Viral: ಏನ್‌ ಎನರ್ಜಿಟಿಕ್‌ ಡ್ಯಾನ್ಸ್‌ ನೋಡಿ… ಬಾಲಿವುಡ್‌ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ ತಂದೆ-ಮಗ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 15, 2025 | 4:27 PM

ಅಮ್ಮ-ಮಗ, ಅಪ್ಪ-ಮಗಳ ಸುಂದರ ಬಾಂಧವ್ಯಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮುದ್ದಾದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಮದುವೆ ಮನೆಯಲ್ಲಿ ತಂದೆ ಮತ್ತು ಮಗ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಅಪ್ಪ ಮಗನ ಈ ಡ್ಯಾನ್ಸ್‌ ಜುಗಲ್ಬಂದಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Viral: ಏನ್‌ ಎನರ್ಜಿಟಿಕ್‌ ಡ್ಯಾನ್ಸ್‌ ನೋಡಿ… ಬಾಲಿವುಡ್‌ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ ತಂದೆ-ಮಗ; ವಿಡಿಯೋ ವೈರಲ್‌
ವೈರಲ್​ ವಿಡಿಯೋ
Follow us on

ಮದುವೆ ಮನೆ ಅಂದ್ರೆನೇ ಒಂಥರಾ ಸಂಭ್ರಮ. ಫ್ಯಾಮಿಲಿ, ಫ್ರೆಂಡ್ಸ್‌ ಎಲ್ಲರೂ ಜೊತೆ ಸೇರಿ ಹಾಡು ಕುಣಿತ, ಮೋಜಿ ಮಸ್ತಿ ಮಾಡುತ್ತಾ ಸಂಭ್ರಮಿಸುತ್ತಿರುತ್ತಾರೆ. ಹೀಗೆ ಮದುವೆ ಮನೆಯಲ್ಲಿ ನಡೆಯುವ ತರ್ಲೆ ತಮಾಷೆ, ಸಂಭ್ರಮಕ್ಕೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಬಾಲಿವುಡ್‌ ಸಾಂಗ್‌ಗೆ ತಂದೆ-ಮಗ ಸೇರಿ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಅಪ್ಪ ಮಗನ ಈ ಡ್ಯಾನ್ಸ್‌ ಜುಗಲ್ಬಂದಿಗೆ ನೆಟ್ಟಿಗರಂತೂ ಫುಲ್‌ ಫಿದಾ ಆಗಿದ್ದಾರೆ.

ಪಾಕಿಸ್ತಾನ ಮೂಲದ ತಂದೆ ಮಗ ಮದುವೆ ಮನೆಯಲ್ಲಿ ಬಾಲಿವುಡ್‌ ಹಿಟ್‌ ಸಾಂಗ್‌ ಆದಂತಹ ಸೋನಿ ಡಿ ನಖ್ರೆ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾರೆ. ಹೌದು ಕಪ್ಪು ಬಣ್ಣದ ಕುರ್ತಾವನ್ನು ಧರಿಸಿದ ತಂದೆ ಮಗ ಎನರ್ಜಿಟಿಕ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಅಮಿನಾ ಅಲಿ (aminaaly__) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, “ತಂದೆ-ಮಗನ ಡ್ಯಾನ್ಸ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಪ್ಪು ಕುರ್ತಾ ಹಾಗೂ ಕಪ್ಪು ಕನ್ನಡಕವನ್ನು ಧರಿಸಿ ಬಂದ ತಂದೆ ಮಗ ಬಾಲಿವುಡ್‌ ಹಿಟ್‌ ಸಾಂಗ್‌ ಆದಂತಹ ಸೋನಿ ಡಿ ನಖ್ರೆ ಹಾಡಿಗೆ ಎನರ್ಜಿಟಿಕ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. ಅಪ್ಪ ಮಗನ ಡ್ಯಾನ್ಸ್‌ ಜುಗಲ್ಬಂದಿಗೆ ಮದುವೆ ಮನೆಯಲ್ಲಿ ನೆರೆದಿದ್ದವರೆಲ್ಲಾ ಫುಲ್‌ ಫಿದಾ ಆಗಿದ್ದಾರೆ.

ಇದನ್ನು ಓದಿ: ಚಾಯ್‌ ಪಾಯಿಂಟ್‌ನೊಂದಿಗೆ ಕೆಎಂಎಫ್‌ ಒಪ್ಪಂದ; ಮಹಾ ಕುಂಭಮೇಳದಲ್ಲಿ 1 ಕೋಟಿ ಕಪ್‌ ಚಹಾ ವಿತರಣೆ

ನವೆಂಬರ್‌ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದ್ಭುತವಾದ ನೃತ್ಯವಿದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಗನಿಗಿಂತ ತಂದೆಯ ಡ್ಯಾನ್ಸ್‌ ಸ್ಟೆಪ್ಸ್‌ ಸಖತ್ತಾಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಏನ್‌ ಎನರ್ಜಿಟಿಕ್‌ ಡ್ಯಾನ್ಸ್‌ ಗುರುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಅನೇಕರು ತಂದೆ-ಮಗನ ಡ್ಯಾನ್ಸ್‌ ಮೋಡಿಗೆ ಕಳೆದು ಹೋಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:26 pm, Wed, 15 January 25