ಕಾಲ್‌ ಸೆಂಟರ್‌ಗೆ ನುಗ್ಗಿ ಲ್ಯಾಪ್‌ಟಾಪ್‌, ಮಾನಿಟರ್‌ ಸೇರಿದಂತೆ ಸಿಕ್ಕಿದ್ದನ್ನೆಲ್ಲಾ ದೋಚಿದ ಪಾಕಿಸ್ತಾನದ ಜನ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2025 | 11:43 AM

ಇತ್ತೀಚಿಗಷ್ಟೇ ಮದರಸದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್‌ ಕೂಟದ ಊಟವನ್ನು ಸವಿಯಲು ಪಾಕಿಸ್ತಾನಿಯರು ಮುಗಿಬಿದ್ದ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು. ಇದೀಗ ಇಲ್ಲೊಂದು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದ್ದು, ಚೀನಾ ಮೂಲದ ನಕಲಿ ಕಾಲ್‌ ಸೆಂಟರ್‌ಗೆ ನುಗ್ಗಿದ ಅಲ್ಲಿನ ಜನ ಲ್ಯಾಪ್‌ಟಾಪ್‌, ಮಾನಿಟರ್‌ ಸೇರಿದಂತೆ ಕೈಗೆ ಸಿಕ್ಕ ಬೆಳೆಬಾಳುವ ಉಪಕರಣಗಳನ್ನೆಲ್ಲಾ ಲೂಟಿ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕಾಲ್‌ ಸೆಂಟರ್‌ಗೆ ನುಗ್ಗಿ ಲ್ಯಾಪ್‌ಟಾಪ್‌, ಮಾನಿಟರ್‌ ಸೇರಿದಂತೆ ಸಿಕ್ಕಿದ್ದನ್ನೆಲ್ಲಾ ದೋಚಿದ ಪಾಕಿಸ್ತಾನದ ಜನ; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us on

ಪಾಕಿಸ್ತಾನ, ಮಾ. 17: ಭಯೋತ್ಪಾದನೆ (Terrorism), ಆರ್ಥಿಕ ಪ್ರಕ್ಷುಬ್ಧತೆಯ ಕಾರಣದಿಂದ ಪಾಕಿಸ್ತಾನ (Pakistan) ಆಗಾಗ್ಗೆ ಸುದ್ದಿಯಲ್ಲಿರುತ್ತವೆ. ಇದಲ್ಲದೆ ಈ ದೇಶ ಇಲ್ಲಿನ ಜನರ ವಿಚಿತ್ರ ವರ್ತನೆಯ ಕಾರಣದಿಂದಲೂ ಸುದ್ದಿಯಾಗುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಚೀನಾ (China) ಮೂಲದ ಕಾಲ್‌ ಸೆಂಟರ್‌ಗೆ (call centre) ನುಗ್ಗಿದ್ದ ಪಾಕಿಸ್ತಾನಿಗರು ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್‌ (laptops), ಮಾನಿಟರ್‌ ಸೇರಿದಂದೆ ಅಲ್ಲಿದ್ದ ಬೆಲೆಬಾಳುವ ಉಪಕರಣಗಳನ್ನು ಲೂಟಿ (loot) ಮಾಡಿದ್ದಾರೆ. ಮಾರ್ಚ್‌ 15 ರಂದು ಈ ನಕಲಿ ಕಾಲ್‌ ಸೆಂಟರ್‌ಗೆ ಪಾಕಿಸ್ತಾನದ ಫೆಡರಲ್‌ ತನಿಖಾ ಸಂಸ್ಥೆ (FIA) ಮತ್ತು ಗುಪ್ತಚರ ಸಂಸ್ಥೆಗಳು ದಾಳಿ ನಡೆಸಿದ್ದವು. ಇದೀಗ ಬಳಿಕ ಅಲ್ಲಿನ ಸ್ಥಳೀಯರು ಕಚೇರಿಯೊಳಗೆ ನುಗ್ಗಿ ಲ್ಯಾಪ್‌ಟಾಪ್‌ ಸೇರಿದಂತೆ ಕೈಗೆ ಸಿಕ್ಕ ಬೆಳೆಬಾಳುವ ಉಪಕರಣಗಳನ್ನೆಲ್ಲಾ ದೋಚಿದ್ದಾರೆ.

ಈ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಸೆಕ್ಟರ್‌ ಎಫ್-11‌ ನಲ್ಲಿರುವ ಚೀನಾ ಮೂಲದ ಕಾಲ್‌ ಸೆಂಟರ್‌ ಸಂಸ್ಥೆಯೊಂದಕ್ಕೆ ಏಕಾಏಕಿ ನುಗ್ಗಿದ್ದ ನೂರಾರು ಪಾಕಿಸ್ತಾನಿಗರು ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಮಾನಿಟರ್‌ ಸೇರಿದಂತೆ ಬೆಲೆಬಾಳುವ ಉಪಕರಣಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾರೆ. ಮಾರ್ಚ್‌ 15 ರಂದು ಪಾಕಿಸ್ತಾನದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜನ್ಸಿ (FIA) ಈ ಕಾಲ್‌ ಸೆಂಟರ್‌ ಅಂತರಾಷ್ಟ್ರೀಯ ವಂಚನೆ ವ್ಯವಹಾರ ನಡೆಸುತ್ತಿದೆ ಎಂಬ ಆರೋಪದ ಮೇರೆಗೆ ಇಸ್ಲಾಮಾಬಾದ್‌ನ ಈ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿತ್ತು, ಈ ಸಂದರ್ಭದಲ್ಲಿ ಸರಿಯಾಗಿ ಭದ್ರತೆ ಇಲ್ಲದಿದ್ದ ಕಾರಣ ಸ್ಥಳೀಯ ನಿವಾಸಿಗಳು ಕೂಡಾ ಏಕಾಏಕಿ ಕಾಲ್‌ ಸೆಂಟರ್‌ಗೆ ನುಗ್ಗಿ, ಅಲ್ಲಿದ್ದ ಬೆಲೆಬಾಳುವ ಉಪಕರಣಗಳನ್ನು ಲೂಟಿ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ಕಾಲ್‌ ಸೆಂಟರ್‌ ಒಳಗೆ ನುಗ್ಗಿದ ಪಾಕಿಸ್ತಾನದ ಸ್ಥಳೀಯ ನಿವಾಸಿಗಳು ತಮ್ಮೆರಡೂ ಕೈಗಳಲ್ಲೂ ಲ್ಯಾಪ್‌ಟಾಪ್‌, ಮಾನಿಟರ್‌ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಓಡಿ ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಾರತೀಯ ಪೌರತ್ವ ತೊರೆದು, ಖುಷಿ ಖುಷಿಯಾಗಿ ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ ಯುವಕ; ವಿಡಿಯೋ ವೈರಲ್‌

ಮಾರ್ಚ್‌ 17 ರಂದು ಶೇರ್‌ ಮಾಡಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲ ಈ ಪಾಕಿಸ್ತಾನದಲ್ಲಿ ಇದೇನು ನಡಿತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಲ್ಲಿ ನೋಡಿದ್ರೂ ಇವರುಗಳು ಲೂಟಿ ಮಾಡೋದೇ ಆಯ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ಲಿ ಇದೆಲ್ಲಾ ಸಾಮಾನ್ಯ ಬಿಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ