ನ್ಯೂಟನ್ ಬಗ್ಗೆ ಕೇಳಿದರೆ ‘ಮೇನೆ ತುಜೇ ದೇಖಾ ಹಸ್ತೇ ಹುವೇ ಗಾಲೋಂ ಮೇ’ ಎಂದು ಉತ್ತರ ಪತ್ರಿಕೆಯಲ್ಲಿ ಇಡೀ ಹಾಡನ್ನೇ ಬರೆದಿಟ್ಟ ವಿದ್ಯಾರ್ಥಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 02, 2023 | 7:58 PM

ಈ ವಿಡಿಯೊವನ್ನು ಟ್ವೀಟ್ ಮಾಡಿದ ಅಲಿ ಜಾಫರ್, ಈ ವೈರಲ್ ವಿಡಿಯೊ ವಾಟ್ಸಾಪ್​​ನಲ್ಲಿ ಬಂದಿತ್ತು. ನನ್ನ ಹಾಡಿನಲ್ಲಿ ಫಿಸಿಕ್ಸ್ ಹುಡುಕಬೇಡಿ ಎಂದು ನಾನು ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ನ್ಯೂಟನ್ ಬಗ್ಗೆ ಕೇಳಿದರೆ ‘ಮೇನೆ ತುಜೇ ದೇಖಾ ಹಸ್ತೇ ಹುವೇ ಗಾಲೋಂ ಮೇ’ ಎಂದು ಉತ್ತರ ಪತ್ರಿಕೆಯಲ್ಲಿ ಇಡೀ ಹಾಡನ್ನೇ ಬರೆದಿಟ್ಟ ವಿದ್ಯಾರ್ಥಿ
ವೈರಲ್ ಆದ ಉತ್ತರ ಪತ್ರಿಕೆ
Follow us on

ಪಾಕಿಸ್ತಾನಿ ಗಾಯಕ- ಗೀತ ರಚನೆಕಾರ ಅಲಿ ಜಾಫರ್ (Ali Zafar) ಮಜವಾಗಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯಿದೆ. ಇದು ಪಾಕಿಸ್ತಾನದ 11ನೇ ತರಗತಿಯ ಫಿಸಿಕ್ಸ್ (Physics) ಪರೀಕ್ಷೆ ಉತ್ತರ ಪತ್ರಿಕೆಯಾಗಿದ್ದು ನ್ಯೂಟನ್ಸ್ ರಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ಅಲಿ ಜಾಫರ್ ಅವರ ಹಾಡು!. ಈ ವಿಡಿಯೊವನ್ನು ಟ್ವೀಟ್ ಮಾಡಿದ ಅಲಿ ಜಾಫರ್, ಈ ವೈರಲ್ ವಿಡಿಯೊ ವಾಟ್ಸಾಪ್​​ನಲ್ಲಿ ಬಂದಿತ್ತು. ನನ್ನ ಹಾಡಿನಲ್ಲಿ ಫಿಸಿಕ್ಸ್ ಹುಡುಕಬೇಡಿ ಎಂದು ನಾನು ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ. ಈ ಹಾಡಿನ ಸಾಲು ಸೇರಿದಂತೆ ಎಲ್ಲೆಡೆ ಫಿಸಿಕ್ಸ್ ಇದ್ದೇ ಇದೆ. ಆದರೆ ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆ ಮತ್ತು ಶಿಕ್ಷಕರನ್ನು ಗೌರವಿಸಿ ಎಂದು ಬರೆದಿದ್ದಾರೆ.

ವಿಡಿಯೊದಲ್ಲೇನಿದೆ?

ಕಿರು ವಿಡಿಯೊದಲ್ಲಿ ಶಿಕ್ಷಕರು ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುತ್ತಿರುವುದು ಕಾಣುತ್ತದೆ. ಫಿಸಿಕ್ಸ್ ಉತ್ತರ ಪತ್ರಿಕೆ ಅದಾಗಿದ್ದು ನ್ಯೂಟನ್ಸ್ ರಿಂಗ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ಬರೆದ ವಿದ್ಯಾರ್ಥಿ, ಈ ಪರೀಕ್ಷೆಯಲ್ಲಿ ನನಗೆ ಚೆನ್ನಾಗಿ ಬರೆಯಲು ಆಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾನೆ. ಈ ಸಾಲಿನ ನಂತರ ಮೇನೆ ತುಜೇ ದೇಖಾ ಹಸ್ತೇ ಹುವೇ ಗಾಲೋಂ ಮೇ ಎಂದು ಜೂಮ್ ಜೂಮ್ ಹಾಡಿನ ಸಾಹಿತ್ಯ ಬರೆಯುತ್ತಾ ಹೋಗಿದ್ದಾನೆ. ಅದೇ ವೇಳೆ, ಭೌತಶಾಸ್ತ್ರವನ್ನು ಪರಿಚಯಿಸಿದ್ದಕ್ಕಾಗಿ 11 ನೇ ತರಗತಿಯ ವಿದ್ಯಾರ್ಥಿ ಐಸಾಕ್ ನ್ಯೂಟನ್‌ನನ್ನು ಶಪಿಸುತ್ತಾನೆ. ಪಾಠದ ವೇಳೆ ನಿದ್ದೆ ಮಾಡಿದ್ದರಿಂದ ಉತ್ತರ ತಿಳಿಯದ ಕಾರಣ ಪ್ರಶ್ನೆಯನ್ನು ಬಿಟ್ಟು ಬಿಡಲೂ ಆಗಲಿಲ್ಲ ಎಂದು ವಿದ್ಯಾರ್ಥಿಯು ಉತ್ತರ ಪತ್ರಿಕೆಯಲ್ಲಿ ಪ್ರಾಮಾಣಿಕವಾಗಿಯೇ ಹೇಳಿದ್ದಾನೆ.


ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ “ಹ್ಹಹ್ಹ. ಭಯಂಕರ ಇದು. ಅಲಿ ಜಫರ್ ಭಾಯ್, ಯುವಕರು ಮತ್ತು ನಿಮ್ಮ ಅನುಯಾಯಿಗಳನ್ನು ಕಲಿಯಲು ಪ್ರೋತ್ಸಾಹಿಸುತ್ತಾರೆ ಎಂದು ಒಬ್ಬರು ಕಾಮೆಂಟಿಸಿದ್ದರೆ ಇನ್ನೊಬ್ಬರು ನೀವು ಉತ್ತಮ ಪ್ರಭಾವಶಾಲಿ ಮತ್ತು ಅತ್ಯಂತ ಪ್ರತಿಭಾವಂತ ಮಾನವರು. ನೀವು ಸಾಧಿಸಿದ್ದನ್ನು ನೀವು ಹೇಗೆ ಸಾಧಿಸಿದ್ದೀರಿ ಎಂದು ಯುವಜನರಿಗೆ ಹೇಳಬೇಕು ಎಂದು ನಾನು ಭಾವಿಸುತ್ತೇನೆ. ಪರಿಶ್ರಮ ಮತ್ತು ಕಠಿಣ ಪರಿಶ್ರಮ ಮಾತ್ರ ಅದಕ್ಕೆ ಕಾರಣ ಎಂದಿದ್ದಾರೆ.

ಅಲಿ ಜಾಫರ್ ಯುವ ಪೀಳಿಗೆಯನ್ನು ಪ್ರೇರೇಪಿಸುತ್ತಾರೆ ಎಂದು ಸಾಬೀತುಪಡಿಸುತ್ತದೆ. ಆದರೆ ದುರದೃಷ್ಟವಶಾತ್ ಈ ಪೀಳಿಗೆಯು ಜೀವನದ ವಿಷಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹುಶಃ ನಿಮ್ಮ ಮುಂದಿನ ಹಾಡಿನ ಸಾಹಿತ್ಯವು ಈ ನಿರ್ದಿಷ್ಟ ಭೌತಶಾಸ್ತ್ರದ ಪ್ರಶ್ನೆಗೆ ಉತ್ತರವಾಗಿರಬಹುದು ಎಂದು ಕಾಲೆಳೆದಿದ್ದಾರೆ.

ರೀಲ್ಸ್​​ಗಳಲ್ಲಿ ವೈರಲ್ ಆಗಿದ್ದ ಅಲಿ ಜಾಫರ್ ಮಧುರ ಕಂಠದ ಝರಾ ಜೂಮ್ ಜೂಮ್ ಎಂಬ ಹಾಡನ್ನು ನೀವು ಕೇಳಿದ್ದರೆ ಈ ಉತ್ತರ ಪತ್ರಿಕೆಯನ್ನೋದುತ್ತಾ ನೀವೂ ಗುನುಗುತ್ತೀರಿ..ಖಂಡಿತಾ

ಮತ್ತಷ್ಟು ಟ್ರೆಂಡಿಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Mon, 2 January 23