
ಈಗಿನ ಕಾಲದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿದೆ ಎನ್ನುವ ಮಾತಿದೆ. ಹೀಗಾಗಿ ಇತರರಿಗೆ ಸಹಾಯ ಮಾಡುವುದು ಬಿಡಿ, ಅವರ ಕಷ್ಟಗಳನ್ನು ನೋಡಿಯೂ ನೋಡದಂತೆ ಹೋಗುವವರೇ ಹೆಚ್ಚು. ಆದರೆ ಈ ವ್ಯಕ್ತಿಗಳು ತಮ್ಮ ಒಳ್ಳೆತನದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಒಂದು ಕಾಲು ಕಳೆದುಕೊಂಡ ಶ್ವಾನವು (Dog) ರಸ್ತೆ ದಾಟಲು ಕಷ್ಟ ಪಡುತ್ತಿದೆ. ಈ ಶ್ವಾನಕ್ಕೆ ರಸ್ತೆ ದಾಟಿಸಿ ವ್ಯಕ್ತಿಗಳಿಬ್ಬರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ವ್ಯಕ್ತಿಗಳಿಬ್ಬರ ಒಳ್ಳೆತನವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಹಸನ್ ಸಿಕ್ದರ್ ಡಿಎಸ್ (Hasansikder. ds) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಶೀರ್ಷಿಕೆಯಲ್ಲಿ
ಇಂತಹ ಜನರ ಅಗತ್ಯ ಜಗತ್ತಿಗೆ ಹೆಚ್ಚಿದೆ. ನಡೆಯಲಾರದವರಿಗೆ ಸಹಾಯ ಮಾಡಲು ನಿಲ್ಲುವಂತಹ, ಮೃದು ಹೃದಯದ ವ್ಯಕ್ತಿಗಳು ಇವರು ಎಂದು ಬರೆಯಲಾಗಿದೆ. ಇಲ್ಲಿ ಮೂಕ ಪ್ರಾಣಿಯ ಕಷ್ಟಕ್ಕೆ ಸ್ಪಂದಿಸಿದ ವ್ಯಕ್ತಿಗಳಿಬ್ಬರ ಒಳ್ಳೆತನವನ್ನು ಕಾಣಬಹುದು. ರೆಡ್ ಸಿಗ್ನಲ್ ನಲ್ಲಿ ವಾಹನಗಳು ನಿಂತಿದ್ದು, ಶ್ವಾನವು ರಸ್ತೆ ದಾಟಲು ಕಷ್ಟಪಡುತ್ತಿದೆ. ಇದನ್ನು ಗಮನಿಸಿದ ವ್ಯಕ್ತಿಗಳಿಬ್ಬರು ಈ ಶ್ವಾನವನ್ನು ನಿಧಾನವಾಗಿ ರಸ್ತೆ ದಾಟಿಸಿದ್ದಾರೆ.
ಇದನ್ನೂ ಓದಿ: ಚೇರ್ ಒಳಗೆ ತಲೆ ಸಿಲುಕಿಕೊಂಡು ಒದ್ದಾಡಿದ ಶ್ವಾನ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವ್ಯಕ್ತಿಗಳ ಒಳ್ಳೆತನಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಒಳ್ಳೆಯ ಕೆಲಸ ಸರ್ ಎಂದು ಹೇಳಿದರೆ, ಮತ್ತೊಬ್ಬರು, ಬೇರೆಯವರ ಕಷ್ಟಕ್ಕೆ ಮಿಡಿಯುವ ಇಂತಹ ವ್ಯಕ್ತಿಗಳು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ