Viral News: ಕೈಗಳನ್ನು ಕಟ್ಟಿ 780 ಮೀಟರ್ ದೂರ ಸ್ವಿಮ್ಮಿಂಗ್ ಮಾಡಿದ 70 ವರ್ಷದ ಮಹಿಳೆ!

ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ನನ್ನ ತರಬೇತುದಾರರಾದ ಸಾಜಿ ವಳಸ್ಸೆರಿ ಅವರು ನನ್ನ ಕೈಗಳನ್ನು ಕಟ್ಟಿಕೊಂಡು ಈಜಲು ಹೇಳಿ, ನನ್ನಲ್ಲಿ ಆತ್ಮವಿಶ್ವಾಸ ನೀಡಿದ್ದಾರೆ.

Viral News: ಕೈಗಳನ್ನು ಕಟ್ಟಿ 780 ಮೀಟರ್ ದೂರ ಸ್ವಿಮ್ಮಿಂಗ್ ಮಾಡಿದ 70 ವರ್ಷದ ಮಹಿಳೆ!
Viral News
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 30, 2022 | 12:05 PM

ಕೊಚ್ಚಿ: ಎಲ್ಲಾ ವಯೋಮಾನದವರಿಗೂ ಈಜು ಕಲಿಯಲು ಉತ್ತೇಜನ ನೀಡಲು  ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಈಜು ಸ್ಪರ್ಧೆಯನ್ನು  ಆಯೋಜಿಸಿತ್ತು.  70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಮನಸ್ಸಿದರೆ ಯಾವುದೇ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಆರಿಫಾ ವಿಕೆ  ಮಾದರಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ಈ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ  ತೈಕ್ಕಾಟ್ಟುಕರದ ಆರಿಫಾ ವಿಕೆ, ಕುನ್ನೂಂಪುರಂನ 11 ವರ್ಷದ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯಾ ಕೆ.ಜಿ ಮಡಪಂ ಕಡವುನಿಂದ ಮಣಪ್ಪುರಂ ದೇಸೋಮ್ ಕಡವುವರೆಗೆ ಈಜಿದರು.

ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ನನ್ನ ತರಬೇತುದಾರರಾದ ಸಾಜಿ ವಳಸ್ಸೆರಿ ಅವರು ನನ್ನ ಕೈಗಳನ್ನು ಕಟ್ಟಿಕೊಂಡು ಈಜಲು ಹೇಳಿ, ನನ್ನಲ್ಲಿ ಆತ್ಮವಿಶ್ವಾಸ ನೀಡಿದ್ದಾರೆ. ಇದರಿಂದ ನಾನು ಕಲಿತಾ ಪಾಠ ಮತ್ತು ನಾನು ಈ ಬಗ್ಗೆ ಹೇಳಲು ಬಯಸುವುದು    ಎಲ್ಲರೂ ಈಜುವುದನ್ನು ಕಲಿಯಬೇಕು. ಏಕೆಂದರೆ ನೀರಿನಲ್ಲಿ ಕೊಚ್ಚಿ ಹೋದ ಅಥವಾ ಈಜಲು ಬರದೇ ನೀರಿನಲ್ಲಿ ಮುಳುಗಿ ಹೋದ ಪ್ರಕರಣಗಳನ್ನು ನೋಡಿದಾಗ ಈಜಲು ಕಲಿಬೇಕು ಮತ್ತು  ಜನರು ಹಿಂಜರಿಯಬಾರದು ಎಂದು ಹೇಳಿದ್ದಾರೆ.

ಮೂವರೂ ಈಜುಪಟುಗಳಿಗೆ ಕಳೆದ ವಾರದಿಂದ ಸಾಜಿ ಮತ್ತು ಅವರ ತಂಡ ವಿಶೇಷ ತರಬೇತಿ ನೀಡಿತ್ತು. ಈಜು ಕಲಿಯುವ ಮುನ್ನ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಂಡಿದ್ದರು. ಸುರಕ್ಷತೆ ಕ್ರಮಗಳು ಸರಿಯಾಗಿದೆ ಎಂದು ಪರಿಶೀಲನೆ ನಡೆಸಲು ಮತ್ತು ಅವರಿಗೆ ರಕ್ಷಣೆಯನ್ನು ನೀಡಲು ಸುರಕ್ಷತಾ ಸಿಬ್ಬಂದಿಗಳು ಅವರನ್ನು  ದೋಣಿಗಳಲ್ಲಿ ಹಿಂಬಾಲಿಸಿತು.  ಬೆಳಿಗ್ಗೆ 8 ಗಂಟೆ ಸುಮಾರಿಗೆ ಈಜಲು ಪ್ರಾರಂಭಿಸಿದರು ಮತ್ತು  8.45 ರ ಸುಮಾರಿಗೆ ಯಶಸ್ವಿಯಾಗಿ ದಾಟಿದರು. “ಜನರಿಗೆ ಈಜು ಕಲಿಯಲು ವಯಸ್ಸು ಅಡ್ಡಿಯಾಗುವುದಿಲ್ಲ. ಈ ಸಂದೇಶವನ್ನು ಸಾರುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಜು ಬರದೇ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದರು, ಇದರಲ್ಲಿ ಮಕ್ಕಳು ಹೆಚ್ಚು ಪ್ರಾಣ ಕಳೆದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಸಾಜಿ ಹೇಳಿದರು.

ಇದನ್ನೂ ಓದಿ
Image
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
Image
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
Image
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Image
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಇದನ್ನು ಓದಿ: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್

ಪೆರಿಯಾರ್ ಸ್ಟ್ರೆಚ್ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಅವರು ಇದಕ್ಕೆ ಮಾರ್ಗದರ್ಶವನ್ನು ನೀಡಿದ್ದಾರೆ. ಅವರು ತಿಳಿಸಿರುವಂತೆ ಕಳೆದ ವರ್ಷ 102 ಜನರು ಈಜು ಬರದೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.  ಇದರಲ್ಲಿ 77 ಅಪಘಾತಗಳಿಂದ ಪ್ರಾಣ ಕಳೆದುಕೊಂಡರೆ,  ಇನ್ನೂ 25 ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕಸ್ಮಿಕವಾಗಿ ಮುಳುಗಿದ ಘಟನೆಗಳಲ್ಲಿ 62 ಪುರುಷರು ಮತ್ತು 15 ಮಹಿಳೆಯರು.

ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಅನ್ನು 2010 ರಲ್ಲಿ ಆಲುವಾ ಮೂಲದ ಸಾಜಿ ವಲಸ್ಸೆರಿ ಅವರು ಪ್ರಾರಂಭಿಸಿದರು. ಅವರು 2009 ರ ತೆಕ್ಕಡಿ ದೋಣಿ ದುರಂತದಿಂದ ಸುಮಾರು 45 ಜನರು ಪ್ರಾಣ ಕಳೆದುಕೊಂಡರು. ಇದನ್ನು ಕಂಡು ಜನರಿಗೆ ಈಜಲು ಕಲಿಸಬೇಕು ಎಂದು ನಿರ್ಧಾರ ಮಾಡಿದರು. ಇವರು  5,700 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ, ಅವರಲ್ಲಿ 700 ಮಂದಿ ವಿಕಲಚೇತನರು ಮತ್ತು ಹಿರಿಯ ನಾಗರಿಕರು. ಈ ವರ್ಷದ ಬೇಸಿಗೆ ರಜೆಯಲ್ಲಿ, 720 ಜನರು ಸಜಿ ಅವರಿಂದ ಈಜು ಕಲಿತರು ಮತ್ತು ಅವರಲ್ಲಿ 130 ಜನರು ಪೆರಿಯಾರ್ ದಾಟಲು ಕಲಿಯುತ್ತಿದ್ದಾರೆ.

Published On - 12:04 pm, Thu, 30 June 22

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್