Shocking Video: ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ; ಅಸಹ್ಯಕರ ವಿಡಿಯೋ ವೈರಲ್!

ಮೂತ್ರವನ್ನು ಮಿಶ್ರಣ ಮಾಡಿ ಜನರಿಗೆ ಪೂರೈಸಲು ಬಳಸುವ ನೀರಿನಲ್ಲಿ ಮಿಶ್ರಣ ಮಾಡಿರುವ ಅಸಹ್ಯಕರ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ವ್ಯಾಪಾರಸ್ತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

Shocking Video: ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ; ಅಸಹ್ಯಕರ ವಿಡಿಯೋ ವೈರಲ್!
ಜನರಿಗೆ ನೀಡುವ ನೀರಿನಲ್ಲಿ ಮೂತ್ರ ಸೇರಿಸಿದ ಪಾನಿಪುರಿ ವ್ಯಾಪಾರಸ್ತ
Edited By:

Updated on: Aug 22, 2021 | 1:46 PM

ರಸ್ತೆಯ ಬದಿಯಲ್ಲಿ ಪಾನಿಪುರಿ ಮಾರಾಟಗಾರನು ಚೊಂಬಿನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಜನರಿಗೆ ನೀಡುವ ನೀರಿನಲ್ಲಿ ಸೇರಿಸಿದ ವಿಡಿಯೋ ವೈರಲ್ ಆಗಿದೆ. ಮೂತ್ರವನ್ನು ಮಿಶ್ರಣ ಮಾಡಿ ಜನರಿಗೆ ಪೂರೈಸಲು ಬಳಸುವ ನೀರಿನಲ್ಲಿ ಮಿಶ್ರಣ ಮಾಡಿರುವ ಅಸಹ್ಯಕರ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ವ್ಯಾಪಾರಸ್ತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಘಟನೆ ಅಸ್ಸಾಂನ ಗುಹಾವಟಿಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ವ್ಯಾಪಾರಸ್ತನನ್ನು ಬಂಧಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕ ಸಾಮಾಜಿಕ ಬಳಕೆದಾರರು ಇದನ್ನು ಹಂಚಿಕೊಳ್ಳುತ್ತಿದ್ದಾರೆ. ಜನರು ಇಂತಹ ಘಟನೆಯ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಜತೆಗೆ ನೆಟ್ಟಿಗರು ಬೀದಿ ಆಹಾರ ಮಾರಾಟಗಾರರು ನಿರ್ವಹಿಸುವ ನೈರ್ಮಲ್ಯದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

ಸ್ಥಳೀಯ ಸುದ್ದಿ ವರದಿಯ ಪ್ರಕಾರ, ಬೀದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಪ್ರಸ್ತುತ ಪೊಲೀಸರು ಈ ಕುರಿತಂತೆ ತನಿಖೆ ಕೈಗೊಂಡಿದ್ದಾರೆ. ವ್ಯಕ್ತಿಯು ತನ್ನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಕುರಿತಂತೆ ಇನ್ನಷ್ಟು ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ನಾನಾ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕೃತ್ಯವು ಅತ್ಯಂತ ಅಮಾನವೀಯ ಮತ್ತು ಕೊಳಕು ಎಂದು ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ಅಸಹ್ಯಕರವಾಗಿದೆ ಎದು ಇನ್ನೋರ್ವರು ಹೇಳಿದ್ದಾರೆ. ವ್ಯಾಪಾರ ನಡೆಸುಯವುದನ್ನು ಅನುಮತಿಸಬಾರದು .. ಇಂಥವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೆಲವು ಪ್ರತಿಕ್ರಿಯೆಗಳು ಕೇಳಿ ಬಂದಿವೆ.

ಇದನ್ನೂ ಓದಿ:

Shocking News: ಬೈಕ್ ಹ್ಯಾಂಡಲ್​ನಿಂದ ವಿಚಿತ್ರ ಶಬ್ದ; ತೆರೆದು ನೋಡಿದ್ರೆ 5 ಅಡಿ ಉದ್ದದ ನಾಗರಹಾವು!

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು