಮೊಬೈಲ್‌ ನೋಡುತ್ತಲೇ ಕಾಲ ಕಳೆಯುತ್ತಿರುವ ಮಕ್ಕಳಿಗೆ ನೀತಿ ಪಾಠ ಕಲಿಸಲು ಇಲ್ಲೊಬ್ರು ಮದರಸ ಗುರು ಮೊಬೈಲ್‌ ಫೋನ್‌ ನಾಸ್ತಿಕರ ಆವಿಷ್ಕಾ ಅದನ್ನೆಲ್ಲಾ ನಾವು ಬಳಸಂಗಿಲ್ಲ ಎಂದು ಬುದ್ಧಿಮಾತು ಹೇಳುತ್ತಾ ಮದರಸ ವಿದ್ಯಾರ್ಥಿಗಳ ಫೋನನ್ನು ಸಾಲಾಗಿ ಸುತ್ತಿಗೆಯಿಂದ ಒಡೆದು ಹಾಕಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಪಾಕಿಸ್ತಾನ ಮದರಸವೊಂದರಲ್ಲಿ ನಡೆದ ಘಟನೆ ಇದಾಗಿದ್ದು, ಮಕ್ಕಳು ಫೋನ್‌ ಬಳಕೆ ಮಾಡುವುದನ್ನು ತಪ್ಪಿಸಲು ಮದರಸ ಶಿಕ್ಷಕರು ವಿದ್ಯಾರ್ಥಿಗಳ ಮುಂದೆಯೇ ಅವರುಗಳ ಮೊಬೈಲ್‌ ಫೋನ್‌ಗಳನ್ನು ಸುತ್ತಿಗೆಯಿಂದ ಒಡೆದು ಹಾಕಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು EuropInvasionn ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಫೋನ್‌ಗಳು ನಾಸ್ತಿಕರ ಆವಿಷ್ಕಾರ ಎಂಬ ಕಾರಣಕ್ಕಾಗಿ ಪಾಕಿಸ್ತಾನದಲ್ಲಿ ವಿದ್ಯಾರ್ಥಿಗಳ ಫೋನ್‌ ಒಡೆದು ಹಾಕಿದ ಮದರಸ ಶಿಕ್ಷಕ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಮೊಬೈಲ್‌ ಫೋನ್‌ಗಳು ನಾಸ್ತಿಕರ ಆವಿಷ್ಕಾರ ಅದನ್ನೆಲ್ಲಾ ನಾವು ಬಳಸಂಗಿಲ್ಲ ಎನ್ನುತ್ತಾ ವಿದ್ಯಾರ್ಥಿಗಳ ಮುಂದೆಯೇ ಅವರುಗಳ ಮೊಬೈಲ್‌ ಫೋನ್‌ಗಳನ್ನು ಮದರಸ ಶಿಕ್ಷಕರೊಬ್ಬರು ಸುತ್ತಿಗೆಯಿಂದ ಒಡೆದು ಹಾಕುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವಾಗ ಕಾಣಿಸಿಕೊಂಡ ಹೆರಿಗೆ ನೋವು; ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ವೈದ್ಯಕೀಯ ತಂಡ

ಸೆಪ್ಟೆಂಬರ್‌ 8 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮತ್ಯಾಕೆ ಈ ದೃಶ್ಯವನ್ನೆಲ್ಲಾ ಫೋನ್‌ನಲ್ಲಿ ರೆಕಾರ್ಡ್‌ ಮಾಡಬೇಕಿತ್ತುʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರುಗಳು ಶಿಲಾಯುಗದ ಕಡೆ ವಾಪಾಸ್‌ ಹೋಗುತ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊಬೈಲ್‌ ಫೋನ್‌ ಬಳಸುವುದು, ಟಿವಿ ನೋಡುವುದು ಇವೆಲ್ಲವೂ ಇಸ್ಲಾಮಿನಲ್ಲಿ ಹರಾಮ್‌ʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ