ಶ್ರೀಲಂಕಾ: ಬಸ್​ ಒಳಗೆ ಜಾಗ ಇಲ್ಲ ಅಂತ ವಿದ್ಯಾರ್ಥಿಗಳು ಎಲ್ಲೆಲ್ಲಿ ಕೂತು ಪ್ರಯಾಣಿಸುತ್ತಿದ್ದಾರೆ ನೋಡಿ

ಶ್ರೀಲಂಕಾದಲ್ಲಿ ಪ್ರಯಾಣಿಕರು ಬಸ್​​ನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ಬಾಗಿಲು ಮತ್ತು ಕಿಟಕಿಗಳಲ್ಲಿ ನೇತಾಡುತ್ತಿದ್ದಾರೆ.

ಶ್ರೀಲಂಕಾ: ಬಸ್​ ಒಳಗೆ ಜಾಗ ಇಲ್ಲ ಅಂತ ವಿದ್ಯಾರ್ಥಿಗಳು ಎಲ್ಲೆಲ್ಲಿ ಕೂತು ಪ್ರಯಾಣಿಸುತ್ತಿದ್ದಾರೆ ನೋಡಿ
ಶ್ರೀಲಂಕಾ ಬಸ್​​
TV9kannada Web Team

| Edited By: Vivek Biradar

Jun 29, 2022 | 11:13 PM

ಶ್ರೀಲಂಕಾ: ಶ್ರೀಲಂಕಾದಲ್ಲಿ (Shrilanka) ಆರ್ಥಿಕತೆ (Economic)  ಸಂಪೂರ್ಣವಾಗಿ ಕುಸಿದಿದ್ದು, ಜನರು ಆಹಾರ, ಇಂಧನ (Oil) ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.  ಹಾಗೆ ದೇಶದಲ್ಲಿ ರಾಜಕೀಯ ಅಶಾಂತಿ ಮತ್ತು ಹಿಂಸಾಚಾರ ಬುಗಿಲೆದ್ದಿದೆ. ಶ್ರೀಲಂಕಾ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಆದರೆ ಕರೊನಾ ಮಹಾಮಾರಿ ಮತ್ತು 2019 ರಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ಪ್ರವಾಸೋದ್ಯಮ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಶ್ರೀಲಂಕಾದಲ್ಲಿ ಜನರು ಅಡುಗೆ ಅನಿಲ ಮತ್ತು ಪೆಟ್ರೋಲ್‌ ಖರೀದಿಗೆ  ದಿನಗಟ್ಟಲೆ ಕಾಯುತ್ತಿದ್ದಾರೆ.  ಪೆಟ್ರೋಲ್ ಸಿಗದೆ ಕೆಲ ಜನರು ವಾಹನ ಚಲಾಯಿಸುವುದನ್ನು ಬಿಟ್ಟು ಸೈಕಲ್​​ನಲ್ಲಿ ಸಂಚರಿಸುತ್ತಿದ್ದಾರೆ.

ಸದ್ಯ ಶ್ರೀಲಂಕಾದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡ  ಕೆಂಪು ಬಸ್​​ನ ವಿಡಿಯೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್​ ಆಗಿದೆ.  ಬಸ್‌ನಲ್ಲಿ ಜನರನ್ನು ಕುರಿ ತುಂಬಿದ ಹಾಗೆ ತುಂಬಿದ್ದಾರೆ.  ಕಾರಣ  ವಿಪರೀತ ಇಂಧನ ಕೊರತೆ. ಬಸ್​​ನಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ವಿದ್ಯಾರ್ಥಿಗಳು ಬಾಗಿಲು ಮತ್ತು ಕಿಟಕಿಗಳಲ್ಲಿ ನೇತಾಡುತ್ತಿದ್ದಾರೆ. ಇದನ್ನು ಹೊರತುಪಡಿಸಿ ಹಲವಾರು ವಿದ್ಯಾರ್ಥಿಗಳು ಬಸ್‌ನ ಹಿಂಭಾಗದಲ್ಲಿರುವ ಲಗೇಜ್ ಇಡುವ ಜಾಗದಲ್ಲಿ ಕುಳಿತಿದ್ದಾರೆ. ಇದನ್ನು ಬಸ್ ಹಿಂದೆ ಚಲಾಯಿಸುತ್ತಿದ್ದ ಬೈಕ್ ಸವಾರನೊಬ್ಬ ವಿಡಿಯೋ ಮಾಡಿದ್ದಾನೆ. ವಿಡಿಯೋ ಟ್ವಿಟರ್‌ನಲ್ಲಿ 42 ಸಾವಿರ ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada