Viral : ಓಹೋ ನಿಮಗಷ್ಟೇ Peek-a-boo ಆಡೋಕೆ ಬರತ್ತಾ? ನೋಡಿ ಇಲ್ಲಿ ಹೇಗೆ ನಾನು ಹೇಗೆ ಅಮ್ಮನೊಂದಿಗೆ ಆಡಿದೀನಿ. ಆದರೆ ನಮ್ಮಮ್ಮ ಅಂತೂ ಎಂಥಾ ಪರಿ ಹೆದರ್ಕೊಂಡುಬಿಟ್ಲು ಅಂದ್ರೆ… ವಾಪಸ್ ನನಗೇ ಭಯ ಆಗೋಯ್ತು. ಈ ವಿಡಿಯೋನಾ 1 ಮಿಲಿಯನ್ ಜನ ನೋಡಿದಾರೆ ಆನ್ಲೈನ್ನಲ್ಲಿ. ಈಗಾಗಲೇ ಅವರೆಲ್ಲ ನಮ್ಮ ಫ್ಯಾನ್ಸ್ ಆಗಿಬಿಟ್ಟಿದಾರೆ. ನನಗೂ ಗೊತ್ತಿರಲಿಲ್ಲ, ನನ್ನ ಅಮ್ಮನ ಜೊತೆ ಈ ಆಟ ಆಡಿದ್ರೆ ಇಷ್ಟೊಂದು ಫೇಮಸ್ ಆಗ್ಬಿಡ್ತೀನಿ ಅಂತ. ಭಾರೀ ಮಜಾ ಬಂತು ನಂಗಂತೂ.
Lion cub sneaks up on mom..?pic.twitter.com/zJgqVXjYwd?
ಇದನ್ನೂ ಓದಿ— ?o̴g̴ (@Yoda4ever) October 1, 2022
Yoda4ever ಅನ್ನೋ ಟ್ವಿಟರ್ ಖಾತೆ ಮೂಲಕ ನನ್ನ ಈ ವಿಡಿಯೋ ನೋಡಿದ್ರಿ ಅಲ್ವಾ? ಇದೇ ಆಟ ಆಡೋಕೆ ಹೋದ್ರೆ ಅಮ್ಮ ಹೆದರಲ್ಲ. ಹಾಗಾಗಿ ಬೇರೆ ಆಟ ನಿಮಗೆ ಗೊತ್ತಿದ್ರೆ ಕಮೆಂಟ್ ಮಾಡಿ ತಿಳಿಸಿ. ನಾನಂತೂ ಡಿಸೈಡ್ ಮಾಡಿದೀನಿ ದಿನಾ ಒಂದೊಂದು ಆಟ ಆಡಿ ಮಜವಾಗಿರಬೇಕು ಅಂತ. ಬರೀ ಬೇಟೆಯಾಡ್ತಿದ್ರೆ ಯಾರು ಮೆಚ್ತಾರೆ? ಜನಾ ಜನಾ ಮೆಚ್ಚೋಹಾಗೆ ಇರಬೇಕಲ್ವಾ?
ನೀವು ನಿಮ್ಮ ಅಮ್ಮಂದಿರಿಗೆ ಹೀಗೆಲ್ಲಾ ಹೆದರಿಸಿದ್ದೀರಾ? ಖಂಡಿತಾ ನಮ್ ಅಮ್ಮನ ಹಾಗೇ ಹೆದರ್ಕೊಂಡಿರ್ತಾರೆ ಅವರೆಲ್ಲ. ಹೌದು ತಾನೆ?
ಈ ವಿಡಿಯೋ ನೋಡಿ ನೆಟ್ಮಂದಿ, ‘ಹೌದು ಯಾವ ಪ್ರಾಣಿಯಾದರೂ ಅಷ್ಟೇ ಹೀಗೆ ಮಾಡಿದಾಗ ಮೊದಲು ಹೆದರ್ಕೊಳ್ತಾವೆ ಆಮೇಲೆ ಕೋಪ ಬಂದು ಶಾಂತವಾಗ್ತಾ ಇದು ಆಟ ಅಂತ ಮುದ್ದಾಗಿ ಮಕ್ಕಳನ್ನ ಸ್ವೀಕರಿಸಿಬಿಡ್ತಾವೆ’ ಎಷ್ಟು ಚೆಂದ ಅರ್ಥ ಮಾಡ್ಕೊಂಡಿದಾರಲ್ಲ ಈ ಟ್ವಿಟರ್ದಾರರು?
ಸರಿ ನಾಳೆ ಯಾವ ಆಟ ಆಡಬೇಕು? ಕಮೆಂಟ್ ಮಾಡೋದನ್ನ ಮರೀಬೇಡಿ. ಓಕೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:14 pm, Mon, 3 October 22