ಪರ್ಫ್ಯೂಮ್(Perfume) ಎಂದಾಕ್ಷಣ ಎಲ್ಲರೂ ತಾವು ಬಳಕೆ ಮಾಡುವ ಸುಗಂಧದ್ರವ್ಯದ ಹೆಸರು ಅಥವಾ ಅದರ ಘಮವನ್ನು ಒಮ್ಮೆ ನೆನಪು ಮಾಡಿಕೊಳ್ಳುತ್ತೀರಿ ಅಲ್ಲವೇ?. ಹಾಗೆಯೇ ಬೆವರು ಅಂದಾಕ್ಷಣ ಅಯ್ಯೋ ಚೀ ಎಂದು ಮೂಗು ಮುಚ್ಚಿಕೊಳ್ಳುತ್ತೀರಿ ಎಂಬುದೂ ಸತ್ಯ. ಆದರೆ ಈ ಫರ್ಫ್ಯೂಮ್ನನ್ನು ಬೆವರಿನಿಂದಲೇ ತಯಾರಿಸಲಾಗಿದೆ ಎಂದರೆ ನೀವು ನಂಬ್ತೀರಾ. ಅಯ್ಯೋ ಇದೆಂಥಾ ಕಾಲ ಬಂತಪ್ಪಾ, ಇನ್ನೂ ಪರ್ಫ್ಯೂಮ್ನೂ ಹೊಡೆದುಕೊಳ್ಳುವಂತಿಲ್ಲ ಎಂದು ಮೂಗುಮುರಿಯಬೇಡಿ. ಈ ಸುದ್ದಿ ಸಂಪೂರ್ಣವಾಗಿ ಓದಿ.
ಅನೇಕ ಡಿಯೋಡರೆಂಟ್ಗಳ ಜಾಹೀರಾತುಗಳನ್ನು ನೀವು ಆಗಾಗ ನೋಡಿರಬಹುದು, ಹುಡುಗರು ಪರ್ಫ್ಯೂಮ್ನ್ನು ಹಾಕಿಕೊಂಡರೆ ಸಾಕು ಆ ಘಮ ಹೆಣ್ಣುಮಕ್ಕಳನ್ನು ಆ ಪುರುಷನತ್ತ ಆಕರ್ಷಿಸುವಂತೆ ಮಾಡುತ್ತದೆ. ಹೀಗೆ ಸುಗಂಧ ದ್ರವ್ಯಗಳ ಮಾರಾಟ ಕಂಪನಿಗಳು ಜನರನ್ನು ಆಕರ್ಷಿಸಲು ಇಂತಹ ಹಲವು ಜಾಹೀರಾತುಗಳನ್ನು ಪ್ರಸಾರ ಮಾಡುತ್ತಾರೆ.
ಆದರೆ ಬ್ರೆಜಿಲಿಯನ್ ಮಾಡೆಲ್ ವೆನ್ನಸೆಸ್ಸಾ ಮೌರಾ ಎಂಬುವವರು ಸ್ವೆಟ್ ಪರ್ಫ್ಯೂಮ್ ಬ್ರ್ಯಾಂಡ್ ಒಂದನ್ನು ತೆರೆದಿದ್ದಾರೆ. ಇದಕ್ಕೆ ಬೇಡಿಕೆಗಳು ವೇಗವಾಗಿ ಹೆಚ್ಚುತ್ತಿದೆ.
ಈ ಸುಗಂಧ ದ್ರವ್ಯದಲ್ಲಿ ಬೆವರು ಕೂಡ ಸೇರಿದೆ. ಸಾವೊ ಪಾಲೋದಲ್ಲಿ ವಾಸಿಸುತ್ತಿರುವ ಮಾಡೆಲ್ ವನೆಸ್ಸಾ ಮೌರಾ ಅವರು ಈ ಪರ್ಫ್ಯೂಮ್ ಬ್ರ್ಯಾಂಡ್ ಆರಂಭಿಸಿದ್ದಾರೆ. ಇದರಲ್ಲಿ ಅವರ ಬೆವರೂ ಕೂಡ ಬೆರೆತಿದೆ. ಬ್ರೆಜಿಲಿಯನ್ ಬೆಡಗಿಯೊಬ್ಬರು ತನ್ನ ಬೆವರಿನಿಂದ ತಯಾರಿಸಿದ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!
ಈ ಆಲೋಚನೆ ಹೇಗೆ ಬಂತು?
ಆಕೆಯ ಪ್ರಿಯಕರ ಹಾಗೂ ಮಾಜಿ ಪ್ರಿಯಕರ ಯಾವಾಗಲೂ ನಿನ್ನ ದೇಹದ ವಾಸನೆಯು ನೈಸರ್ಗಿಕವಾಗಿ ಸುಗಂಧಭರಿತವಾಗಿದೆ ಅದು ನಮ್ಮನ್ನು ಆಕರ್ಷಿಸುತ್ತದೆ ಎನ್ನುತ್ತಿದ್ದರಂತೆ, ಈ ವಿಚಾರವನ್ನು ಆಕೆ ಗಂಭೀರವಾಗಿ ತೆಗೆದುಕೊಂಡು ಬೆವರಿನಿಂದಲೇ ಪರ್ಫ್ಯೂಮ್ ತಯಾರಿಸಿದ್ದಾಳೆ.
ಇದಕ್ಕೆ ‘ಫ್ರೆಶ್ ಗಾಡೆಸ್ ಪರ್ಫ್ಯೂಮ್’ ಎಂದು ಹೆಸರಿಟ್ಟಿದ್ದಾಳೆ. ಇದರಲ್ಲಿ ಆಕೆಯ ಬೆವರಿನ ಹೊರತಾಗಿ ಇತರೆ ಪದಾರ್ಥಗಳು ಕೂಡ ಇದೆ. ಬಾಟಲಿಯಲ್ಲಿ 8 ಮಿಲಿ ಬೆವರನ್ನು ಬೆರೆಸಲಾಗುತ್ತದೆ.
ಈ ಪರ್ಫ್ಯೂಮ್ ಬೆಲೆ ಎಷ್ಟು?
ವರದಿ ಪ್ರಕಾರ ಈ ಪರ್ಫ್ಯೂಮ್ ಬೆಲೆ 50 ಎಂಎಲ್ಗೆ 138 ಡಾಲರ್ಗಳು ಅಂದರೆ 11 ಸಾವಿರ ರೂಪಾಯಿಯಂತೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ