
ನೀವು ಏನೇ ಹೇಳಿ, ನಿಯತ್ತಾಗಿರುವವರಿಗೆ ಇದು ಕಾಲವಲ್ಲ, ಮೋಸ, ದ್ರೋಹ ಮಾಡಿದರೆ ಜೀವನ ಸಾಗೋದು ಎನ್ನುವಂತಾಗಿದೆ. ಇದೇ ಮನಸ್ಥಿತಿಯಲ್ಲಿ ಇಂದಿನ ಯುವಜನಾಂಗ ದಾರಿತಪ್ಪುತ್ತಿದೆ. ಕಳ್ಳತನ, ವಂಚನೆ ಸೇರಿದಂತೆ ಇನ್ನಿತ್ತರ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಂದು ಕಡೆ ನಾಚಿಕೆಗೇಡಿನ ಘಟನೆ ನಡೆದಿದೆ. ಟ್ರೈನ್‌ನಲ್ಲಿ ತಿಂಡಿ ತಿನಿಸುಗಳನ್ನು ವ್ಯಾಪಾರ ಮಾಡಲು ಬಂದಿದ್ದ ಬಡ ವ್ಯಾಪಾರಿಯ ಚೀಲದಿಂದ ಪ್ರಯಾಣಿಕನೊಬ್ಬನು (passenger) ಜ್ಯೂಸ್ ಪ್ಯಾಕೆಟ್ ಸೇರಿದಂತೆ ಇತರ ತಿಂಡಿ ತಿನಿಸುಗಳನ್ನು ಕದ್ದಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದಂತೆ, ಪ್ರಯಾಣಿಕನ ಈ ದುರ್ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ (social media) ಭಾರೀ ಆಕ್ರೋಶ ವ್ಯಕ್ತವಾಗಿದೆ.
@Tarunspeaks ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ, ಈ ವ್ಯಕ್ತಿ ಬಡ ಮಾರಾಟಗಾರರಿಂದ ಕದಿಯುವುದನ್ನು “ಹಾಸ್ಯ” ಎಂದು ಭಾವಿಸುತ್ತಾನೆ. ಈ ವ್ಯಕ್ತಿಯನ್ನು ಬಂಧಿಸಬೇಕು” ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರೈಲಿನಲ್ಲಿ ಕಿಕ್ಕಿರಿದ ಜನಸಂದಣಿ ಇರುವುದನ್ನು ಕಾಣಬಹುದು. ಹೌದು, ಟ್ರೈನ್‌ನಲ್ಲಿ ಪ್ರಯಾಣಿಕರು ತುಂಬಿದ್ದ ಕಾರಣ, ಬಡ ವ್ಯಾಪಾರಿಯೊಬ್ಬ ಕೈಯಲ್ಲಿ ಚಿಪ್ಸ್ ಹಾಗೂ ಬಿಸ್ಕತ್ತುಗಳನ್ನು ಹಿಡಿದುಕೊಂಡು ಮಾರಾಟ ಮಾಡುತ್ತಿದ್ದಾನೆ.
He thinks stealing from poor vendors is “comedy”. This guy needs to be detained. pic.twitter.com/tD9wREhFiM
— Tarun Gautam (@TARUNspeakss) July 19, 2025
ಈ ವೇಳೆಯಲ್ಲಿ ಮೇಲಿನ ಬರ್ತ್‌ನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬನು ತನ್ನ ನೀಚ ಬುದ್ಧಿಯನ್ನು ತೋರಿಸಿದ್ದಾನೆ. ವ್ಯಾಪಾರಿ ಬಳಿ ಮಾತನಾಡುತ್ತ ಗಮನವನ್ನು ಬೇರೆಡೆ ಸೆಳೆದು ವ್ಯಾಪಾರಿಯ ತಲೆ ಮೇಲೆ ಇದ್ದ ಚೀಲದಿದ ಜ್ಯೂಸ್ ಪ್ಯಾಕೆಟ್ ಎಗರಿಸಿದ್ದಾನೆ. ಈತನ ಮುಖಭಾವದಲ್ಲಿ ತಾನೇನೋ ದೊಡ್ಡ ಸಾಧನೆ ಮಾಡಿದೆ ಎಂದು ವ್ಯಕ್ತವಾಗುತ್ತಿದೆ. ಅಲ್ಲೇ ಇದ್ದ ಈ ಪ್ರಯಾಣಿಕನ ಸ್ನೇಹಿತನು ಇದನ್ನು ವಿಡಿಯೋ ಮಾಡಿದ್ದಾನೆ. ಈ ರೀತಿಯಾಗಿ ಬೋಗಿಯೊಳಗೆ ಬರುತ್ತಿದ್ದ ವ್ಯಾಪಾರಿಗಳ ಚೀಲದಿಂದ ಸಮೋಸ, ಪಕೋಡ, ನೀರಿನ ಬಾಟಲಿ ಸೇರಿದಂತೆ ತಿಂಡಿ ತಿನಿಸುವುದನ್ನು ಕದಿಯುವುದನ್ನು ನೀವು ನೋಡಬಹುದು. ಅಲ್ಲೇ ಇದ್ದ ಉಳಿದ ಪ್ರಯಾಣಿಕರು ಈತನ ಈ ಕೆಲಸವನ್ನು ಕಂಡು ನಗುತ್ತಿದ್ದಾರೆ. ಉಳಿದವರು ಈತನಿಗೆ ಬುದ್ಧಿ ಹೇಳುವ ಬದಲು ಮನರಂಜನೆ ಎಂದು ಪರಿಗಣಿಸಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ :Video: ನಮ್ಮವರಿಗೆ ನಾಗರಿಕ ಪ್ರಜ್ಞೆ ಇಲ್ಲ, ಹಾಗಾಗಿ ಭಾರತ ಹೀಗಿದೆ ಎಂದ ಭಾರತೀಯ ವ್ಲಾಗರ್
ಜುಲೈ 21 ರಂದು ಶೇರ್ ಮಾಡಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ನಾಚಿಕೆಗೇಡಿನ ಕೃತ್ಯ, ದುಡ್ಡು ಕೊಟ್ಟು ಖರೀದಿಸು, ಬಡ ವ್ಯಾಪಾರಿಯ ಹೊಟ್ಟೆಯ ಮೇಲೆ ಹೊಡೆಯೋದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿ ಕೆಟ್ಟ ಕೆಲಸ ಮಾಡಿ ತಾನು ಏನೋ ಸಾಧಿಸಿದೆ ಅಂದುಕೊಂಡೆ ಭಾರತೀಯರು ಏಕೆ ಹೀಗೆ ಭಾವಿಸುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Tue, 22 July 25